Coffee Health Benefits: ದಿನಕ್ಕೆ ಮೂರೇ ಮೂರು ಕಪ್ ಕಾಫಿ ಕುಡಿದರೆ ಏನೆಲ್ಲ ಉಪಯೋಗವಿದೆ ಗೊತ್ತಾ?

Health Tips | ಕಾಫಿ ಕುಡಿಯುವುದರಿಂದ ಸಾಕಷ್ಟು ಲಾಭಗಳೂ ಇವೆ. ದಿನಕ್ಕೆ ಮೂರು ಕಪ್ ಕಾಫಿ ಕುಡಿದರೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.

Coffee Health Benefits: ದಿನಕ್ಕೆ ಮೂರೇ ಮೂರು ಕಪ್ ಕಾಫಿ ಕುಡಿದರೆ ಏನೆಲ್ಲ ಉಪಯೋಗವಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 28, 2021 | 4:11 PM

ನೀವು ಕಾಫಿ ಪ್ರಿಯರಾ? ಬೆಳಗಾದ ಕೂಡಲೇ ಕಾಫಿ ಕುಡಿಯದೆ ದಿನವೇ ಆರಂಭವಾಗುವುದಿಲ್ಲವಾ? ನೀವು ಮಧ್ಯ ರಾತ್ರಿಯಲ್ಲೂ ಎದ್ದು ಕಾಫಿ ಮಾಡಿಕೊಂಡು ಕುಡಿಯುವ ಕೆಟಗರಿಯವರಾ? ಹಾಗಾದರೆ ಇಲ್ಲಿ ಗಮನಿಸಿ. ಕಾಫಿಯಲ್ಲಿ ಕೆಫೇನ್ ಅಂಶವಿರುವುದರಿಂದ ಹೆಚ್ಚು ಕಾಫಿ ಸೇವನೆ ಮಾಡುವುದು ಒಳ್ಳೆಯದಲ್ಲ ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ‘ಅತಿಯಾದರೆ ಅಮೃತವೂ ವಿಷ’ ಎಂಬ ಮಾತು ಕಾಫಿ ವಿಷಯಕ್ಕೂ ಅನ್ವಯವಾಗುತ್ತದೆ. ಹಾಗಂತ ನೀವು ಕಾಫಿ ಸೇವನೆಯನ್ನೇ ಬಿಡಬೇಕೆಂದೇನೂ ಇಲ್ಲ. ಏಕೆಂದರೆ, ಕಾಫಿ ಕುಡಿಯುವುದರಿಂದ ಸಾಕಷ್ಟು ಲಾಭಗಳೂ ಇವೆ. ದಿನಕ್ಕೆ ಮೂರು ಕಪ್ ಕಾಫಿ ಕುಡಿದರೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.

ವಿಶ್ವದಲ್ಲಿ ಕೋಟ್ಯಂತರ ಜನರು ದಿನವೂ ಕಾಫಿ ಕುಡಿಯುತ್ತಾರೆ. ಊಟ, ತಿಂಡಿ ಬಿಟ್ಟು ಕಾಫಿ ಮಾತ್ರ ಕುಡಿದು ಹೊಟ್ಟೆ ತುಂಬಿಸಿಕೊಳ್ಳುವವರು ಕೂಡ ಇದ್ದಾರೆ. ಹೀಗಾಗಿ, ಕಾಫಿಯಲ್ಲಿ ನಾನಾ ಪ್ರಯೋಗಗಳನ್ನು ಕೂಡ ಮಾಡಲಾಗುತ್ತಿದೆ. ಕಾಫಿಯಲ್ಲಿ ಕೆಫೇನ್ ಅಂಶ ಹೆಚ್ಚಾಗಿರುವುದರಿಂದ ಕಾಫಿಯನ್ನು ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ಉತ್ಸಾಹ ಸಿಗುತ್ತದೆ. ಅದೇ ಕಾಫಿಯನ್ನು ಹೆಚ್ಚು ಸೇವಿಸಿದರೆ ಅಡ್ಡ ಪರಿಣಾಮಗಳೂ ಆಗುತ್ತವೆ.

ದಿನಕ್ಕೆ 3 ಕಪ್ ಕಾಫಿ ಕುಡಿದರೆ ಹೃದಯ ಸಂಬಂಧಿ ಸಮಸ್ಯೆಗಳನ್ನು ಶೇ. 14ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಈ ಅಧ್ಯಯನವನ್ನು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿಯ ವಾರ್ಷಿಕ ಸಭೆಯಲ್ಲಿ ಬಹಿರಂಗಪಡಿಸಲಾಗಿದೆ. ಕಾಫಿಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಇದರಲ್ಲಿ ತಿಳಿಸಲಾಗಿದೆ. ಇದಕ್ಕಾಗಿ 4,68,000 ಜನರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಎಂಆರ್​​ಐ ಸ್ಕ್ಯಾನ್ ಮತ್ತು 4.68 ಲಕ್ಷ ಜನರ ಹೇಳಿಕೆಗಳನ್ನು ಆಧರಿಸಿ ದಿನಕ್ಕೆ 3 ಕಪ್​ ಕಾಫಿ ಕುಡಿಯುವವರ ಹೃದಯ ಬೇರೆಯವರಿಗಿಂತ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಕಂಡುಹಿಡಿಯಲಾಗಿದೆ. ಕಾಫಿಯಿಂದ ಇದೊಂದೇ ಲಾಭ ಎಂದುಕೊಂಡರೆ ತಪ್ಪು. ಕಾಫಿ ಸೇವನೆಯಿಂದ ಇನ್ನೂ ಹಲವು ಆರೋಗ್ಯದ ಲಾಭಗಳಿವೆ.

ಮಿತವಾಗಿ ಕಾಫಿ ಸೇವನೆ ಮಾಡಿದರೆ ಆಗ ಅದು ಖಂಡಿತವಾಗಿಯೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೆ 2ರಿಂದ 3 ಕಪ್ ಕಾಫಿ ಸೇವಿಸಿದರೆ ಯಕೃತ್ ಸಮಸ್ಯೆ, ಡಯಾಬಿಟಿಸ್, ಬುದ್ಧಿಮಾಂದ್ಯತೆ ಮುಂತಾದ ಸಮಸ್ಯೆಗಳು ದೂರವಾಗುತ್ತವೆ ಎನ್ನಲಾಗಿದೆ. ಕೆಲವೊಂದು ರೀತಿಯ ಕ್ಯಾನ್ಸರ್​ ರೋಗದ ಪರಿಣಾಮವನ್ನು ಕೂಡ ಕಾಫಿ ಸೇವನೆಯಿಂದ ತಗ್ಗಿಸಲು ಸಾಧ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗೇ, ಬೊಜ್ಜು ಇಳಿಸಲು, ದೇಹದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡಲು, ಕರುಳಿನ ಕ್ಯಾನ್ಸರ್ ಸಮಸ್ಯೆ ಹಾಗೂ ಅಲ್ಜೀಮರ್ ಕಾಯಿಲೆ ನಿಯಂತ್ರಣಕ್ಕೆ ಕೂಡ ಕಾಫಿ ಕುಡಿಯುವದರಿಂದ ಬಹಳ ಉಪಯೋಗವಾಗಲಿದೆ.

ಕಾಫಿಯಲ್ಲಿ ಕೆಲವೊಂದು ಪ್ರಮುಖ ಖನಿಜಾಂಶಗಳಾಗಿರುವಂತಹ ಮೆಗ್ನೇಷಿಯಂ ಮತ್ತು ಪೊಟಾಷಿಯಂ ಇದೆ. ಇವು ನಮ್ಮ ದೇಹವು ಇನ್ಸುಲಿನ್ ಉಪಯೋಗಿಸಲು ನೆರವಾಗುವುದು. ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಿ ಮತ್ತು ಸಿಹಿ ಮತ್ತು ತಿಂಡಿಗೆ ಬಯಕೆಯನ್ನು ಕಡಿಮೆ ಮಾಡುತ್ತದೆ. ಕಾಫಿಯಲ್ಲಿ ಇರುವಂತಹ ಕೆಫಿನ್ ಕೊಬ್ಬಿನ ಕಡಿಮೆ ಮಾಡಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ, ದಿನಕ್ಕೆ 2ರಿಂದ 3 ಕಪ್ ಕಾಫಿ ಕುಡಿದರೆ ಯಾವ ಸಮಸ್ಯೆಯೂ ಇಲ್ಲ. ಯಾವುದೇ ಭಯವಿಲ್ಲದೆ ನಿಮ್ಮ ಕಾಫಿಯನ್ನು ಎಂಜಾಯ್ ಮಾಡಿ.

ಇದನ್ನೂ ಓದಿ: Women Health: ಯಾವುದೇ ಡಯಟ್​ ಇಲ್ಲದೇ ತೂಕ ಇಳಿಸಿಕೊಳ್ಳುವುದು ಹೇಗೆ? ಮಹಿಳೆಯರಿಗಾಗಿ ಇಲ್ಲಿದೆ ಸಲಹೆಗಳು

Health Tips: ಏಲಕ್ಕಿಯಲ್ಲಿದೆ ಮ್ಯಾಜಿಕ್; ಲೈಂಗಿಕ ಸಾಮರ್ಥ್ಯ ಹೆಚ್ಚಾಗಲು ಪುರುಷರು ಹೀಗೆ ಮಾಡಿ

(Coffee Health Benefits: Good News for Coffee Lovers 3 cups of the Coffee could Reduce Risk of Heart Disease)

Published On - 4:06 pm, Sat, 28 August 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ