ಪ್ರತಿದಿನ ಕನಿಷ್ಠ 3ರಿಂದ 4 ಲೀಟರ್ ನೀರು ಕುಡಿಯಬೇಕು. ಹಾಗಂತ ವೈದ್ಯರೇ ಹೇಳುತ್ತಾರೆ. ಆದರೆ ಹಲವರು ನೀರು ಕುಡಿಯುವ ಬಗ್ಗೆ ತಾತ್ಸಾರ ಮನೋಭಾವ ಹೊಂದಿರುತ್ತಾರೆ. ನೀರು ಕುಡಿದಷ್ಟು ಆರೋಗ್ಯ ಸುಧಾರಿಸುತ್ತದೆ. ಇನ್ನು ತೂಕ ಇಳಿಸುವವರು ಹೆಚ್ಚು ನೀರು ಕುಡಿಯಬೇಕು. ಪದೇ ಪದೇ ನೀರು ಕುಡಿಯುವುದರಿಂದ ಹೊಟ್ಟೆ ತುಂಬುತ್ತದೆ. ಹೀಗಾಗಿ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿರಲ್ಲ.