Health Tips: ರಾತ್ರಿ ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಿಸಿ

TV9 Digital Desk

| Edited By: Ayesha Banu

Updated on: Sep 13, 2021 | 6:50 AM

ನಾವು ಮಲಗುವ ರೀತಿ ನಮ್ಮ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ವಿಶೇಷವಾಗಿ ಎಡಭಾಗದಲ್ಲಿ ಮಲಗುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಾಗಿದ್ದರೆ ಎಡಭಾಗಕ್ಕೆ ಏಕೆ ತಿರುಗಿ ಮಲಗಬೇಕು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

Health Tips: ರಾತ್ರಿ ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಿಸಿ
ಸಾಂದರ್ಭಿಕ ಚಿತ್ರ

ನಮ್ಮ ಆರೋಗ್ಯವು ನಾವು ಹೇಗೆ ದಿನವಿಡೀ ಇರುತ್ತೇವೆ ಎಂಬುವುದರ ಮೇಲೆ ಅವಲಂಬಿತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಕೇವಲ ಬೆಳಿಗ್ಗೆ ಮಾತ್ರವಲ್ಲ ನಾವು ರಾತ್ರಿ ಮಲಗುವ (sleeping) ರೀತಿ ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು, ನಾವು ಮಲಗುವ ರೀತಿ ನಮ್ಮ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ವಿಶೇಷವಾಗಿ ಎಡಭಾಗದಲ್ಲಿ( left side) ಮಲಗುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಾಗಿದ್ದರೆ ಎಡಭಾಗಕ್ಕೆ ಏಕೆ ತಿರುಗಿ ಮಲಗಬೇಕು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಲಬದ್ಧತೆಯನ್ನು ನಿವಾರಿಸುತ್ತದೆ ಸಣ್ಣ ಕರುಳು ಮತ್ತು ದೊಡ್ಡ ಕರುಳಿನ ನಡುವಿನ ಜಂಕ್ಷನ್ ಎಡಭಾಗದಲ್ಲಿದೆ. ಇದನ್ನು ಇಲಿಯೋಸಿಕಲ್ ವಾಲ್ವ್ ಎಂದು ಕರೆಯಲಾಗುತ್ತದೆ. ಸಣ್ಣ ಕರುಳಿನಲ್ಲಿರುವ ತ್ಯಾಜ್ಯವು ಎಡಭಾಗದಲ್ಲಿ ಮಲಗಿರುವಾಗ ಗುರುತ್ವಾಕರ್ಷಣೆಯ ಬಲದಿಂದಾಗಿ ಸುಲಭವಾಗಿ ದೊಡ್ಡ ಕರುಳಿಗೆ ಚಲಿಸುತ್ತದೆ. ಇದು ಮಲ ಕರುಳಿನಿಂದ ಹೊರಬರುವುದನ್ನು ಸುಲಭಗೊಳಿಸುತ್ತದೆ. ಇದರಿಂದಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಅಂದರೆ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರು ಎಡಭಾಗಕ್ಕೆ ತಿರುಗಿ ಮಲಗುವುದು ಉತ್ತಮ.

ಹೃದಯದ ಆರೋಗ್ಯಕ್ಕೆ ಉತ್ತಮ ರಾತ್ರಿ ವೇಳೆ ಹೃದಯದಲ್ಲಿ ಸುಡುವ ಸಂವೇದನೆ ಉಂಟಾದರೆ ಅಥವಾ ಉರಿಯಾದಂತೆ ಬಾಸವಾದರೆ ಎಡಭಾಗಕ್ಕೆ ತಿರುಗಿ ಮಲಗುವುದು ಪರಿಹಾರವನ್ನು ನೀಡುತ್ತದೆ. ಇದರ ಜೊತೆಗೆ ಹೀಗೆ ಮಲಗುವುದರಿಂದ ಹೃದಯದ ಎಡಭಾಗಕ್ಕೆ ಶ್ವಾಸಕೋಶದಿಂದ ರಕ್ತವನ್ನು ಸಂಗ್ರಹಿಸಿ ದೇಹಕ್ಕೆ ಕಳುಹಿಸುತ್ತದೆ. ಆದ್ದರಿಂದ ಹೃದಯವು ಸದಾ ಆರೋಗ್ಯವಾಗಿರಲು ಎಡಭಾಗಕ್ಕೆ ತಿರುಗಿ ಮಲಗುವುದು ಸೂಕ್ತ.

ಯಕೃತ್ತಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಯಕೃತ್ತು ದೇಹದ ಬಲಭಾಗದಲ್ಲಿದೆ. ಆದ್ದರಿಂದ ನೀವು ಎಡಭಾಗದಲ್ಲಿ ಮಲಗಿದರೆ ಪಿತ್ತಜನಕಾಂಗ ಅಥವಾ ಯಕೃತ್ತಿನ ಮೇಲೆ ಹೊರೆ ಕಡಿಮೆ ಇರುತ್ತದೆ. ಆ ಮೂಲಕ ಇದು ಯಕೃತ್ತಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಗುಲ್ಮದ ಆರೋಗ್ಯ ಕಾಪಾಡುತ್ತದೆ ಗುಲ್ಮ ದೇಹದ ಅತಿದೊಡ್ಡ ಅಂಗವಾಗಿದೆ. ಗುಲ್ಮಾ ದೇಹದ ಎಡಭಾಗದಲ್ಲಿದೆ. ಹಾಗಾಗಿ ನೀವು ಎಡಭಾಗದಲ್ಲಿ ಮಲಗಿದರೆ ಗುಲ್ಮಕ್ಕೆ ಸರಿಯಾದ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗುತ್ತದೆ. ಆ ಮೂಲಕ ಗುಲ್ಮಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಅಸಿಡಿಟಿ ಸಮಸ್ಯೆ ನಿವಾರಕ ಅಸಿಡಿಟಿಯಿಂದ ಬಳಲುತ್ತಿರುವವರು ಕೂಡ ಮಲಗುವಾಗ ಎಡಭಾಗದಲ್ಲಿ ಮಲಗಲು ಸಲಹೆ ನೀಡಲಾಗುತ್ತದೆ. ಈ ರೀತಿ ಮಲಗಿಕೊಂಡರೆ ಗ್ಯಾಸ್ಟ್ರಿಕ್​ ಜೀರ್ಣಾಂಗಕ್ಕೆ ಮರಳುವುದನ್ನು ತಡೆಯುತ್ತದೆ. ಆದ್ದರಿಂದ ಅಸಿಡಿಟಿ ಸಮಸ್ಯೆ ಬರುವುದಿಲ್ಲ.

ಇದನ್ನೂ ಓದಿ: Health Tips: ಪಿತ್ತಜನಕಾಂಗವನ್ನು ಆರೋಗ್ಯವಾಗಿಡಲು ಈ ಕ್ರಮಗಳನ್ನು ಅನುಸರಿಸಿ

Health Benefits: ಕಿಡ್ನಿ ಸಮಸ್ಯೆ ಉಂಟಾದ ಮೇಲೆ ಪರಿಹಾರ ಹುಡುಕುವ ಬದಲು, ಪ್ರತಿದಿನ ಡಿಟಾಕ್ಸ್​ ಮಾಡಿ ಕುಡಿಯಿರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada