Eye Health: ದೃಷ್ಟಿ ದೋಷ ಸಮಸ್ಯೆಯೇ? ಪರಿಹಾರಕ್ಕಾಗಿ ಇಲ್ಲಿವೆ ಕೆಲವು ಮನೆಮದ್ದುಗಳು
ಅತ್ಯಂತ ಸೂಕ್ಷ್ಮವಾದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಅದರಲ್ಲಿಯೂ ಮುಖ್ಯವಾಗಿ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ದೋಷಗಳು ಕಂಡು ಬರುತ್ತಿದೆ. ಹೀಗಿರುವಾಗ ಕಣ್ಣಿನ ಸುರಕ್ಷತೆಯ ಬಗ್ಗೆ ಪ್ರತಿಬ್ಬರೂ ಗಮನಹರಿಸಲೇಬೇಕಿದೆ.
ಇಂದಿನ ಕೆಲಸಗಳ ಒತ್ತಡದಲ್ಲಿ ನಾವು ಆರೋಗ್ಯವನ್ನು ಕಡೆಗಣಿಸುತ್ತಿದ್ದೇವೆ. ಅಜಾಗರೂಕ ಆಹಾರ ಪದ್ಧತಿ, ಅತಿಯಾದ ಮುಬೈಲ್- ಟಿವಿ ಬಳಕೆ, ಜೀವನಶೈಲಿಯ ಕೆಲವು ಬದಲಾವಣೆಗಳಿಂದ ಆರೋಗ್ಯ ಹದಗೆಡುತ್ತಿದೆ. ಲ್ಯಾಪ್ಟಾಪ್ನ ಕೆಲಸದಿಂದಾಗಿ ಕಣ್ಣು ಹೆಚ್ಚು ಆಯಾಸಗೊಳ್ಳುತ್ತಿದೆ. ಅತ್ಯಂತ ಸೂಕ್ಷ್ಮವಾದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಅದರಲ್ಲಿಯೂ ಮುಖ್ಯವಾಗಿ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ದೋಷಗಳು ಕಂಡು ಬರುತ್ತಿದೆ. ಹೀಗಿರುವಾಗ ಕಣ್ಣಿನ ಸುರಕ್ಷತೆಯ ಬಗ್ಗೆ ಪ್ರತಿಬ್ಬರೂ ಗಮನಹರಿಸಲೇಬೇಕಿದೆ.
ಆರೋಗ್ಯಕರ ಆಹಾರ ವ್ಯವಸ್ಥೆಯು ಆರೋಗ್ಯ ಸುರಕ್ಷತೆಗೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದಕ್ಕಾಗಿ ಹಸಿರು ಸೊಪ್ಪು, ತರಕಾರಿ, ಹಣ್ಣು- ಹಂಪಲುಗಳನ್ನು ಸೇವಿಸುವುದು ಉತ್ತಮ ಮಾರ್ಗ. ತರಕಾರಿಗಳ ಜ್ಯೂಸ್ ಸೇವಿಸುವ ಮೂಲಕವೂ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಕ್ಯಾರೆಟ್, ಬಿಟ್ರೂಟ್ ಉತ್ಕರ್ಷಣ ನಿರೋಧಕ ಶಕ್ತಿ ಇರುವುದರಿಂದ ಆರೋಗ್ಯವನ್ನು ಸುರಕ್ಷಿತವಾಗಿಡಲು ಸಹಾಯಕವಾಗಿದೆ.
ಕ್ಯಾರೆಟ್ ಜ್ಯೂಸ್ ಕ್ಯಾರೆಟ್ ಜ್ಯೂಸ್ ದೃಷ್ಟಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕ್ಯಾರೆಟ್ ವಿಟಮಿನ್ ಎ ಗುಣವನ್ನು ಹೊಂದಿದ್ದು ಇದು ದೃಷ್ಟಿಗೆ ಬಹಳ ಮುಖ್ಯವಾಗಿದೆ. ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ. ಜತೆಗೆ ಟೊಮೆಟೋ ರಸ ಮತ್ತು ಕ್ಯಾರೆಟ್ ರಸವನ್ನೂ ಸಹ ಸವಿಯಬಹುದು.
ಪಾಲಾಕ್ ರಸ ಹಸಿರು ಸೊಪ್ಪು, ತರಕಾರಿಗಳು ದೃಷ್ಟಿ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹಸಿರು ಎಲೆಗಳ ತರಕಾರಿಗಳು ಕಣ್ಣಿಗೆ ಮಾತ್ರವಲ್ಲ ಆರೋಗ್ಯಕ್ಕೂ ಕೂಡಾ ಪ್ರಯೋಜನಕಾರಿ. ಅದರಲ್ಲಿಯೂ ಮುಖ್ಯವಾಗಿ ಪಾಲಾಕ್ ಜ್ಯೂಸ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ಒಂದು ಲೋಟ ಪಾಲಾಕ್ ಜ್ಯೂಸ್ ಸೇವಿಸುವ ಮೂಲಕ ನಿಮ್ಮ ದೃಷ್ಟಿ ಬೇಗ ಸುಧಾರಿಸುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಮೆಗ್ನೀಶಿಯಂ, ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಹೇರಳವಾಗಿವೆ.
ಆಮ್ಲಾ ಜ್ಯೂಸ್ ಆಮ್ಲಾದಲ್ಲಿ ವಿಟಮಿನ್ ಸಿ ಗುಣವಿರುತ್ತದೆ. ಇದು ಕಣ್ಣಿಗೆ ತುಂಬಾ ಪ್ರಯೋಜನಕಾರಿ. ಆಮ್ಲಾದ ಜ್ಯೂಸ್ ಮಾಡಿಯೂ ಸಹ ಸೇವಿಸಬಹುದು. ಇಲ್ಲವೇ ಹಸಿಯಾಗಿಯೂ ಸಹ ಆಮ್ಲಾವನ್ನು ಸೇವಿಸಬಹುದಾಗಿದೆ. ದೃಷ್ಟಿ ದೋಷವನ್ನು ನಿವಾರಿಸಲು ಈ ಕೆಲವು ಆಹಾರ ಪದಾರ್ಥಗಳು ಸಹಾಯ ಮಾಡುತ್ತವೆ. ಇವುಗಳನ್ನು ನಿಮ್ಮ ಆಹಾರ ಪದಾರ್ಥದಲ್ಲಿ ಸೇವಿಸುವ ಮೂಲಕ ನಿಮ್ಮ ದೃಷ್ಟಿಯ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಇದನ್ನೂ ಓದಿ:
Dangerous Food: ಒಂದೇ ಬಾರಿ ಎರಡು ಪದಾರ್ಥಗಳನ್ನು ಸೇವಿಸುವ ಮುನ್ನ ನಿಮ್ಮ ಗಮನ ಆರೋಗ್ಯದ ಹಿತದೃಷ್ಟಿ ಮೇಲೆ ಇರಲಿ
Health Tips: ಕಣ್ಣಿನ ಮೇಲೆ ಬಿಳಿ ಕಲೆ ಇದೆಯೇ? ಇದು ಈ ಕಾಯಿಲೆಯ ಮುನ್ಸೂಚನೆ ಎಚ್ಚರ ಇರಲಿ