ದೇಹದ ತೂಕ ಇಳಿಸುವವರು ಈ ಪಾನೀಯಗಳನ್ನು ಕುಡಿಯಿರಿ

ದೇಹದ ತೂಕ ಇಳಿಸುವವರು ಪಾನೀಯಗಳನ್ನು ಹೆಚ್ಚು ಕುಡಿಯಬೇಕು. ಪಾನೀಯಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ದೇಹದ ತೂಕ ಇಳಿಸುವವರು ಈ ಪಾನೀಯಗಳನ್ನು ಕುಡಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on:Aug 28, 2021 | 3:06 PM

ಅತಿಯಾದ ದಪ್ಪ ಸೌಂದರ್ಯವನ್ನು ಕಡಿಮೆಗೊಳಿಸುತ್ತದೆ. ಇದರ ಬಗ್ಗೆ ಅನುಮಾನವಿಲ್ಲ. ಆಹಾರದ ಪದ್ಧತಿ ಸರಿ ಇಲ್ಲದಿದ್ದಾಗ ದಪ್ಪ ಆಗುವುದು ಸಹಜ. ದೇಹದ ತೂಕ ಹೆಚ್ಚಾದಂತೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗುತ್ತದೆ. ಹೀಗಾಗಿ ಆಹಾರ ಕ್ರಮದ ಬಗ್ಗೆ ಗಮನಹರಿಸಬೇಕು. ಬಳ್ಳಿಯಂತೆ ಬಳಕುವ ಸೊಂಟ ಇರಬೇಕು ಅಂತ ಹುಡುಗಿಯರು ಪಡುವ ಪರದಾಟ ಅಷ್ಟಿಷ್ಟಲ್ಲ. ಸ್ವಲ್ಪ ಜಾಸ್ತಿ ಊಟ ಮಾಡಿದರೆ ಎಲ್ಲಿ ದಪ್ಪ ಆಗುತ್ತೇವೆ ಅಂತ ಹೊಟ್ಟೆ ತುಂಬಾ ಊಟನೂ ಮಾಡಲ್ಲ. ಯಾವಾಗಲೂ ಡೈಯಟ್, ವರ್ಕ್ಔಟ್ ಅಂತಾ ಇರುತ್ತಾರೆ.

ದೇಹದ ತೂಕ ಇಳಿಸುವವರು ಪಾನೀಯಗಳನ್ನು ಹೆಚ್ಚು ಕುಡಿಯಬೇಕು. ಪಾನೀಯಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಪದೇ ಪದೇ ಆಹಾರವನ್ನು ಸೇವಿಸುವ ಅನಿವಾರ್ಯತೆಯನ್ನು ಕೆಲ ಪಾನೀಯಗಳು ಕಡಿಮೆಗೊಳಿಸುವ ಮೂಲಕ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

* ನೀರು  ಪ್ರತಿದಿನ ಕನಿಷ್ಠ 3ರಿಂದ 4 ಲೀಟರ್ ನೀರು ಕುಡಿಯಬೇಕು. ಹಾಗಂತ ವೈದ್ಯರೇ ಹೇಳುತ್ತಾರೆ. ಆದರೆ ಹಲವರು ನೀರು ಕುಡಿಯುವ ಬಗ್ಗೆ ತಾತ್ಸಾರ ಮನೋಭಾವ ಹೊಂದಿರುತ್ತಾರೆ. ನೀರು ಕುಡಿದಷ್ಟು ಆರೋಗ್ಯ ಸುಧಾರಿಸುತ್ತದೆ. ಇನ್ನು ತೂಕ ಇಳಿಸುವವರು ಹೆಚ್ಚು ನೀರು ಕುಡಿಯಬೇಕು. ಪದೇ ಪದೇ ನೀರು ಕುಡಿಯುವುದರಿಂದ ಹೊಟ್ಟೆ ತುಂಬುತ್ತದೆ. ಹೀಗಾಗಿ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿರಲ್ಲ.

* ಗ್ರೀನ್ ಟೀ ಗ್ರೀನ್ ಟೀ ಅಥವಾ ಹಸಿರು ಚಹಾ ಇತ್ತೀಚೆಗೆ ಜನಪ್ರಿಯಗೊಂಡಿದೆ. ಸಂಶೋಧನೆಯ ಪ್ರಕಾರ, ಗ್ರೀನ್ ಟೀ ಸೇವಿಸಿದರೆ ಕೆಫೀನ್ ಕೊಬ್ಬನ್ನು ಕಡಿಮೆಯಾಗುತ್ತದೆ. ಇದರಿಂದ ಅತಿಯಾದ ದಪ್ಪ ಇರುವವರು ಗ್ರೀನ್ ಟೀ ಕುಡಿಯಬೇಕು.

* ಬ್ಲ್ಯಾಕ್ ಟೀ ಬ್ಲ್ಯಾಕ್ ಟೀ ಕೂಡಾ ಗ್ರೀನ್ ಟೀಯಂತೆ ಹೆಚ್ಚು ಪೋಷಕಾಂಶಗಳಿಂದ ಕೂಡಿದೆ. ಪೋಷಕಾಂಶಳಾದ ಆಂಟಿಆಕ್ಸಿಡೆಂಟ್ ಮತ್ತು ಪಾಲಿಫಿನಾಲ್ಗಳು ದೇಹದ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

* ಪ್ರೋಟೀನ್ ಶೇಕ್ ಪ್ರೋಟೀನ್ ಶೇಕ್ ತೂಕ ಇಳಿಸಲು ಹೆಚ್ಚು ಸಹಾಯ ಮಾಡುತ್ತದೆ. ಈ ಪ್ರೋಟೀನ್ ಶೇಕ್ ಆಹಾರವನ್ನು ಜೀರ್ಣವಾಗಲು ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುವುದರಿಂದ ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತವೆ.

* ಆಪಲ್ ಸೈಡರ್ ವಿನೆಗರ್ ಅಧ್ಯಯನಗಳ ಪ್ರಕಾರ, ಅಸಿಟಿಕ್ ಆಮ್ಲವು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದನ್ನು ಸೇವಿಸುವುದರಿಂದ ಪದೇ ಪದೇ ಆಹಾರ ಸೇವಿಸುವ ಅಗತ್ಯವಿರಲ್ಲ. ಆಪಲ್ ಸೈಡರ್ ವಿನೆಗರ್ನ ಜೇನುತಪ್ಪು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯಬೇಕು. ಇದನ್ನು ಮಲಗುವ ಮುನ್ನ ಕುಡಿಯಬೇಕು.

* ತರಕಾರಿ ಮತ್ತು ಹಣ್ಣಿನ ಜ್ಯೂಸ್ ತರಕಾರಿ ನೋಡಿದರೆ ಮುಖ ಹಿಂಡುವವರೆ ಹೆಚ್ಚು. ಆದರೆ ಹೆಚ್ಚು ಪ್ರೋಟೀನ್ ಇರುವ ತರಕಾರಿಯನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ತೂಕ ಇಳಿಸುವವರು ತರಕಾರಿ ಜ್ಯೂಸ್​ನ ಸೇವಿಸಬಹುದು. ಹಲವು ಬಗೆಯ ತರಕಾರಿಗಳಿಂದ ಮಾಡಿದ ಜ್ಯೂಸ್ ಕುಡಿಯುವದರಿಂದ ಕೊಲೆಸ್ಟ್ರಾಲ್ನ ಕಡಿಮೆಗೊಳಿಸುತ್ತದೆ. ಜೊತೆಗೆ ಹಣ್ಣಿನ ಜ್ಯೂಸ್ನ ಕುಡಿಯಬೇಕು. ಹಸಿವಾದಗೆಲ್ಲ ಹಣ್ಣಿನ ಜ್ಯೂಸ್ ಕುಡಿದರೆ ಒಳಿತು.

ಇದನ್ನೂ ಓದಿ

Beauty Tips: ನಿಮ್ಮ ಬಣ್ಣಕ್ಕೆ ಯಾವ ಕಲರ್​ ಲಿಪ್​ಸ್ಟಿಕ್​ ಬಳಸಿದರೆ ಅಂದವಾಗಿ ಕಾಣಿಸಬಹದು?

Health Tips: ಏಲಕ್ಕಿಯಲ್ಲಿದೆ ಮ್ಯಾಜಿಕ್; ಲೈಂಗಿಕ ಸಾಮರ್ಥ್ಯ ಹೆಚ್ಚಾಗಲು ಪುರುಷರು ಹೀಗೆ ಮಾಡಿ

(Drink a few drinks to Loss weight)

Published On - 3:05 pm, Sat, 28 August 21

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ