ಭಾರತದಲ್ಲಿ 12-17 ವಯಸ್ಸಿನವರಿಗೆ ಕೊವಿಡ್ ಲಸಿಕೆ ಪ್ರಯೋಗದ ಅನುಮತಿ ಬಯಸಿದ ಜಾನ್ಸನ್ ಅಂಡ್ ಜಾನ್ಸನ್

Johnson & Johnson: ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯು ಕೊವಿಡ್‌ನಿಂದಾಗುವ ಮಧ್ಯಮದಿಂದ ತೀವ್ರವಾದ ಅನಾರೋಗ್ಯವನ್ನು ತಡೆಗಟ್ಟುವಲ್ಲಿ 66 ಪ್ರತಿಶತ ಪರಿಣಾಮಕಾರಿತ್ವವನ್ನು ಹೊಂದಿದೆ ಮತ್ತು ತೀವ್ರತರವಾದ ಪ್ರಕರಣಗಳ ವಿರುದ್ಧ ಶೇಕಡಾ 85 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿರುವುದಾಗಿ ಅಧ್ಯಯನಗಳು ತೋರಿಸಿವೆ.

ಭಾರತದಲ್ಲಿ 12-17 ವಯಸ್ಸಿನವರಿಗೆ ಕೊವಿಡ್ ಲಸಿಕೆ ಪ್ರಯೋಗದ ಅನುಮತಿ ಬಯಸಿದ ಜಾನ್ಸನ್ ಅಂಡ್ ಜಾನ್ಸನ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 20, 2021 | 2:16 PM

ದೆಹಲಿ:  12-17 ವಯಸ್ಸಿನ ಮಕ್ಕಳಿಗೆ ನೀಡಲಿರುವ ಕೊವಿಡ್ ಲಸಿಕೆಗೆ ಭಾರತದಲ್ಲಿ ಪ್ರಯೋಗಗಳನ್ನು ನಡೆಸಲು ಅನುಮತಿಗಾಗಿ ಜಾನ್ಸನ್ ಮತ್ತು ಜಾನ್ಸನ್ ಅರ್ಜಿ ಸಲ್ಲಿಸಿದೆ. ಇಂದು ಬಿಡುಗಡೆ ಮಾಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ, ಅಮೆರಿಕದ ಫಾರ್ಮಾ ದೈತ್ಯ ಮಂಗಳವಾರ ತನ್ನ ಅರ್ಜಿಯನ್ನು ಸಲ್ಲಿಸಿದೆ ಎಂದು ಹೇಳಿದೆ. ವೈರಸ್ ಸೋಂಕು ನಿಯಂತ್ರಣಕ್ಕಾಗಿ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಕೊರೊನಾವೈರಸ್ ವಿರುದ್ಧ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಅದು ಹೇಳಿದೆ. “ಅಂತಿಮವಾಗಿ ಹರ್ಡ್ ಇಮ್ಯುನಿಟಿ ಸಾಧಿಸಲು ಕೊವಿಡ್ -19 ಲಸಿಕೆ ಕ್ಲಿನಿಕಲ್ ಪ್ರಯೋಗಗಳು ಅತ್ಯಗತ್ಯ, ಮತ್ತು ನಮ್ಮ ಕೋವಿಡ್ -19 ಲಸಿಕೆಯನ್ನು ಎಲ್ಲಾ ವಯೋಮಾನದವರಿಗೂ ಸಮನಾಗಿ ಲಭ್ಯವಾಗುವಂತೆ ಮಾಡಲು ಅಗತ್ಯವಾದ ನಿರ್ಣಾಯಕ ಕೆಲಸಕ್ಕೆ ನಾವು ಬದ್ಧರಾಗಿರುತ್ತೇವೆ” ಕಂಪನಿ ತಮ್ಮ ಪ್ರಕಟಣೆಯಲ್ಲಿ ಹೇಳಿದೆ. ಕಂಪನಿಯು ಈಗಾಗಲೇ ತನ್ನ ಏಕ-ಡೋಸ್ ಲಸಿಕೆಗಾಗಿ EUA ಅಥವಾ ತುರ್ತು ಬಳಕೆಯ ಅನುಮೋದನೆಯನ್ನು ಪಡೆದಿದೆ. ಇದನ್ನು ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ. ಲಿಮಿಟೆಡ್ ಜೊತೆಗಿನ ಒಪ್ಪಂದದ ಮೂಲಕ ಸರಬರಾಜು ಮಾಡಲಾಗುತ್ತದೆ.

ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯು ಕೊವಿಡ್‌ನಿಂದಾಗುವ ಮಧ್ಯಮದಿಂದ ತೀವ್ರವಾದ ಅನಾರೋಗ್ಯವನ್ನು ತಡೆಗಟ್ಟುವಲ್ಲಿ 66 ಪ್ರತಿಶತ ಪರಿಣಾಮಕಾರಿತ್ವವನ್ನು ಹೊಂದಿದೆ ಮತ್ತು ತೀವ್ರತರವಾದ ಪ್ರಕರಣಗಳ ವಿರುದ್ಧ ಶೇಕಡಾ 85 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿರುವುದಾಗಿ ಅಧ್ಯಯನಗಳು ತೋರಿಸಿವೆ.

ಗುರುವಾರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಕ್ಕಳಿಗೆ ಕೊವಿಡ್ ಲಸಿಕೆಗಳು “ಶೀಘ್ರದಲ್ಲೇ” ಲಭ್ಯವಿರುತ್ತವೆ ಎಂದು ಹೇಳಿದರು. ಭಾರತ್ ಬಯೋಟೆಕ್ ಮತ್ತು ಜೈಡಸ್ ಕ್ಯಾಡಿಲಾ ನಡೆಸುತ್ತಿರುವ ಎರಡು ಇತರ ಪ್ರಯೋಗಗಳನ್ನು ಅವರು ಈಗಾಗಲೇ ಸೂಚಿಸಿದ್ದಾರೆ. ಈ ಫಲಿತಾಂಶಗಳು ಮುಂದಿನ ತಿಂಗಳು ಬರಲಿವೆ.

ಕಳೆದ ತಿಂಗಳು ಭಾರತೀಯ ಔಷಧ ನಿಯಂತ್ರಕರ ಎಸ್‌ಇಸಿ, ಎರಡು ಮತ್ತು 17 ವರ್ಷದೊಳಗಿನ 920 ಮಕ್ಕಳ ಮೇಲೆ ಕೋವೋಕ್ಸ್‌ನ ಹಂತ II / III ಪ್ರಯೋಗಗಳನ್ನು ನಡೆಸಲು ಸೆರಮ್ ಇನ್‌ಸ್ಟಿಟ್ಯೂಟ್‌ಗೆ ಅನುಮೋದನೆಯನ್ನು ನೀಡಲಾಯಿತು.

ಕಳೆದ ತಿಂಗಳು, ದೆಹಲಿಯ ಪ್ರತಿಷ್ಠಿತ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಮುಖ್ಯಸ್ಥರಾದ ಡಾ.ರಣದೀಪ್ ಗುಲೇರಿಯಾ ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆಗಳನ್ನು ಒದಗಿಸಬಹುದಾಗಿದೆ ಎಂದು ಹೇಳಿದರು. ಮಕ್ಕಳಿಗೆ ಲಸಿಕೆ ಹಾಕುವುದು “ಪ್ರಸರಣದ ಸರಪಳಿಯನ್ನು ಮುರಿಯಲು ದೊಡ್ಡ ಉತ್ತೇಜನ” ಎಂದು ಅವರು ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.

ಲಸಿಕೆ ಸುರಕ್ಷತೆ ಮತ್ತು ಮಕ್ಕಳಿಗೆ ಪರಿಣಾಮಕಾರಿತ್ವದ ಮೇಲೆ ಕೇಂದ್ರೀಕರಿಸುವ ಕ್ಲಿನಿಕಲ್ ಪ್ರಯೋಗಗಳನ್ನು ಇತ್ತೀಚಿನ ವಾರಗಳು ಮತ್ತು ತಿಂಗಳುಗಳಲ್ಲಿ ಹೈಲೈಟ್ ಮಾಡಲಾಗಿದೆ. ಸಂಭಾವ್ಯ ಸೋಂಕಿನ ಅಲೆಗಳು 18 ವರ್ಷಕ್ಕಿಂತ ಕಡಿಮೆ ಇರುವವರನ್ನು ಗುರಿಯಾಗಿಸಬಹುದು ಎಂಬ ಆತಂಕ ಈಗ ಇದೆ. ಅದೇ ವೇಳೆ ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳು ಪುನಃ ತೆರೆಯುವುದರಿಂದ ಆ ಕಳವಳ ಹೆಚ್ಚಾಗಿದೆ.

ಹಲವಾರು ರಾಜ್ಯಗಳು ಮಕ್ಕಳ ಮೂಲಸೌಕರ್ಯವನ್ನು ಹೆಚ್ಚಿಸಲು ಪ್ರಾರಂಭಿಸಿವೆ. ಆಸ್ಪತ್ರೆಗಳ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಔಷಧಗಳು ಮತ್ತು ವೈದ್ಯಕೀಯ ಆಮ್ಲಜನಕವನ್ನು ಸಂಗ್ರಹಿಸುವುದನ್ನು ಶುರು ಮಾಡಿವೆ.

ಆರೋಗ್ಯ ನಿರ್ವಾಹಕರು ಅಮೆರಿಕದ ಪ್ರವೃತ್ತಿಗಳನ್ನು ಗಮನಿಸಿದ್ದಾರೆ, ಅಲ್ಲಿ ದಾಖಲೆಯ ಸಂಖ್ಯೆಯ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಏಕೆಂದರೆ ‘ಡೆಲ್ಟಾ’ ರೂಪಾಂತರವು ಲಸಿಕೆ ಹಾಕದ ಜನಸಂಖ್ಯೆಯ ಮೂಲಕ ಹೆಚ್ಚಾಗಿದೆ.

ಇದನ್ನೂ ಓದಿ:  ಮಕ್ಕಳಿಗೆ ಶೀಘ್ರದಲ್ಲೇ ಕೊವಿಡ್ ಲಸಿಕೆ: ಯಾವ ವಯಸ್ಸಿನ ಮಕ್ಕಳಿಗೆ? ಯಾವಾಗ?

ಇದನ್ನೂ ಓದಿ:  ಸಾಂಕ್ರಾಮಿಕದ ನಡುವೆಯೇ ಕೇರಳದಲ್ಲಿ ಓಣಂ ಹಬ್ಬ; ವ್ಯಾಪಾರ ಚುರುಕಾಗುವ ಜತೆಗೆ ಏರಬಹುದು ಕೊವಿಡ್ ಪ್ರಕರಣ

(Johnson and Johnson applies permission to conduct COVID-19 vaccine trials in India for children in the 12-17 age group)

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು