Yoga Malike: ಬದುಕಿಗಾಗಿ ಯೋಗ; ಮಕ್ಕಳಿಗೆ ಭಾರತೀಯ ಶೈಲಿಯ ಶೌಚಾಲಯದ ರೂಢಿ ಕಲಿಸಿ

ಮಕ್ಕಳು ಅರ್ಧರಾತ್ರಿಯವರೆಗೆ ಹೋಂವರ್ಕ್ ಎಂದು ಮಲಗದಿರುವುದು ಒಳ್ಳೆಯದಲ್ಲ. ಬದಲಾಗಿ, ಬೇಗ‌ ಮಲಗಿ, ಬೆಳಿಗ್ಗೆ ಬೇಗ ಎದ್ದು ಹೋಂವರ್ಕ್ ಮಾಡುವುದು ಮನಸ್ಸಿಗೆ, ದೇಹಕ್ಕೆ ಎರಡಕ್ಕೂ ಒಳ್ಳೆಯದು.

Yoga Malike: ಬದುಕಿಗಾಗಿ ಯೋಗ; ಮಕ್ಕಳಿಗೆ ಭಾರತೀಯ ಶೈಲಿಯ ಶೌಚಾಲಯದ ರೂಢಿ ಕಲಿಸಿ
ಮಕ್ಕಳಿಗಾಗಿ ಯೋಗ
Follow us
TV9 Web
| Updated By: preethi shettigar

Updated on: Aug 29, 2021 | 8:00 AM

ವೃತ್ತಿಪರ ಯೋಗ ಶಿಕ್ಷಕ, ಪರಿಣಿತ ನಾಗೇಂದ್ರ ಗದ್ದೆಮನೆ ಅವರು ಟಿವಿ9 ಕನ್ನಡ ಡಿಜಿಟಲ್​ಗಾಗಿ ಪ್ರಸ್ತುಪಡಿಸುತ್ತಿರುವ. ‘ಬದುಕಿಗಾಗಿ ಯೋಗ’  ಸರಣಿಯ ಈವಾರದ ‘ಬದುಕಿಗಾಗಿ ಯೋಗ’ ಅಂಕಣ ನಿಮ್ಮ ಓದಿಗೆ ಇಲ್ಲಿದೆ. 

ಮಕ್ಕಳಿಗೆ ಯೋಗಾಭ್ಯಾಸವು ಅತ್ಯವಶ್ಯಕ ಎಂಬುದನ್ನು ವಿವರಿಸುತ್ತ, ಹಿಂದಿನ ಲೇಖನದ ಮುಂದಿನ ಭಾಗವಾಗಿ ಇನ್ನಷ್ಟು ಅಂಶಗಳನ್ನು, ಯೋಗಾಸನಗಳನ್ನು ಈ ಭಾಗದಲ್ಲಿ ನೋಡೋಣ. ಈ ಕಾಲದಲ್ಲಿ ಮನೆಗಳಲ್ಲಿ ಊಟಕ್ಕೆ ಟೇಬಲ್ ವ್ಯವಸ್ಥೆ, ಶಾಲೆಗಳಲ್ಲಿ ಪ್ರತಿ ತರಗತಿಯಲ್ಲಿಯೂ ಟೇಬಲ್, ಕುರ್ಚಿಗಳ ವ್ಯವಸ್ಥೆ, ಕಮೋಡ್ ಶೌಚಾಲಯಗಳು, ಒಟ್ಟಿನಲ್ಲಿ ಎಲ್ಲ ಕಡೆ ಎತ್ತರದಲ್ಲಿಯೇ ಕುಳಿತುಕೊಳ್ಳುವ ಅಭ್ಯಾಸವಿದೆ. ನೆಲದ ಮೇಲೆ ಕುಳಿತುಕೊಳ್ಳುವುದು, ಭಾರತೀಯ ಶೌಚಾಲಯದ ಅಭ್ಯಾಸವಿಲ್ಲದಿರುವುದು ಗಂಭೀರ ವಿಷಯವಲ್ಲ ಎಂದು ತಿಳಿದುಕೊಂಡರೆ ಅದು ಖಂಡಿತ ತಪ್ಪು. ಇಂತಹ ಚಿಕ್ಕ ಚಿಕ್ಕ ಬದಲಾವಣೆಗಳೇ ಮುಂದೆ ಜೀವನವನ್ನು ಕಾಡುತ್ತವೆ. ಎಷ್ಟೋ ಮಕ್ಕಳಿಗೆ ನೆಲದ ಮೇಲೆ ಕುಳಿತು ಊಟ-ತಿಂಡಿ ಮಾಡುವುದು ಕಷ್ಟ. ತಟ್ಟೆಯನ್ನು ನೆಲದಲ್ಲಿಟ್ಟು, ಚಕ್ಕಳ ಬಕ್ಕಳ ಹಾಕಿಕೊಂಡು ಕುಳಿತರೆ, ಒಂದೋ ಬೆನ್ನು ಗೂನಾಗುವುದು, ಬೆನ್ನು ನೇರ ಮಾಡಿದರೆ ಮಂಡಿ ಮೇಲೇಳುವುದು. ಅದೇ ತಟ್ಟೆಗೆ ಕೈಹಾಕಲು ಹೋದರೆ ಮಂಡಿ ಮೇಲೆ, ಬೆನ್ನು ಗೂನಾಗುವುದು. ಪರಿಸ್ಥಿತಿ ಹೀಗಾದರೆ ಮುಂದೆ ದೊಡ್ಡವರಾದ ಮೇಲೆ ದುಷ್ಟರಿಣಾಮವನ್ನು ಅವರು ಅನುಭವಿಸುತ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬಂತೆ, ಚಿಕ್ಕ ವಯಸ್ಸಿನಲ್ಲಿರುವಾಗ ಇವುಗಳನ್ನೆಲ್ಲ ಅಭ್ಯಸಿಸಿದರೆ, ದೊಡ್ಡವರಾದ ಮೇಲೆ ಸಮಸ್ಯೆಗಳು ಕಡಿಮೆಯಾಗುತ್ತವೆ.

ಭಾರತೀಯ ಶೌಚಾಲಯ ವ್ಯವಸ್ಥೆಯು ಸಂಪೂರ್ಣವಾಗಿ ವೈಜ್ಞಾನಿಕವಾಗಿದೆ. ಏಕೆಂದರೆ ವೆಸ್ಟರ್ನ್ ಕಮೋಡ್ ಮೇಲೆ ಕುಳಿತಾಗ ಗುದನಾಳವು ಸಂಪೂರ್ಣವಾಗಿ ತೆರೆಯಲು ಅವಕಾಶವಿರುವುದಿಲ್ಲ ಮತ್ತು ಒತ್ತಡವನ್ನು ಹೇರಿದಾಗ ಮಾತ್ರ ಮಲವು ಹೊರಬರುವುದು. ಆದರೆ‌ ಭಾರತೀಯ ಶೌಚಾಲಯ ವ್ಯವಸ್ಥೆಯಲ್ಲಿ ಕೆಳಗೆ ಕೂರುವುದರಿಂದ ಗುದನಾಳ, ಗುದದ್ವಾರಗಳು ಸಂಪೂರ್ಣವಾಗಿ ತೆರೆದುಕೊಳ್ಳುತ್ತವೆ ಹಾಗೂ ಒತ್ತಡವಿಲ್ಲದೇ ಮಲವು ಹೊರಬರುವುದು. ವೆಸ್ಟರ್ನ್ ಕಮೋಡ್ ಮೂಲವ್ಯಾಧಿ ಹಾಗೂ ಇತರೇ ರೋಗಗಳಿಗೆ ಕಾರಣವಾಗಬಲ್ಲದು. ಕಾರಣವೇನೆಂದರೆ, ವರ್ಷಗಳ ಕಾಲ ಪ್ರತಿದಿನ ಕಮೋಡ್ ಬಳಸುವುದರಿಂದ ಸಂಪೂರ್ಣವಾಗಿ ಮಲವು ಹೊರಬರದಿರುವುದಿಲ್ಲ. ಮಲವು ಗುದನಾಳದಲ್ಲಿ ಶೇಖರಿಸಲ್ಪಡುವುದು. ಇದರಿಂದ ಮಕ್ಕಳು ವಯಸ್ಸಾದ‌ ಮೇಲೆ ಬೆನ್ನು ನೋವು, ಗಂಟು ನೋವು‌ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕೆಳಗೆ ಕುಳಿತು ಊಟ ಮಾಡುವುದು, ನಿಂತು ನೀರು ಕುಡಿಯದಿರುವುದು, ಭಾರತೀಯ ಶೌಚಾಲಯ ಶೈಲಿಯನ್ನು ಬಳಸುವುದು ಎಲ್ಲವೂ ಭಾಗಗಳೇ ಆಗುತ್ತವೆ.

ಮಕ್ಕಳಿಗೆ ಯೋಗಾಸನಗಳು • ಪ್ರತಿದಿನ 13 ಸೂರ್ಯನಮಸ್ಕಾರಗಳ ಅಭ್ಯಾಸ ಮಾಡುವುದು ದೇಹದ ನೂರಕ್ಕೂ ಹೆಚ್ಚು ಮಾಂಸಖಂಡಗಳನ್ನು ಸಕ್ರಿಯಗೊಳಿಸಲು ಸಹಾಯಕಾರಿ. • ಅತಿಯಾಗಿ ಮೈಬಗ್ಗಿಸಿ, ದಂಡಿಸುವ ಅವಶ್ಯಕತೆಯಿಲ್ಲ. ಅದನ್ನು ಸ್ಪರ್ಧೆಗೆ ಭಾಗವಹಿಸುವವರು ಮಾಡುತ್ತಾರೆ. • ಓಂಕಾರದ ದೀರ್ಘ ಉಚ್ಚಾರಣೆ. ಓಂಕಾರ ಶ್ರವಣ ಹಾಗೂ ಉಚ್ಚಾರಣೆಯು ದೇಹದಲ್ಲಿ ಧನಾತ್ಮಕ ಕಂಪನವನ್ನು ಸೃಷ್ಡಿಸುತ್ತದೆ. ಇದು ಮನಸ್ಸಿನಲ್ಲಿ ಹುಟ್ಟುವ ಋಣಾತ್ಮಕ ಚಿಂತನೆಗಳು ದೂರ ಮಾಡುತ್ತದೆ. • ನಾಡಿಶೋಧನ ಪ್ರಾಣಾಯಾಮವು ಮನಸ್ಸನ್ನು ಶಾಂತವಾಗಿಡಲು‌ ಸಹಾಯಕಾರಿ.

ಮಕ್ಕಳು ಅರ್ಧರಾತ್ರಿಯವರೆಗೆ ಹೋಂವರ್ಕ್ ಎಂದು ಮಲಗದಿರುವುದು ಒಳ್ಳೆಯದಲ್ಲ. ಬದಲಾಗಿ, ಬೇಗ‌ ಮಲಗಿ, ಬೆಳಿಗ್ಗೆ ಬೇಗ ಎದ್ದು ಹೋಂವರ್ಕ್ ಮಾಡುವುದು ಮನಸ್ಸಿಗೆ, ದೇಹಕ್ಕೆ ಎರಡಕ್ಕೂ ಒಳ್ಳೆಯದು. ಬ್ರಾಹ್ಮೀ ಮೂಹುರ್ತವು ಬಹಳ ಒಳ್ಳೆಯದು, ಈ ಸಮಯದಲ್ಲಿ ಓದಿದರೆ ಬೇಗ ತಲೆಗೆ ಹತ್ತುವುದು. ಏಕೆಂದರೆ ಆ ಸಮಯವು ಪ್ರಶಾಂತವಾಗಿರುತ್ತದೆ‌. ಇವುಗಳನ್ನು ಮಕ್ಕಳು ಪಾಲಿಸಿದರೆ, ಪಾಲಕರು ಸಹಕರಿಸಿದರೆ ಮುಂದಿನ ಜೀವನ ಸುಖಮಯವಾಗಿರುವುದು.

ಲೇಖಕರ ಪರಿಚಯ ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರಾದ ನಾಗೇಂದ್ರ ಗದ್ದೇಮನೆ ಅವರು ವಿಯೆಟ್ನಾಂನಲ್ಲಿ ವೃತ್ತಿಪರ ಯೋಗ ಶಿಕ್ಷಕರು. ಯೋಗದಲ್ಲಿ ಆಳವಾದ ನಿಪುಣತೆ ಪಡೆದ ಅವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ, ಯಜುರ್ವೇದ ಸಂಹಿತಾಂತ ಅಧ್ಯಯನವನ್ನೂ ಮಾಡಿದ್ದಾರೆ. ಪುರಾತನ ಯೋಗವನ್ನು ಹೊಸ ತಲೆಮಾರಿಗೆ, ಅದರಲ್ಲೂ ವಿದೇಶದಲ್ಲಿ ಪ್ರಚುರಪಡಿಸುತ್ತಿರುವ ಹೆಮ್ಮೆ ನಾಗೇಂದ್ರ ಅವರದು. ಜತೆಗೆ ಎಲೆಕ್ಟ್ರಾನಿಕ್ ಗಾಡ್ಜೆಟ್​, ಆಟೋಮೊಬೈಲ್ ಕ್ಷೇತ್ರದಲ್ಲೂ ಅಪಾರ ಆಸಕ್ತಿ ಹೊಂದಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ಯೂಟ್ಯೂಬ್​ನಲ್ಲಿ NAGENDRA GADDEMANE ಎಂಬ ಹೆಸರಿನ ವ್ಲೋಗ್​ನ್ನು ಸಹ ನಡೆಸುತ್ತಿದ್ದಾರೆ

ಇದನ್ನೂ ಓದಿ: 

Yoga Malike: ದಿನವಿಡೀ ದೈಹಿಕ ಶ್ರಮದ ಕೆಲಸ ಮಾಡುವವರಿಗೆ ಯೋಗ ಅವಶ್ಯವೇ?

Yoga Malike: ಗರ್ಭಿಣಿಯರು ಯೋಗಾಭ್ಯಾಸವನ್ನು ಮಾಡಬಹುದೇ?

(Yoga Malike Yoga for Life health tips teach Indian style toilet usage for children)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ