Women Health: ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಲು ಕಾರಣ ಏನು? ಇದರ ಲಕ್ಷಣಗಳನ್ನು ಗುರುತಿಸುವುದು ಹೇಗೆ?

TV9 Digital Desk

| Edited By: preethi shettigar

Updated on: Sep 12, 2021 | 9:17 AM

ಮೂಳೆಗಳ ಸಮಸ್ಯೆ 30 ವರ್ಷಕ್ಕೆ ಪ್ರಾರಂಭವಾಗುತ್ತದೆ. ಅದರಲ್ಲೂ ಮಹಿಳೆಯರು ಹೆಚ್ಚು ಕ್ಯಾಲ್ಸಿಯಂ ಕೊರತೆಯನ್ನು ಎದುರಿಸುತ್ತಾರೆ. ಋತುಚಕ್ರ ಅಥವಾ ಋತುಸ್ರಾವದ ಸಂದರ್ಭದಲ್ಲಿ, ಗರ್ಭಧಾರಣೆ ಸಮಯದಲ್ಲಿ ಕ್ಯಾಲ್ಸಿಯಂನ ಅಗತ್ಯವಿದೆ.

Women Health: ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಲು ಕಾರಣ ಏನು? ಇದರ ಲಕ್ಷಣಗಳನ್ನು ಗುರುತಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us

ಮಾನವನಲ್ಲಿನ ಶೇಕಡಾ 70 ರಷ್ಟು ಮೂಳೆಗಳು ಕ್ಯಾಲ್ಸಿಯಂ ಫಾಸ್ಫೇಟ್‌ನಿಂದ ರೂಪಿತವಾಗಿದೆ. ಆದ್ದರಿಂದ ನಾವು ನಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಭರಿತ ಪದಾರ್ಥಗಳನ್ನು ತೆಗೆದುಕೊಳ್ಳಬೇಕು. ವಿಶೇಷವಾಗಿ ಮೂಳೆಗಳನ್ನು ಬಲವಾಗಿಡಲು ಕ್ಯಾಲ್ಸಿಯಂನ (calcium) ಸೇವನೆ ಬಹಳ ಮುಖ್ಯ. ಆದರೆ ಬದಲಾಗುತ್ತಿರುವ ಆಹಾರ ಪದ್ಧತಿಯಿಂದಾಗಿ, ಆರೋಗ್ಯಕರ ಆಹಾರವು ಜನರ ದೇಹವನ್ನು ಸೇರಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಮೂಳೆಗಳ ಸಮಸ್ಯೆ 30 ವರ್ಷಕ್ಕೆ ಪ್ರಾರಂಭವಾಗುತ್ತದೆ. ಅದರಲ್ಲೂ ಮಹಿಳೆಯರು (women) ಹೆಚ್ಚು ಕ್ಯಾಲ್ಸಿಯಂ ಕೊರತೆಯನ್ನು ಎದುರಿಸುತ್ತಾರೆ. ಋತುಚಕ್ರ ಅಥವಾ ಋತುಸ್ರಾವದ ಸಂದರ್ಭದಲ್ಲಿ, ಗರ್ಭಧಾರಣೆ ಸಮಯದಲ್ಲಿ ಕ್ಯಾಲ್ಸಿಯಂನ ಅಗತ್ಯವಿದೆ.

ಸಾಮಾನ್ಯವಾಗಿ ಎಲ್ಲಾ ಜವಾಬ್ದಾರಿಗಳಿಂದಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಅವರಲ್ಲಿ ಹೆಚ್ಚಿನವರು 30 ವರ್ಷ ವಯಸ್ಸಿನ ನಂತರ ಅನೇಕ ರೋಗಗಳಿಗೆ ಒಳಗಾಗಬೇಕಾಗುತ್ತದೆ. ಕ್ಯಾಲ್ಸಿಯಂ ಕೊರತೆಯು ಅತಿಯಾದರೆ, ಅಕಾಲಿಕ ಸಂಧಿವಾತ, ಆಸ್ಟಿಯೋಪೆನಿಯಾ, ಆಸ್ಟಿಯೊಪೊರೋಸಿಸ್ ಮತ್ತು ಹೈಪೋಕಾಲ್ಸೆಮಿಯಾ ಮುಂತಾದ ಸಮಸ್ಯೆಗಳು ಸುತ್ತುವರೆಯಲು ಪ್ರಾರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು ಮತ್ತು ಈ ಕೊರತೆಯಿಂದ ಮುಕ್ತರಾಗಲು ಅನುಸರಿಸಬೇಕಾದ ಕ್ರಮದ ಬಗ್ಗೆ ತಿಳಿಯುವುದು ಸೂಕ್ತ.

ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು * ಕೈ ಮತ್ತು ಕಾಲುಗಳಲ್ಲಿ ನಿರಂತರ ನೋವು ಅಥವಾ ಮರಗಟ್ಟುವಿಕೆ. * ನರಗಳ ಉಬ್ಬುವಿಕೆ. * ಸ್ನಾಯು ಸೆಳೆತ. * ಕೀಲು ನೋವು. * ಹಲ್ಲು ಉದುರುವುದು. * ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು. * ಉಗುರುಗಳ ಬಿರುಕು. * ಕೂದಲು ಉದುರುವಿಕೆ. * ಕಿರಿಕಿರಿ ಉಂಟಾಗುವುದು ಮತ್ತು ಆಯಾಸ.

ಕ್ಯಾಲ್ಸಿಯಂ ಕೊರತೆಗೆ ಕಾರಣ

  • ಆರೋಗ್ಯಕರ ಆಹಾರದ ಬದಲಾಗಿ, ಜಂಕ್ ಫುಡ್, ಫಾಸ್ಟ್ ಫುಡ್ ಮತ್ತು ಸಂಸ್ಕರಿಸಿದ ಆಹಾರವನ್ನು ತಿನ್ನುವುದು.
  • ವಿಟಮಿನ್ ಡಿ ಕೊರತೆ. ವಿಟಮಿನ್ ಡಿ ಕೊರತೆಯಿಂದಾಗಿ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.
  • ಯೋನಿ ಡಿಸ್ಚಾರ್ಜ್​ ಕಾರಣದಿಂದಾಗಿ, ದೇಹದಿಂದ ಕ್ಯಾಲ್ಸಿಯಂ ಮಾತ್ರವಲ್ಲ, ದೇಹಕ್ಕೆ ಅಗತ್ಯವಾದ ಎಲ್ಲಾ ಅಂಶಗಳು ಹೊರಬರುತ್ತವೆ.
  • ಋತುಚಕ್ರ, ಸ್ತನ್ಯಪಾನ ಮತ್ತು ಗರ್ಭಧಾರಣೆ ಸಮಯದಲ್ಲಿ ಅಧಿಕ ರಕ್ತದ ಹರಿವಿನಿಂದಾಗಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗಬಹುದು.
  • ಇದಲ್ಲದೇ, ದೇಹದಲ್ಲಿ ಕಡಿಮೆ ಮಟ್ಟದ ಈಸ್ಟ್ರೊಜೆನ್ ಹಾರ್ಮೋನ್​ನಿಂದಾಗಿ ಕ್ಯಾಲ್ಸಿಯಂ ಕೊರತೆಯೂ ಉಂಟಾಗಬಹುದು.

ಕ್ಯಾಲ್ಸಿಯಂ ಕೊರತೆಯಿಂದ ಮುಕ್ತರಾಗುವುದು ಹೇಗೆ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada