Yoga Malike: ದಿನವಿಡೀ ದೈಹಿಕ ಶ್ರಮದ ಕೆಲಸ ಮಾಡುವವರಿಗೆ ಯೋಗ ಅವಶ್ಯವೇ?

ದೇಹದ ಪ್ರತಿಯೊಂದು ಭಾಗಕ್ಕೂ ಭಾಗಶಃ ವಿಶ್ರಾಂತಿಯನ್ನು ಯೋಗಾಭ್ಯಾಸದ ಮೂಲಕ ನೀಡಬಹುದು. ಲಘು ವಿಶ್ರಾಂತಿ ಕ್ರಮ, ದೀರ್ಘ ವಿಶ್ರಾಂತಿ ಕ್ರಮ ಹೀಗೆ ಮನಸ್ಸು ಹಾಗೂ ದೇಹ ಎರಡಕ್ಕೂ ವಿಶ್ರಾಂತಿಯನ್ನು ನೀಡುವ ಕ್ರಿಯೆಗಳು.

Yoga Malike: ದಿನವಿಡೀ ದೈಹಿಕ ಶ್ರಮದ ಕೆಲಸ ಮಾಡುವವರಿಗೆ ಯೋಗ ಅವಶ್ಯವೇ?
ಯೋಗ ಮಾಲಿಕೆ
Follow us
Guruganesh Bhat
| Updated By: guruganesh bhat

Updated on:Aug 28, 2021 | 11:37 PM

ನಾನು ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತೇನೆ. ದೈಹಿಕ ಶ್ರಮದ ಕೆಲಸ ನನ್ನದು. ಹಾಗಾದರೆ ನಾನೇಕೆ ಯೋಗ ಮಾಡಬೇಕು ? ದಿನವಿಡೀ ದೈಹಿಕ ಶ್ರಮದ ಕೆಲಸ ಮಾಡುವ ನಾನು ಯಾವ ರೀತಿಯ ಯೋಗ ಮಾಡಬೇಕು ? ಈ ಪ್ರಶ್ನೆಯು ಬಹಳ ಜನರಲ್ಲಿ ಮೂಡಿರಬಹುದು. ಅದರಲ್ಲೂ ಹಳ್ಳಿಯಲ್ಲಿ ವಾಸವಿರು ಜನರು, ರೈತರಲ್ಲಿ ಇದು ಸಾಮಾನ್ಯ. ಇಡೀ ದಿನ ಮೈಬಗ್ಗಿಸಿ ಕೆಲಸ ಮಾಡುತ್ತೇನೆ, ಹಾಗಾಗಿ ನನಗೆ ಯಾಕೆ ಯೋಗ, ಪ್ರಾಣಾಯಾಮಗಳೆಲ್ಲ? ಎಂದು ಹಲವರು  ಪ್ರಶ್ನಿಸುತ್ತಾರೆ. ವೃತ್ತಿಪರ ಯೋಗ ಶಿಕ್ಷಕ, ಪರಿಣಿತ ನಾಗೇಂದ್ರ ಗದ್ದೆಮನೆ ಅವರು ಟಿವಿ9 ಕನ್ನಡ ಡಿಜಿಟಲ್​ಗಾಗಿ ಪ್ರಸ್ತುಪಡಿಸುತ್ತಿರುವ. ‘ಬದುಕಿಗಾಗಿ ಯೋಗ’  ಸರಣಿಯ ಈವಾರದ ಅಂಕಣದಲ್ಲಿ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.

ಶ್ರಮದ ಕೆಲಸ, ಕೃಷಿ, ನಗರಗಳಲ್ಲಿ ಕಾರ್ಖಾನೆಗಳಲ್ಲಿ ದೇಹ ದಂಡಿಸಿ ಮಾಡುವ ಕಾರ್ಯಗಳೆಲ್ಲವೂ ದೇಹವನ್ನೇನೋ ಗಟ್ಟಿಗೊಳಿಸಬಹುದು. ಇದರರ್ಥ ಇವರೆಲ್ಲರೂ ಆರೋಗ್ಯವಂತರೆಂದಲ್ಲ. ನಾವು ಸೇವಿಸುವ ಆಹಾರ, ವೃತ್ತಿ, ದಿನಚರಿ ಎಲ್ಲವೂ ನಮ್ಮ ಮನಸ್ಸು ಹಾಗೂ ದೇಹದ ಮೇಲೆ ಪರಿಣಾಮವನ್ನು ಬೀರುವುದು. ಇದನ್ನು ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಸೊಗಸಾಗಿ ವರ್ಣಿಸಿದ್ದಾನೆ.

ಮನುಷ್ಯನಲ್ಲಿ ಮೂರು ಗುಣಗಳಿವೆ. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು. ನಾವು ಸೇವಿಸುವ ಆಹಾರವು ಕೂಡ ಈ ಗುಣಗಳ ವರ್ಧನೆ ಅಥವಾ ಕುಂಠಿತಕ್ಕೆ ಕಾರಣವಾಗುತ್ತದೆ. ಸಾತ್ವಿಕಗುಣವುಳ್ಳವರಿಗೆ ಪ್ರಿಯವಾದಂತಹ ಆಹಾರ ಪದಾರ್ಥಗಳು ಆಯಸ್ಸನ್ನು ವರ್ಧಿಸುವ, ಜೀವನವನ್ನು ಪರಿಶುದ್ಧಗೊಳಿಸುವ ಹಾಗೂ ಹೃದಯಕ್ಕೆ ಪ್ರಿಯವಾದ ಆಹಾರ ಪದಾರ್ಥಗಳು‌. ಬಹು ಕಹಿ, ಹುಳಿ, ಉಪ್ಪು, ಅತಿ ಉಷ್ಣ, ಅತಿ ಖಾರವಾದ ಆಹಾರಗಳು ರಾಜಸ ಸ್ವಭಾವ ಅಥವಾ ಗುಣ ಉಳ್ಳವರಿಗೆ ಪ್ರಿಯವಾಗುತ್ತವೆ. ಈ ರೀತಿಯ ಆಹಾರಗಳು ಕೋಪ, ದುಃಖ, ಶೋಕ ಹಾಗು ಹಲವಾರು ರೋಗಗಳಿಗೆ ಕಾರಣವಾಗುತ್ತವೆ.

ಮನಸಿನ ಸಮತೋಲನಕ್ಕೆ.. ಕೆಲವು ಗಂಟೆಗಳ ಮೊದಲೇ ಮಾಡಿಟ್ಟಿರುವಂತಹ ಪದಾರ್ಥ, ರುಚಿ ಇಲ್ಲದಿರುವ, ಕೆಡುತ್ತಿರುವ ಅಥವಾ ಹಳಸಿದ, ಬೇರೆಯವರು ತಿಂದು ಬಿಟ್ಟಂತಹ ತಿನಿಸುಗಳು ತಾಮಸ ಸ್ವಭಾವದವರಿಗೆ ಇಷ್ಟವಾಗುತ್ತವೆ. ತಾಮಸ ಗುಣವೆಂದರೆ ಜಡತ್ವ, ಆಲಸ್ಯ, ಉದಾಸೀನತೆ, ಅಜ್ಞಾನ ಇವುಗಳು. ಇವುಗಳ ಪ್ರಮಾಣದ ಮೇಲೆ ಈ ವ್ಯಕ್ತಿಯು ಯಾವ ಗುಣದವನು/ಳು ಎಂಬುದು ನಿಶ್ಚಯವಾಗುತ್ತದೆ. ಹಾಗಾಗಿ ಮನಸ್ಸು ಮತ್ತು ದೇಹವನ್ನು ಸಮತೋಲನವಾಗಿಡಲು ಯಾವ ಆಹಾರ ಪದಾರ್ಥಗಳು ಮುಖ್ಯವೋ ಅವನ್ನು ಸೇವಿಸಬೇಕು. ಆಹಾರದ ಕೆಲಸವೇನು? ನಮ್ಮ ಆಯಸ್ಸನ್ನು ವರ್ಧಿಸುವುದು, ಮನಸ್ಸನ್ನು ಪರಿಶುದ್ಧಗೊಳಿಸುವುದು ಮತ್ತು ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುವುದು. ಹೀಗಾಗಿ ಆಹಾರವೂ ಕೂಡ ಮನುಷ್ಯನ ಜೀವನದಲ್ಲಿ ಮನಸ್ಸು ಮತ್ತು ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಬಹುಮುಖ್ಯ ಪಾತ್ರವಾಗುತ್ತದೆ.

ದೈಹಿಕ ಪರಿಶ್ರಮಿಗಳಿಗೆ ಯೋಗವು ಹೇಗೆ ಉಪಯೋಗಕಾರಿ? ದೈಹಿಕ ಪರಿಶ್ರಮಿಗಳು ದಿನದ ಹತ್ತು ಹನ್ನೆರಡು ಗಂಟೆಗಳ ಕಾಲ ಮೈಬಗ್ಗಿಸಿ ದುಡಿಯುತ್ತಾರೆ. ಹಾಗಾಗಿ ದೇಹದ ಪ್ರತಿಯೊಂದು ಭಾಗಕ್ಕೂ ವಿಶ್ರಾಂತಿ ಬೇಕು. ಇಲ್ಲಿ ಯೋಗವು ಬಹಳ ಸಹಕಾರಿಯಾಗುತ್ತದೆ. ದೇಹದ ಪ್ರತಿಯೊಂದು ಭಾಗಕ್ಕೂ ಭಾಗಶಃ ವಿಶ್ರಾಂತಿಯನ್ನು ಯೋಗಾಭ್ಯಾಸದ ಮೂಲಕ ನೀಡಬಹುದು. ಲಘು ವಿಶ್ರಾಂತಿ ಕ್ರಮ, ದೀರ್ಘ ವಿಶ್ರಾಂತಿ ಕ್ರಮ ಹೀಗೆ ಮನಸ್ಸು ಹಾಗೂ ದೇಹ ಎರಡಕ್ಕೂ ವಿಶ್ರಾಂತಿಯನ್ನು ನೀಡುವ ಕ್ರಿಯೆಗಳು.

ಶಕ್ತಿವರ್ಧಕ, ವಿಶ್ರಾಂತಿದಾಯಕ ನಿದ್ರಾಹೀನತೆ, ಪರಿಶ್ರಮದ ಕೆಲಸವಾದ್ದರಿಂದ ಕುತ್ತಿಗೆ, ಬೆನ್ನು, ಗಂಟು ನೋವು ಹೀಗೆ ಹಲವಾರು ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಯೋಗವು ಶಕ್ತಿವರ್ಧಕ ಹಾಗೂ ವಿಶ್ರಾಂತಿದಾಯಕ ಎರಡೂ ಹೌದು. ಬೆಳಿಗ್ಗೆ ಯೋಗಾಭ್ಯಾಸ ಮಾಡಿದರೆ ಇಡೀ ದಿನ ಸಕ್ರಿಯರಾಗಿ ಕೆಲಸವನ್ನು ಮಾಡಬಹುದು. ಇವತ್ತೇನೋ ಕೆಲಸ ಮಾಡಿ ಬೆನ್ನು ನೋವು ಎಂದು ಯಾವುದೋ ಮಾತ್ರೆಯನ್ನು ಸೇವಿಸಿ ಮಲಗಿದರೆ ಸಮಸ್ಯೆಯು ಉಲ್ಬಣವಾಗುವುದೇ ಹೊರತು ಕಡಿಮೆಯಾಗುವುದಿಲ್ಲ. ಸೇವಿಸುವ ಮಾತ್ರೆಗಳು ಮತ್ತಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತವೆ. ಯೋಗದಲ್ಲಿ ದೇಹದ ಪ್ರತಿಯೊಂದು ಭಾಗ, ರೋಗಗಳ ನಿವಾರಣೆಗೂ ಆಸನಗಳು, ಕ್ರಿಯೆಗಳು, ಪ್ರಾಣಾಯಾಮ ಹೀಗೆ ಮಾರ್ಗಗಳಿವೆ. ಕೋಪ, ಆತಂಕ, ಮಾನಸಿಕ ಒತ್ತಡ ಇಂತಹ ಸಮಸ್ಯೆಗಳಿಗೆ ಪ್ರಾಣಾಯಾಮವು ಬಹಳ  ಪರಿಣಾಮಕಾರಿಯಾಗುತ್ತದೆ.  ದೀರ್ಘಕಾಲದವರೆಗೆ ಅಭ್ಯಾಸ ಮಾಡಿದವರಿಗೆ ಇದರ ಉಪಯೋಗ ಬಹಳ ಚೆನ್ನಾಗಿ ತಿಳಿದಿರುತ್ತದೆ.

ದೇಹ ದಂಡಿಸಿ ಕೆಲಸ ಮಾಡುವವರು ಸಾಮಾನ್ಯವಾಗಿ ಮದ್ಯಸೇವನೆ, ತಂಬಾಕು ಸೇವನೆ, ಧೂಮಪಾನದಂತಹ ದುಶ್ಚಟಗಳನ್ನು ರೂಢಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದರಿಂದ ಹೊರಬರುವುದು ಕಷ್ಷವಾದರೂ ಖಂಡಿತ ಸಾಧ್ಯ. ಇದರಿಂದ ಹೊರಬರುವ ಪ್ರಯತ್ನವಾಗಬೇಕು. ಇಲ್ಲಿಯೂ ಯೋಗವು ಸಹಕಾರಿಯಾಗುತ್ತದೆ. ಹೀಗೆ ಅನೇಕಾನೇಕ ಸಂಗತಿಗಳಿಂದಾಗಿ ಯೋಗವು ಬಹಳ ಮುಖ್ಯ ಅಂಗವಾಗಬೇಕು, ಎಲ್ಲರ ಜೀವನದಲ್ಲಿಯೂ.

ಲೇಖಕರ ಪರಿಚಯ ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರಾದ ನಾಗೇಂದ್ರ ಗದ್ದೇಮನೆ ಅವರು ವಿಯೆಟ್ನಾಂನಲ್ಲಿ ವೃತ್ತಿಪರ ಯೋಗ ಶಿಕ್ಷಕರು. ಯೋಗದಲ್ಲಿ ಆಳವಾದ ನಿಪುಣತೆ ಪಡೆದ ಅವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ, ಯಜುರ್ವೇದ ಸಂಹಿತಾಂತ ಅಧ್ಯಯನವನ್ನೂ ಮಾಡಿದ್ದಾರೆ. ಪುರಾತನ ಯೋಗವನ್ನು ಹೊಸ ತಲೆಮಾರಿಗೆ, ಅದರಲ್ಲೂ ವಿದೇಶದಲ್ಲಿ ಪ್ರಚುರಪಡಿಸುತ್ತಿರುವ ಹೆಮ್ಮೆ ನಾಗೇಂದ್ರ ಅವರದು. ಜತೆಗೆ ಎಲೆಕ್ಟ್ರಾನಿಕ್ ಗಾಡ್ಜೆಟ್​, ಆಟೋಮೊಬೈಲ್ ಕ್ಷೇತ್ರದಲ್ಲೂ ಅಪಾರ ಆಸಕ್ತಿ ಹೊಂದಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ಯೂಟ್ಯೂಬ್​ನಲ್ಲಿ NAGENDRA GADDEMANE ಎಂಬ ಹೆಸರಿನ ವ್ಲೋಗ್​ನ್ನು ಸಹ ನಡೆಸುತ್ತಿದ್ದಾರೆ.

ಇದನ್ನೂ ಓದಿ: 

Yoga: ಬದುಕಿಗಾಗಿ ಯೋಗ: ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದು ಹೇಗೆ?

ವಿಯೆಟ್ನಾಂ ಯೋಗ: ಬುದ್ಧನ ನಾಡಲ್ಲಿ ಯೋಗ ಕಲಿಸುವ ಕರ್ನಾಟಕದ ಯೋಗ ಶಿಕ್ಷಕರು ಬರೆಯುತ್ತಾರೆ..

(Is yoga necessary for those who physically work hard throughout the day here is the expert writing in Kannada)

Published On - 6:27 am, Sun, 8 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್