Basil leaves: ತುಳಸಿ ಎಲೆಗಳನ್ನು ಜಗಿದು ನುಂಗುವ ಅಭ್ಯಾಸ ಇದೆಯೇ? ಹೀಗೆ ಮಾಡುವ ಮೊದಲು ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ
Health Tips: ತುಳಸಿ ಎಲೆಗಳನ್ನು ತಿನ್ನಲು ಸರಿಯಾದ ಮಾರ್ಗ ಯಾವುದು? ಅದರ ಪ್ರಯೋಜನಗಳೇನು ಮತ್ತು ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ತುಳಸಿ ಎಲೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಸಾಮಾನ್ಯವಾಗಿ ತುಳಸಿ ಎಲೆ (Basil leaves) ಗಳನ್ನು ವಿವಿಧ ರೀತಿಯಲ್ಲಿ ಸೇವಿಸಲಾಗುತ್ತದೆ. ಆದರೆ ತುಳಸಿ ಎಲೆಗಳನ್ನು ತಿನ್ನುವ ಕ್ರಮದ ಬಗ್ಗೆ ಅನೇಕ ಗೊಂದಲಗಳಿವೆ. ಅನೇಕ ಜನರು ಹೇಳುವಂತೆ ತುಳಸಿ ಎಲೆಗಳನ್ನು ಜಗಿದು ನುಂಗಬಾರದು. ಏಕೆಂದರೆ ಇದು ಹಲ್ಲುಗಳಿಗೆ ಹಾನಿ ಮಾಡುತ್ತದೆ. ಆದರೆ ಇದನ್ನು ಹಲವರು ಒಪ್ಪುವುದಿಲ್ಲ. ಹಾಗಿದ್ದರೆ ತುಳಸಿ ಎಲೆಗಳನ್ನು ತಿನ್ನಲು ಸರಿಯಾದ ಮಾರ್ಗ ಯಾವುದು? ಅದರ ಪ್ರಯೋಜನಗಳೇನು ಮತ್ತು ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ತುಳಸಿ ಎಲೆ ಸೇವಿಸುವುದು ಹೇಗೆ? ರಾತ್ರಿಯಿಡೀ ನಾಲ್ಕರಿಂದ ಐದು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಕಪ್ನಲ್ಲಿ ನೀರಿನಿಂದ ನೆನೆಸಿ. ಬೆಳಿಗ್ಗೆ ಈ ಎಲೆಗಳನ್ನು ನೀರಿನೊಂದಿಗೆ ನುಂಗಿ ಅಥವಾ ತುಳಸಿ ಎಲೆಗಳ ಜೊತೆಗೆ ನೀರನ್ನು ಕುದಿಸಿ, ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಚಹಾದ ರೂಪದಲ್ಲಿ ಕುಡಿಯಿರಿ.
ಏಕೆ ತುಳಸಿ ಎಲೆಯನ್ನು ಜಗಿಯಬಾರದು? ತುಳಸಿ ಎಲೆಗಳಲ್ಲಿ ಪಾದರಸ ಮತ್ತು ಕಬ್ಬಿಣಾಂಶ ಅಧಿಕವಾಗಿರುತ್ತದೆ. ಅಗಿಯುವಾಗ ಅಥವಾ ಜಗಿಯುವಾಗ ಇವೆರಡೂ ಬಾಯಿಯಲ್ಲಿ ಬಿಡುಗಡೆಯಾಗುತ್ತವೆ. ಈ ಖನಿಜಗಳು ನಿಮ್ಮ ಹಲ್ಲುಗಳನ್ನು ಹಾನಿಗೊಳಿಸಬಹುದು ಮತ್ತು ಹಲ್ಲಿನ ಬಣ್ಣವನ್ನು ಬದಲಾಯಿಸಬಹುದು. ಇದಲ್ಲದೇ ತುಳಸಿ ಎಲೆಗಳು ಸ್ವಲ್ಪ ಆಮ್ಲೀಯವಾಗಿವೆ. ನಮ್ಮ ಬಾಯಿ ಕ್ಷಾರೀಯವಾಗಿರುವುದರಿಂದ ತುಳಸಿ ಎಲೆಗಳನ್ನು ಅತಿಯಾಗಿ ಸೇವಿಸುವುದರಿಂದ ಹಲ್ಲಿನ ದಂತ ಕವಚಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಅದನ್ನು ಜಗಿದು ತಿನ್ನುವುದು ಸೂಕ್ತವಲ್ಲ.
ಯಾವ ಮಾರ್ಗ ಸರಿಯಾಗಿದೆ? ತುಳಸಿ ಎಲೆಗಳನ್ನು ಜಗಿಯಬೇಡಿ. ಆದರೆ ತುಳಸಿ ಎಲೆಗಳಿಂದ ತೆಗೆದ ತಾಜಾ ರಸವನ್ನು ಬಾಯಿಯ ಹುಣ್ಣುಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಅಂದರೆ, ಅದರ ರಸ ಬಾಯಿಗೆ ಒಳ್ಳೆಯದು. ಇಂತಹ ಪರಿಸ್ಥಿತಿಯಲ್ಲಿ ಎಲೆಗಳನ್ನು ಅಗಿಯುವುದು ಹೇಗೆ ತಪ್ಪಾಗುತ್ತದೆ? ಇದಲ್ಲದೇ ವೈದ್ಯರು ಅನೇಕ ವರದಿಗಳಲ್ಲಿ ‘ತುಳಸಿಯಲ್ಲಿ ಪಾದರಸದ ರಚನೆ ಇದೆ ಎಂದಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇದು ನಿಜ. ಈ ಕ್ರಮ ಹಲ್ಲುಗಳಿಗೆ ಹಾನಿಕಾರಕವಲ್ಲ ಎಂದು ವೈದ್ಯರು ಹೇಳಿದ್ದಾರೆ. ಪಾದರಸವು ಹಲ್ಲುಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಅವುಗಳನ್ನು ಅಗಿಯದೆ ನೇರವಾಗಿ ನುಂಗುವುದು ಒಳ್ಳೆಯದು ಎನ್ನುವುದು ವೈದ್ಯರ ಅಭಿಪ್ರಾಯ.
ಇದನ್ನೂ ಓದಿ: Health Tips: ಪಿತ್ತಜನಕಾಂಗವನ್ನು ಆರೋಗ್ಯವಾಗಿಡಲು ಈ ಕ್ರಮಗಳನ್ನು ಅನುಸರಿಸಿ
Health Tips: ಹೃದಯಾಘಾತದಿಂದ ಪಾರಾಗಲು 10 ಮಾರ್ಗಗಳು; ಆಯುರ್ವೇದ ತಜ್ಞರ ಸಲಹೆ ಇಲ್ಲಿದೆ
(Do not chew basil leaves and know about the right way to eat Basil leaves)