ಕೃಷ್ಣಾ ಜನ್ಮಾಷ್ಟಮಿಗೆ ರವೆ ಉಂಡೆ ಮಾಡಿ; ಮಾಡುವ ವಿಧಾನ ಸುಲಭವಿದೆ

ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಈ ಲಡ್ಡನ್ನು ಮಾಡಿ ಸವಿಯುತ್ತಾರೆ. ಅದರಂತೆ ಆಗಸ್ಟ್ 30ಕ್ಕೆ ಆಚರಿಸುವ ಕೃಷ್ಣಾ ಜನ್ಮಾಷ್ಟಮಿಗೆ ಲಡ್ಡು ಮಾಡಿ ಸೇವಿಸಿ.

ಕೃಷ್ಣಾ ಜನ್ಮಾಷ್ಟಮಿಗೆ ರವೆ ಉಂಡೆ ಮಾಡಿ; ಮಾಡುವ ವಿಧಾನ ಸುಲಭವಿದೆ
ರವೆ ಉಂಡೆ
Follow us
TV9 Web
| Updated By: sandhya thejappa

Updated on: Aug 28, 2021 | 4:39 PM

ಕೃಷ್ಣಾ ಜನ್ಮಾಷ್ಟಮಿ ಎಂದರೆ ಶ್ರೀ ಕೃಷ್ಣ ಜನಿಸಿದ ದಿನ. ಕೃಷ್ಣ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷವಾಗಿ ಲಡ್ಡು ಅಥವಾ ರವೆ ಉಂಡೆಯನ್ನು ಮಾಡಬಹುದು. ಲಡ್ಡು ತುಂಬಾ ಜನಪ್ರಿಯವಾಗಿರುವ ಸಿಹಿ ತಿಂಡಿ. ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಈ ಲಡ್ಡನ್ನು ಮಾಡಿ ಸವಿಯುತ್ತಾರೆ. ಅದರಂತೆ ಆಗಸ್ಟ್ 30ಕ್ಕೆ ಆಚರಿಸುವ ಕೃಷ್ಣಾ ಜನ್ಮಾಷ್ಟಮಿಗೆ ಲಡ್ಡು ಮಾಡಿ ಸೇವಿಸಿ. ಲಡ್ಡು ಅಂದರೆ ತುಂಬಾ ಇಷ್ಟ, ಆದರೆ ಅದನ್ನು ಮನೆಯಲ್ಲಿ ಮಾಡಲು ವಿಧಾನ ಗೊತ್ತಿಲ್ಲ ಅಂತ ನೀವು ಯೋಚಿಸುತ್ತಿದ್ದೀರಾ? ಚಿಂತೆ ಬಿಡಿ. ಈ ಕೆಳಗೆ ಲಡ್ಡು ಅಥವಾ ರವೆ ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳನ್ನು ಮತ್ತು ಮಾಡುವ ವಿಧಾನವನ್ನು ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು: ತುಪ್ಪ ಗೋಡಂಬಿ- 7 ರಿಂದ 8 ಒಣದ್ರಾಕ್ಷಿ -7 ರಿಂದ 8 ಚಿರೋಟಿ ರವೆ -1 ಕಪ್ ಕೊಬ್ಬರಿ ಪುಡಿ- ಅರ್ಧ ಕಪ್ ಸಕ್ಕರೆ- ಅರ್ಧ ಕಪ್ ಹಾಲು- ½ ಕಪ್ ಏಲಕ್ಕಿ ಪುಡಿ- ½ ಚಮಚ

ಒಂದು ಬಾಣಲಿಗೆ ಎರಡು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ತುಂಡುಗಳು ಮತ್ತು ಒಣದ್ರಾಕ್ಷಿಯನ್ನು ಹುರಿದುಕೊಳ್ಳಿ. ಗೋಡಂಬಿ ಬಣ್ಣ ಬದಲಾಗಿ, ಒಣದ್ರಾಕ್ಷಿ ದಪ್ಪವಾದ ಬಳಿಕ ಅದನ್ನು ಬಾಣಲಿಯಿಂದ ತೆಗೆಯಿರಿ. ಅದೇ ಬಾಣಲಿಗೆ ಮೂರರಿಂದ ನಾಲ್ಕು ಚಮಚ ತುಪ್ಪ ಹಾಕಿ, ಅದರಲ್ಲಿ ಚಿರೋಟಿ ರವೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. 7ರಿಂದ 8 ನಿಮಿಷ ಹುರಿದುಕೊಳ್ಳಬೇಕು. ಅದಕ್ಕೆ ಅರ್ಧ ಕೊಬ್ಬರಿ ತುರಿಯನ್ನು ಅಥವಾ ಕೊಬ್ಬರಿಯನ್ನು ತುರಿದು ಅದನ್ನು ಪುಡಿ ಮಾಡಿ ಹಾಕಬೇಕು. ಕೊಬ್ಬರಿಯ ಹಸಿ ವಾಸನೆ ಹೋಗುವವರೆಗೆ ರವೆಯೊಂದಿಗೆ ಹುರಿಯಿರಿ.

ನಂತರ ಹುರಿದುಕೊಂಡ ರವೆಗೆ ಸಕ್ಕರೆ ಹಾಕಬೇಕು. ರವೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಈ ಮಿಶ್ರಣಕ್ಕೆ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಮತ್ತು ಹುರಿದುಕೊಂಡ ಗೋಡಂಬಿ, ಒಣದ್ರಾಕ್ಷಿಯನ್ನು ಸೇರಿಸಿ. ಹಾಗೇ ಅದಕ್ಕೆ ಕೊನೆಯದಾಗಿ ಎರಡರಿಂದ ಮೂರು ಚಮಚ ತುಪ್ಪು ಹಾಕಿ ಮಿಶ್ರಣ ಮಾಡಿ. ಈ ಎಲ್ಲ ಸಾಮಾಗ್ರಿಗಳನ್ನು ಮಿಶ್ರಣ ಮಾಡುವಾಗ ಉರಿ ಸಣ್ಣದಾಗಿರಬೇಕು. ಉಂಡೆ ಕಟ್ಟಲು ಸಾಧ್ಯವಿದೆ ಎಂದಾಗ ಬೆಂಕಿಯ ಉರಿಯನ್ನು ನಿಲ್ಲಿಸಬೇಕು. 10 ನಿಮಿಷದ ಬಳಿಕ ಉಂಡೆ ಮಾಡಿ. ಉಂಡೆ ಮಾಡಿದ ನಂತರ ಅದನ್ನು ಕೊಬ್ಬರಿ ಪುಡಿ ಮೇಲೆ ಹಾಕಿ ಹೊರಳಿಸಬೇಕು.

ಇದನ್ನೂ ಓದಿ

Health Tips: ಕಾಲುಗಳ ಊತ ಈ ಕಾಯಿಲೆಗಳ ಲಕ್ಷಣಗಳಾಗಿರುತ್ತದೆ; ನಿರ್ಲಕ್ಷಿಸುವ ಮುನ್ನ ಒಮ್ಮೆ ಯೋಚಿಸಿ

Health Tips: ಯಕೃತ್ತಿನ ಆರೋಗ್ಯ ಕಾಪಾಡಲು ಈ ಕೆಲವು ಆಹಾರ ಪದಾರ್ಥಗಳ ಸೇವನೆ ಮುಖ್ಯ

(Method of rava laddu for Krishna janmasthami special)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ