ಸಾಂಕ್ರಾಮಿಕದ ನಡುವೆಯೇ ಕೇರಳದಲ್ಲಿ ಓಣಂ ಹಬ್ಬ; ವ್ಯಾಪಾರ ಚುರುಕಾಗುವ ಜತೆಗೆ ಏರಬಹುದು ಕೊವಿಡ್ ಪ್ರಕರಣ

Onam Celebration:ಮುಂಬರುವ ಹಬ್ಬಗಳ ಸರಣಿಯಲ್ಲಿ ಓಣಂ ಮೊದಲನೆಯದು, ಆರ್ಥಿಕತೆಯಲ್ಲಿ ಬಳಕೆಯ ಬೇಡಿಕೆಯ ಪುನರುಜ್ಜೀವನಕ್ಕೆ ಇದು ನಿರ್ಣಾಯಕ.

ಸಾಂಕ್ರಾಮಿಕದ ನಡುವೆಯೇ ಕೇರಳದಲ್ಲಿ ಓಣಂ ಹಬ್ಬ; ವ್ಯಾಪಾರ ಚುರುಕಾಗುವ ಜತೆಗೆ ಏರಬಹುದು ಕೊವಿಡ್ ಪ್ರಕರಣ
ಓಣಂ ರಂಗೋಲಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 20, 2021 | 11:56 AM

ಕೇರಳದಲ್ಲಿ 10 ದಿನಗಳ ಓಣಂ (Onam) ಹಬ್ಬವು ಆಗಸ್ಟ್ 21 (ನಾಳೆ) ತಿರುವೋಣಂನೊಂದಿಗೆ ಮುಕ್ತಾಯಗೊಳ್ಳಲಿದೆ. ಓಣಂ ರಾಜ್ಯದ ಅತಿದೊಡ್ಡ ಹಬ್ಬವಾಗಿದ್ದು ಜಾತಿ,ಧರ್ಮ ಬೇಧಗಳಿಲ್ಲದೆ ಆಚರಿಸಲ್ಪಡುತ್ತದೆ. ಅದೇ ವೇಳೆ ಈ ಪ್ರದೇಶದ ವಲಸೆ ಕಾರ್ಮಿಕರು ಓಣಂ ಹಬ್ಬದ ಆಚರಣೆಗಾಗಿ ಮರಳಿ ಮನೆಗೆ ಬರುವ ಸಮಯವಿದು.  ಹಲವು ವಿಧಗಳಲ್ಲಿ ಓಣಂ ಹಬ್ಬವು ಭಾರತದ ಉದ್ದಗಲಕ್ಕೂ ಆಚರಿಸಲ್ಪಡುತ್ತದೆ. ಆರ್ಥಿಕತೆಗೆ ಹಬ್ಬದ ಬೇಡಿಕೆ ಯಾವಾಗಲೂ ಮುಖ್ಯವಾಗಿದೆ, ಆದರೆ ಈ ವರ್ಷ ಸಾಂಕ್ರಾಮಿಕ-ಪೀಡಿತ ಮಾರುಕಟ್ಟೆಗಳಿಗೆ ಇದು ಬಹಳ ನಿರ್ಣಾಯಕವಾಗಿರುತ್ತದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮಾದರಿಯೆಂದು ಮೆಚ್ಚುಗೆ ಪಡೆದ ನಂತರ, ಕೊವಿಡ್ -19 ಪ್ರಕರಣಗಳಲ್ಲಿ ಅನಿಯಂತ್ರಿತ ಏರಿಕೆಯನ್ನು ತೋರುತ್ತಿರುವ ಈ ವರ್ಷದ ಓಣಂ ಹಬ್ಬಗಳು ದಕ್ಷಿಣದ ರಾಜ್ಯಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯನ್ನು ತಂದೊಡ್ಡಿದೆ. ಕಳೆದ ವರ್ಷ ಓಣಂ ಹಬ್ಬದ ಹೊತ್ತಲ್ಲಿಯೇ ಕೇರಳದಲ್ಲಿ ಕೊವಿಡ್ -19 ಪ್ರಕರಣಗಳು ಏರಿಕೆಯಾಗಲು ತೊಡಗಿದ್ದು.ಈ ವರ್ಷವೂ ಇದೇ ರೀತಿಯ ಪ್ರಕರಣಗಳು ಕಂಡುಬಂದರೆ ಕನಿಷ್ಠ ವೈದ್ಯಕೀಯ ಮೂಲಸೌಕರ್ಯ ನಿಭಾಯಿಸುವ ಸಾಮರ್ಥ್ಯದ ವಿಷಯದಲ್ಲಿಯೂ ನಿಯಂತ್ರಣಾತೀತವಾಗಬಹುದು.

1) ಕಳೆದ ವರ್ಷ ಕೇರಳದಲ್ಲಿ ಕೊವಿಡ್ -19 ಸೋಂಕುಗಳು ಏರಿಕೆಯಾಗಿದ್ದಾಗಲೇ ಓಣಂ ಬಂದಿತ್ತು ಕೊವಿಡ್ -19 ಹರಡುವುದನ್ನು ತಡೆಯಲು ಭಾರತವು ಮಾರ್ಚ್ 25, 2020 ರಂದು 68 ದಿನಗಳ ದೇಶವ್ಯಾಪಿ ಲಾಕ್‌ಡೌನ್ ವಿಧಿಸಿದರೂ,ಆರಂಭಿಕ ಹಂತದಲ್ಲಿ ಕೇರಳ ಮತ್ತು ಭಾರತದ ಉಳಿದ ಭಾಗಗಳಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆ ತುಂಬಾ ಭಿನ್ನವಾಗಿತ್ತು. ನಿರ್ಬಂಧಗಳು ಸಡಿಲಗೊಂಡಂತೆ ಭಾರತದ ಉಳಿದ ಭಾಗಗಳಲ್ಲಿ ಪ್ರಕರಣಗಳು ಸ್ಥಿರವಾಗಿ ಏರಿಕೆಯಾಗಲು ಪ್ರಾರಂಭಿಸಿದವು. ಆದಾಗ್ಯೂ, ಕೇರಳವು ಈ ಪ್ರವೃತ್ತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಯಿತು. ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ್ದಕ್ಕಾಗಿ ಹೆಚ್ಚಿನ ಮೆಚ್ಚುಗೆಯನ್ನೂ ಗಳಿಸಿತು. ಆಗಸ್ಟ್ 30, 2020 ರಂದು ಓಣಂನೊಂದಿಗೆ ಕೇರಳದ ಪರಿಸ್ಥಿತಿಯು ಬದಲಾಯಿತು. ಕೇರಳ ಮತ್ತು ಭಾರತದ ಉಳಿದ ಭಾಗಗಳಲ್ಲಿ 0 ರಿಂದ 1 (0 ಕನಿಷ್ಠ ಮತ್ತು ಗರಿಷ್ಠ 1 ಗರಿಷ್ಠ) ಪ್ರಮಾಣದಲ್ಲಿ ದೈನಂದಿನ ಹೊಸ ಸೋಂಕುಗಳ ಏಳು ದಿನಗಳ ಸರಾಸರಿ ಮೌಲ್ಯಗಳ ಹೋಲಿಕೆ ಇದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕೇರಳದ ಆಗಸ್ಟ್ 2020 ಕೊನೆಯ ವಾರ ಪ್ರಕರಣಗಳ ಸಂಖ್ಯೆ ಹಠಾತ್ ಏರಿಕೆಯಾಯಿತು. ಕೊವಿಡ್ -19 ರ ಮೊದಲ ಅಲೆ ಒಮ್ಮೆ ಕೇರಳದಲ್ಲಿ ಆರಂಭವಾದಾಗ, ದೇಶದ ಉಳಿದ ಭಾಗಗಳಿಗಿಂತ ಭಿನ್ನವಾಗಿ ಕಡಿಮೆಯಾಗಲು ಹೆಚ್ಚು ಸಮಯ ಹಿಡಿಯಿತು. ಈ ನಡುವೆ ರಾಜ್ಯದಲ್ಲಿ ಎರಡು ಚುನಾವಣೆಗಳೂ ನಡೆದವು, ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ನಂತರ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆಗಳು ನಡೆದಿದ್ದು ಇದು ಮತ್ತಷ್ಟು ಪ್ರಕರಣಗಳ ಉಲ್ಬಣಕ್ಕೆ ಕಾರಣವಾಯಿತು.

2) ಕಳೆದ ಬಾರಿ ಆದಂತೆ ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸಲಿದೆ ಹಬ್ಬಗಳ ಪ್ರಾಮುಖ್ಯತೆಯನ್ನು ಗಮನಿಸಿದರೆ ವ್ಯಾಪಾರಗಳಿಗೆ ನಿರ್ಬಂಧಗಳನ್ನು ಸಡಿಲಿಸಲು ಸರ್ಕಾರಗಳು ಯಾವಾಗಲೂ ಒತ್ತಡದಲ್ಲಿರುತ್ತವೆ. ಕೇರಳ ಇದಕ್ಕೆ ಹೊರತಾಗಿಲ್ಲ. ಕಳೆದ ವರ್ಷ, ರಾಜ್ಯ ಸರ್ಕಾರವು ಓಣಂ ಮೊದಲು ನಿರ್ಬಂಧಗಳನ್ನು ಸಡಿಲಗೊಳಿಸಿತು. ಉದಾಹರಣೆಗೆ, ಜನರು ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಲು ಅವಕಾಶ ಮಾಡಿಕೊಟ್ಟರು. ಈ ವರ್ಷವೂ ಸರ್ಕಾರವು ಈದ್ ಮತ್ತು ಓಣಂ ಮುಂಚೆ ಸಡಿಲಿಕೆಗಳನ್ನು ಘೋಷಿಸಿತು. ಇದರ ಪರಿಣಾಮವು ಇದು ಕಳೆದ ವರ್ಷ ಓಣಂ ಹಬ್ಬದ ವೇಳೆ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿತು. ಚಿಲ್ಲರೆ ಮಾರುಕಟ್ಟೆ ಮತ್ತು ಸಾರಿಗೆ ಚುರುಕಾದಂತೆ ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ಮತ್ತು ರಾಜ್ಯಕ್ಕೆ ಒಳಬರುವ ಪ್ರಯಾಣವನ್ನು (ಸಂಭಾವ್ಯ ಸೋಂಕಿತ) ಜನರನ್ನು ಆಕರ್ಷಿಸಲು ಕಾರಣವಾಗುತ್ತದೆ. ಕೊವಿಡ್ -19 ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದರೂ ಈ ವರ್ಷದ ಓಣಂಗೆ ಮುಂಚಿತವಾಗಿ ಚಲನಶೀಲತೆಯ ಸೂಚ್ಯಂಕಗಳು ಮತ್ತೊಮ್ಮೆ ಹೆಚ್ಚಾದಂತೆ ತೋರುತ್ತದೆ. ವಾಸ್ತವವಾಗಿ, ಕೇರಳವು ದೇಶದ ಉಳಿದ ಭಾಗಗಳಿಗಿಂತ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುತ್ತಿದೆ. ಚಲನಶೀಲತೆಯ ಹೆಚ್ಚಳವು ಕಳೆದ ವರ್ಷ ಮತ್ತು ಈಗಲೂ ಹೆಚ್ಚಿರುವ ಕಾರಣ ಹಿಂದಿನ ಪರಿಸ್ಥಿತಿಗಿಂತ ಈಗಿನ ಪರಿಸ್ಥಿತಿ ಭಿನ್ನವಾಗಿದೆ ಎಂದು ಹೇಳುವಂತಿಲ್ಲ.

3) ಕೇರಳದ ಅನುಭವವು ದೇಶದ ಉಳಿದ ಭಾಗಗಳಿಗೆ ಏಕೆ ಮುಖ್ಯವಾಗಿದೆ? ಖಚಿತವಾಗಿ ಹೇಳಬೇಕೆಂದರೆ, ಸಾಂಕ್ರಾಮಿಕ ರೋಗದಿಂದಾಗಿ ಕೇರಳದ ವೈದ್ಯಕೀಯ ಮೂಲಸೌಕರ್ಯ ಕುಸಿದಿಲ್ಲ, ಸಾಂಕ್ರಾಮಿಕ ರೋಗದ ಎರಡನೇ ತರಂಗದಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವೈದ್ಯಕೀಯ ಮೂಲಸೌಕರ್ಯದ ಕೊರತೆ ಎದುರಾಗಿತ್ತು. ದೈನಂದಿನ ಹೊಸ ಪ್ರಕರಣಗಳು ಮತ್ತು ಧನಾತ್ಮಕ ದರಗಳು, ಅವು ಇನ್ನೂ ಅಧಿಕವಾಗಿದ್ದರೂ, ಕೇರಳದಲ್ಲಿ ಅವುಗಳ ಗರಿಷ್ಠ ಮಟ್ಟದಿಂದ ಇಳಿದಿವೆ. ಕೇರಳದ ಪ್ರಸ್ತುತ ಪರಿಸ್ಥಿತಿ ದೇಶದ ಉಳಿದ ಭಾಗಗಳಿಗೆ ಏಕೆ ಮುಖ್ಯ? ಎಂದು ಕೇಳಿದರೆ ಅದರ ಉತ್ತರ ಹೀಗಿದೆ.

ಮುಂಬರುವ ಹಬ್ಬಗಳ ಸರಣಿಯಲ್ಲಿ ಓಣಂ ಮೊದಲನೆಯದು, ಆರ್ಥಿಕತೆಯಲ್ಲಿ ಬಳಕೆಯ ಬೇಡಿಕೆಯ ಪುನರುಜ್ಜೀವನಕ್ಕೆ ಇದು ನಿರ್ಣಾಯಕ.

ಸಾಂಕ್ರಾಮಿಕ ರೋಗದ ಸಂಭಾವ್ಯ ಮೂರನೇ ಅಲೆ ಕೂಡ ಗ್ರಾಹಕ ಮತ್ತು ವ್ಯಾಪಾರ ಮನೋಭಾವವನ್ನು ಹತ್ತಿಕ್ಕುತ್ತದೆ ಮತ್ತು ದೇಶದ ಆರ್ಥಿಕ ಭವಿಷ್ಯವನ್ನು ಗಮನಾರ್ಹವಾಗಿ ಹಾನಿಗೊಳಿಸುತ್ತದೆ. ಹಬ್ಬದ ನಂತರ ಕೇರಳದ ಕೊವಿಡ್ -19 ಪ್ರಕರಣಗಳು ಹೆಚ್ಚಾಗಲಿ ಅಥವಾ ಇಲ್ಲದಿರಲಿ, ಸಾಂಕ್ರಾಮಿಕ ಪೂರ್ವ ಚಲನಶೀಲತೆಯ ಮಟ್ಟವನ್ನು ಪುನಃಸ್ಥಾಪಿಸುವುದು ಮೂರನೇ ಅಲೆಯನ್ನು ಪ್ರಚೋದಿಸುತ್ತದೆಯೇ ಎಂಬ ಮೊದಲ ಲಿಟ್ಮಸ್ ಪರೀಕ್ಷೆಯಾಗಿದೆ. ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಹೊಂದಿದ್ದರೂ, ಲಸಿಕೆಯ ವಿಷಯದಲ್ಲಿ ಕೇರಳವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಲ್ಲೊಂದಾಗಿದೆ. ಆಗಸ್ಟ್ 19, 2021 ರ ಹೊತ್ತಿಗೆ, ಇದು ತನ್ನ ವಯಸ್ಕ ಜನಸಂಖ್ಯೆಯ ಶೇ 19.3 ಗೆ ಸಂಪೂರ್ಣವಾಗಿ ಲಸಿಕೆ ಹಾಕಿದೆ. ಮತ್ತು ಕನಿಷ್ಠ ಒಂದು ಡೋಸ್ ಅನ್ನು ಶೇ 33.4 ಜನರಿಗೆ ನೀಡಿದೆ. ವೈಯಕ್ತಿಕ ರೋಗನಿರೋಧಕ ಶಕ್ತಿಯನ್ನು ನೀಡುವುದರ ಜೊತೆಗೆ, ಲಸಿಕೆಗಳು ನಿರ್ಣಾಯಕ ಮಿತಿಯನ್ನು ದಾಟಿದ ನಂತರ, ಸೋಂಕಿನ ಪ್ರಮಾಣವನ್ನು ನಿಧಾನಗೊಳಿಸುವ ನಿರೀಕ್ಷೆಯಿದೆ. ಗಮನಾರ್ಹವಾಗಿ ಹೆಚ್ಚಿನ ವ್ಯಾಕ್ಸಿನೇಷನ್ ಹೊರತಾಗಿಯೂ ಕೇರಳದಲ್ಲಿ ಪ್ರಕರಣಗಳು ಹೆಚ್ಚಾದರೆ, ವ್ಯಾಕ್ಸಿನೇಷನ್ ಮಟ್ಟಗಳು ಕಡಿಮೆ ಇರುವ ಇತರ ರಾಜ್ಯಗಳಲ್ಲಿ ಒಬ್ಬರು ಕೆಟ್ಟದ್ದನ್ನು ನಿರೀಕ್ಷಿಸಬಹುದು. ಆದರೆ ದುರಂತ ರಹಿತ ಓಣಂ, ಕನಿಷ್ಠ ಸಾಂಕ್ರಾಮಿಕ ರೋಗದ ನಡುವೆಯೇ ಆರ್ಥಿಕತೆಗೆ ನಿಜವಾಗಿಯೂ ಒಳ್ಳೆಯ ಸುದ್ದಿಯಾಗಬಹುದು.

ಇದನ್ನೂ ಓದಿ: Coronavirus cases in India: ಭಾರತದಲ್ಲಿ 36,571 ಹೊಸ ಕೊವಿಡ್ ಪ್ರಕರಣ ಪತ್ತೆ, 540 ಮಂದಿ ಸಾವು

(Onam Celebrated in ongoing pandemic time Why does the Kerala experience matter for the rest of the country)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್