Citrus Fruits: ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ?
ಸಿಟ್ರಸ್ ಹಣ್ಣುಗಳಲ್ಲಿ ಹೆಚ್ಚಿನ ಫೈಬರ್ ಇದ್ದು, ಇದು ಜೀರ್ಣಕ್ರಿಯೆ ಹಾಗೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
Updated on: Aug 21, 2021 | 8:12 AM

Seven reasons you need to know about citrus fruits

Seven reasons you need to know about citrus fruits

ನೀವು ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಲು ಬಯಸಿದರೆ ಸಿಟ್ರಸ್ ಹಣ್ಣುಗಳನ್ನು ನಿಮ್ಮ ಆಹಾರ ಪಟ್ಟಿಯಲ್ಲಿ ಸೇರಿಸಿ. ಸಿಟ್ರಸ್ ಹಣ್ಣುಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.

ಕಿಡ್ನಿಸ್ಟೋನ್ ಈಗ ಸಾಮಾನ್ಯ ಸಮಸ್ಯೆ ಎನ್ನುವಂತೆ ಆಗಿದೆ. ಆದರೆ ಅದರ ನೋವನ್ನು ಅನುಭವಿಸುವುದು ಸುಲಭವಲ್ಲ. ಪೊಟ್ಯಾಶಿಯಮ್ ಸಮೃದ್ಧವಾಗಿರುವ ಯಾವುದೇ ಸಿಟ್ರಸ್ ಹಣ್ಣಿನ ರಸವನ್ನು ಕುಡಿಯುವುದರಿಂದ ಈ ರೀತಿಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುವ ವಿಚಾರ ನೆನಪಿನಲ್ಲಿರಲಿ.

ಅನೇಕ ಅಧ್ಯಯನಗಳು ಸಿಟ್ರಸ್ ಹಣ್ಣುಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ತೋರಿಸಿವೆ ಏಕೆಂದರೆ ಅವುಗಳು ಹೆಚ್ಚಿನ ಪ್ರಮಾಣದ ರೋಗ ನಿರೋಧಕಗಳನ್ನು ಹೊಂದಿರುತ್ತವೆ. ಪ್ರತಿದಿನ ದ್ರಾಕ್ಷಿ ರಸವನ್ನು ಕುಡಿಯುವುದರಿಂದ ಶ್ವಾಸಕೋಶದ ಕ್ಯಾನ್ಸರ್ನಿಂದ ಪರಿಹಾರ ಪಡೆಯಬಹುದು ಎಂದು ಬಲ್ಲವರು ಹೇಳುತ್ತಾರೆ.

ಈ ರೀತಿಯ ಹಣ್ಣುಗಳನ್ನು ನೀವು ಎಷ್ಟು ಹೆಚ್ಚು ಸೇವಿಸುತ್ತೀರೋ ಅಷ್ಟು ಹೃದಯ ರೋಗ ಮತ್ತು ಪಾರ್ಶ್ವವಾಯು ಸಮಸ್ಯೆಯಿಂದ ಸುರಕ್ಷತೆ ಸಿಗುತ್ತದೆ. ಆದ್ದರಿಂದ ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿಡಲು ಈ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಸಿಟ್ರಸ್ ಹಣ್ಣುಗಳಲ್ಲಿರುವ ರಾಸಾಯನಿಕ ಅಂಶಗಳು ಅಲ್ಜೈಮರ್ ಮತ್ತು ಪಾರ್ಕಿನ್ಸನ್ ಸಮಸ್ಯೆ ಹಾಗೂ ಇನ್ನಿತರ ನರಮಂಡಲ ಸಮಸ್ಯೆಗಳನ್ನು ತಡೆಯಲು ಸಹಕಾರಿಯಾಗುತ್ತವೆ.
























