Yoga Malike: ವಿದೇಶದಲ್ಲಿ ಉಟಾಬಸಿ ಅಭ್ಯಾಸಕ್ಕೆ Super Brain Yoga ಎಂಬ ಹೆಸರಿದೆ!

Super Brain Yoga; ಕೆಲವು ವರ್ಷಗಳ ಹಿಂದೆ ಮಕ್ಕಳು ತರಗತಿಯಲ್ಲಿ ತಪ್ಪುಗಳನ್ನು ಮಾಡಿದಾಗ, ಅದಕ್ಕೆ ಶಿಕ್ಷೆ ಎಂಬಂತೆ ಕಿವಿಗಳನ್ನು ಹಿಡಿದುಕೊಂಡು ಉಟಾಬಸಿ ಹೊಡೆಸುತ್ತಿದ್ದರು‌.

Yoga Malike: ವಿದೇಶದಲ್ಲಿ ಉಟಾಬಸಿ ಅಭ್ಯಾಸಕ್ಕೆ Super Brain Yoga ಎಂಬ ಹೆಸರಿದೆ!
ಮಕ್ಕಳಿಗಾಗಿ ಯೋಗ
Follow us
Guruganesh Bhat
| Updated By: ganapathi bhat

Updated on: Aug 22, 2021 | 6:20 AM

ಮಕ್ಕಳು ಈಗ ತಾನೇ ಕಟ್ಟಿದ ಮಣ್ಣಿನ ಗೋಡೆಯಂತೆ, ನಾವದಕ್ಕೆ ಏನನ್ನು ಎಸೆಯುತ್ತೇವೆಯೋ ಅದೇ ಅಲ್ಲಿ ಅಂಟಿಕೊಳ್ಳುತ್ತದೆ. ಮಕ್ಕಳ ಭವಿಷ್ಯವು ಸುಂದರವಾಗಿರಬೇಕೆಂದಾದರೆ ಅದಕ್ಕೆ ಅನುಗುಣವಾದ ಶಿಕ್ಷಣವನ್ನು ಕೊಡಬೇಕು. ಈಗಿನ ಮೆಕಾಲೆ ಶಿಕ್ಷಣದ ಪದ್ಧತಿಯಂತೂ ನಮ್ಮ ದೇಶದ ಬೆನ್ನೆಲುಬಾದ ಭಾರತೀಯ ಸಂಸ್ಕೃತಿ, ನೈಜ ಇತಿಹಾಸ, ಮೌಲ್ಯ ಶಿಕ್ಷಣ ಇವುಗಳಿಗೆ ಒತ್ತು ನೀಡದೇ, ಕೇವಲ ಅಂಕಗಳ ಗಳಿಕೆಗಾಗಿ ಶಿಕ್ಷಣವೆಂಬಂತೆ ಮಾಡಿದೆ ಎನ್ನುತ್ತಾರೆ ವೃತ್ತಿಪರ ಯೋಗ ಶಿಕ್ಷಕ, ಪರಿಣಿತ ನಾಗೇಂದ್ರ ಗದ್ದೆಮನೆ. ಅವರು ಟಿವಿ9 ಕನ್ನಡ ಡಿಜಿಟಲ್​ಗಾಗಿ ಪ್ರಸ್ತುಪಡಿಸುತ್ತಿರುವ. ‘ಬದುಕಿಗಾಗಿ ಯೋಗ’  ಸರಣಿಯ ಈವಾರದ ಅಂಕಣದಲ್ಲಿ ‘ಮಕ್ಕಳಿಗಾಗಿ ಯೋಗ’ದ ಪ್ರವೇಶಿಕೆ ಮಾಡಿದ್ದಾರೆ.  

ಮಕ್ಕಳು ತಮ್ಮ ಭವಿಷ್ಯದ ಸುಂದರ ಜೀವನವನ್ನು ಹೇಗೆ ಮುನ್ನಡೆಸಬೇಕು? ಹೇಗೆ ಬಂದೊದಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂಬುದನ್ನು ಕಲಿಸುವುದು ನಿಜವಾದ ಶಿಕ್ಷಣ. ಪಾಲಕರ, ಶಿಕ್ಷಕರ ಒತ್ತಾಯಕ್ಕೆ ಅಂಕಗಳ ಹಿಂದೆ ಬಿದ್ದು ಮಕ್ಕಳು ಹಲವಾರು ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಶಿಕ್ಷಣವೂ ಯಾವತ್ತಿಗೂ ಮಕ್ಕಳಿಗೆ ಹೊರೆಯಾಗಬಾರದು. ನಗರದ ಶಾಲೆಗಳಲ್ಲಿ ಸ್ಥಳದ ಅಭಾವ, ಹೆಚ್ಚು ಅವಧಿಗಳ ಪಾಠ, ಹಾಗಾಗಿ ಕ್ರೀಡೆ, ದೈಹಿಕ ವ್ಯಾಯಾಮಗಳಿಗೆ ಕಡಿಮೆ ಆದ್ಯತೆ ನೀಡಲಾಗುವುದು. ಅದಲ್ಲದೇ ಪುನ: ಮನೆಯಲ್ಲಿಯೂ ಟ್ಯೂಷನ್ ಹೊರೆ. ಇದಿಷ್ಟಲ್ಲದೇ ಈಗಿನ ಮಕ್ಕಳಿಗೆ ಹೊರಾಂಗಣ ಕ್ರೀಡೆಗಿಂತ ವಿಡಿಯೋ ಗೇಮ್ಸ್, ಮೊಬೈಲ್ ಬಳಸುವುದರಲ್ಲಿ ಅತಿಯಾದ ಆಸಕ್ತಿ. ಇವೆಲ್ಲವೂ ಮಕ್ಕಳ ದೈಹಿಕ ಹಾಗೂ ಮಾನಸಿಕ ಕುಂಠಿತಕ್ಕೆ ಒಂದಿಲ್ಲೊಂದು ಕಡೆಯಿಂದ ಕಾರಣವಾಗುತ್ತವೆ. ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆ ಮಾನಸಿಕ ಒತ್ತಡ, ಕಣ್ಣಿನ ದೃಷ್ಟಿ ಕುಂಠಿತ ಹಾಗೂ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಹೇರಿಕೆ ಇರುವುದಿಲ್ಲ. ಕೆಲವು ವರ್ಷಗಳ ಹಿಂದೆ ಮಕ್ಕಳು ತರಗತಿಯಲ್ಲಿ ತಪ್ಪುಗಳನ್ನು ಮಾಡಿದಾಗ, ಅದಕ್ಕೆ ಶಿಕ್ಷೆ ಎಂಬಂತೆ ಕಿವಿಗಳನ್ನು ಹಿಡಿದುಕೊಂಡು ಉಟಾಬಸಿ ಹೊಡೆಸುತ್ತಿದ್ದರು‌. ಅದರ ಹಿಂದಿರುವ ವಿಜ್ಞಾನವನ್ನು ನಾವು ತಿಳಿದಿಕೊಳ್ಳಬೇಕಾದರೆ ಇನ್ಯಾರೋ ವಿದೇಶಿಗರು ಬಂದು ಅದನ್ನು ತಿಳಿದು, ತಮ್ಮದೆಂದು ಪೇಂಟೆಂಟ್ ಮಾಡಿಕೊಂಡು ಹೋಗಬೇಕಾಯಿತು. ವಿದೇಶಿಗರು ಅದೇ ಉಟಾಬಸಿ ಅಭ್ಯಾಸಕ್ಕೆ ‘Super brain Yoga’ ಎಂದು ಹೆಸರಿಟ್ಟರು‌. ಹಲವು ದೇಶಗಳ ಶಾಲೆಗಳಲ್ಲಿ ಇದನ್ನು ಪ್ರತಿದಿನದ ಅಭ್ಯಾಸವನ್ನಾಗಿಸಿದ್ದಾರೆ.

ಬಲಗೈಯಿಂದ ಎಡಗಿವಿಯನ್ನು, ಎಡಗೈಯಿಂದ ಬಲಗಿವಿಯನ್ನು ಹಿಡಿದುಕೊಂಡು ವಿರುದ್ಧವಾಗಿ ಉಸಿರಾಟ ಮಾಡುತ್ತ, ಅಂದರೆ ಕೂರುವಾಗ ಶ್ವಾಸವನ್ನು ತೆಗೆದುಕೊಳ್ಳವುದು, ಮೇಲೇಳುವಾಗ ಉಸಿರನ್ನು ಹೊರಹಾಕುವುದು, ಹೀಗೆ ಪ್ರತಿದಿನ 30ರಂತೆ 6 ತಿಂಗಳುಗಳ ಕಾಲ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಹೆಚ್ಚು ಸಮಯದವರೆಗೆ ಮನಸ್ಸನ್ನು ಕೇಂದ್ರೀಕರಿಸಲು ಸಹಕಾರಿಯಾಗುತ್ತದೆ. ದೈಹಿಕವಾಗಿಯೂ ಇದು ಸಹಕಾರಿ.

ನಮ್ಮ ಪೂರ್ವಜರು ಎಲ್ಲವನ್ನೂ ವಿಜ್ಞಾನಾನುಸಾರವಾಗಿಯೇ, ನಮ್ಮ ಜೀವನಕ್ಕೆ ಅನುಗುಣವಾಗುವಂತೆ ರಚಿಸಿದ್ದಾರೆ. ಅದರಲ್ಲಿ ಶ್ರದ್ಧೆಯಿಟ್ಟರೆ ಮಾತ್ರ ನಮಗೆ ಅದರ ಸತ್ಯಾಂಶವು ತಿಳಿಯುವುದು. ಬದಲಾದ ಶಿಕ್ಷಣ ಪದ್ಧತಿ, ಜೀವನ ಶೈಲಿ, ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ ಇವೆಲ್ಲವೂ ನಮ್ಮ ಮುಂದಿನ ಪೀಳಿಗೆಯನ್ನು ದುರ್ಬಲಗೊಳಿಸುತ್ತ ಬರುತ್ತವೆ. ಹೀಗಾಗಿ ಆಟ-ಪಾಠಗಳ ಜೊತೆಜೊತೆಗೆ ಯೋಗವು ಅವಶ್ಯಕ. ಈಗ Online ಶಿಕ್ಷಣವಾದ್ದರಿಂದ ಕಂಪ್ಯೂಟರ್, ಮೊಬೈಲ್ ಬಳಕೆ ಮಕ್ಕಳ ಕಣ್ಣಿನ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಪ್ರತಿದಿನ ಮುಂಜಾನೆಯ ಸೂರ್ಯನ ಕಿರಣಗಳು(ವಿಟಮಿನ್ ಡಿ) ನಮ್ಮ ಚರ್ಮ ಹಾಗೂ ಕಣ್ಣುಗಳಿಗೆ ಬಹಳ ಒಳ್ಳೆಯದು. ಸೂರ್ಯನ ಕಡೆ ಮುಖ ಮಾಡಿ, ಕಣ್ಣುಗಳನ್ನು ತೆರೆದುಕೊಂಡು, ಮೇಲೆ-ಕೆಳಗೆ, ಬಲ-ಎಡ, ವೃತ್ತಾಕಾರವಾಗಿ, ಹೀಗೆ ಕಣ್ಣುಗಳನ್ನು ಹೊರಳಿಸುವುದರಿಂದ, ಕಣ್ಣುಗಳಿಗೆ ವ್ಯಾಯಾಮವಾಗಿ ಕಣ್ಣು, ಕಣ್ಣಿನ ನರಗಳು, ಸಕ್ರಿಯವಾಗಿರುತ್ತವೆ. ಈಗಿನ ಮಕ್ಕಳಿಗೆ ಹುಟ್ಟುತ್ತಲೇ ಕಣ್ಣಿನ ಸಮಸ್ಯೆಗಳು ಬರುವುದರಿಂದ ಪ್ರತಿದಿನ ಮುಂಜಾನೆ ಒಂದು ಕ್ಯಾರೆಟ್ ತಿನ್ನುವುದು ಕೂಡ ಕಣ್ಣಿನ ಸಮಸ್ಯೆಗಳನ್ನು ದೂರಗೊಳಿಸುವುದು. ಮಕ್ಕಳಿಗೆ ಮಾನಸಿಕ ಒತ್ತಡ ಹೇರದೆ, ಸರಿಯಾಗಿ ದೈಹಿಕವಾಗಿ ಕ್ರೀಡೆ, ಯೋಗ ಇತ್ಯಾದಿಗಳಲ್ಲಿ ಆಸಕ್ತಿ ಹೆಚ್ಚಿಸುವುದರಿಂದ ಮಾನಸಿಕ, ದೈಹಿಕವಾಗಿ ಸುಸ್ಥಿರರನ್ನಾಗಿಸಬಹುದು.

ಇವಿಷ್ಟು ಯೋಗದಲ್ಲಿ ಮಕ್ಕಳನ್ನು ತೊಡಗಿಸುವ ಅತ್ಯಂತ ಪ್ರಾಥಮಿಕ ಹಂತಗಳು. ಮುಂದಿನ ಅಂಕಣದಲ್ಲಿ ಮಕ್ಕಳು ಮಾಡಬಹುದಾದ ಯೋಗಾಸನ, ವ್ಯಾಯಾಮಗಳನ್ನು ತಿಳಿದುಕೊಳ್ಳೋಣ.

ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರಾದ ನಾಗೇಂದ್ರ ಗದ್ದೇಮನೆ ಅವರು ವಿಯೆಟ್ನಾಂನಲ್ಲಿ ವೃತ್ತಿಪರ ಯೋಗ ಶಿಕ್ಷಕರು. ಯೋಗದಲ್ಲಿ ಆಳವಾದ ನಿಪುಣತೆ ಪಡೆದ ಅವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ, ಯಜುರ್ವೇದ ಸಂಹಿತಾಂತ ಅಧ್ಯಯನವನ್ನೂ ಮಾಡಿದ್ದಾರೆ. ಪುರಾತನ ಯೋಗವನ್ನು ಹೊಸ ತಲೆಮಾರಿಗೆ, ಅದರಲ್ಲೂ ವಿದೇಶದಲ್ಲಿ ಪ್ರಚುರಪಡಿಸುತ್ತಿರುವ ಹೆಮ್ಮೆ ನಾಗೇಂದ್ರ ಅವರದು. ಜತೆಗೆ ಎಲೆಕ್ಟ್ರಾನಿಕ್ ಗಾಡ್ಜೆಟ್​, ಆಟೋಮೊಬೈಲ್ ಕ್ಷೇತ್ರದಲ್ಲೂ ಅಪಾರ ಆಶಕ್ತಿ ಹೊಂದಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ಯೂಟ್ಯೂಬ್​ನಲ್ಲಿ NAGENDRA GADDEMANE ಎಂಬ ಹೆಸರಿನ ವ್ಲೋಗ್​ನ್ನು ಸಹ ನಡೆಸುತ್ತಿದ್ದಾರೆ. ಮಾಹಿತಿ ಮತ್ತು ಸಲಹೆಗಳಿಗಾಗಿ ಅವರ ವಾಟ್ಸ್​ಆ್ಯಪ್ ಸಂಖ್ಯೆ:  8762939451

ಇದನ್ನೂ ಓದಿ: 

Yoga Malike: ದಿನವಿಡೀ ದೈಹಿಕ ಶ್ರಮದ ಕೆಲಸ ಮಾಡುವವರಿಗೆ ಯೋಗ ಅವಶ್ಯವೇ?

Yoga: ಬದುಕಿಗಾಗಿ ಯೋಗ: ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದು ಹೇಗೆ?

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್