Health Tips: ಬಾಯಿಯಿಂದ ದುರ್ವಾಸನೆ ಬರುತ್ತಿದೆಯೇ? ಸಮಸ್ಯೆ ಪರಿಹಾರಕ್ಕಾಗಿ ಇಲ್ಲಿದೆ ಸರಳ ಸಲಹೆಗಳು

ಆಹಾರ ಸೇವಿಸಿದ ನಂತರ ಯಾವುದೇ ಕಾರಣಕ್ಕೂ ಸಹ ಮೌತ್​ವಾಶ್​ ಮಾಡದೇ ಹಾಗೆಯೇ ಇರಬೇಡಿ. ಜತೆಗೆ ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಿ.

Health Tips: ಬಾಯಿಯಿಂದ ದುರ್ವಾಸನೆ ಬರುತ್ತಿದೆಯೇ? ಸಮಸ್ಯೆ ಪರಿಹಾರಕ್ಕಾಗಿ ಇಲ್ಲಿದೆ ಸರಳ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Sep 16, 2021 | 7:40 AM

ಬಾಯಿಯ ದುರ್ವಾಸನೆಯಿಂದ ಪರಿಹಾರ ಪಡೆಯಲು ನೀವು ಸೋತಿರಬಹುದು. ಮಾತನಾಡಲೂ ಸಹ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿರಬಹುದು. ಬಾಯಿ, ಹಲ್ಲು, ಒಸಡು, ಗಂಟಲು ಅಥವಾ ಜೀರ್ಣಕಾರಿ ಸಮಸ್ಯೆಯಿಂದಾಗಿ ಜತೆಗೆ ಆರೋಗ್ಯ ಸಮಸ್ಯೆಗಳಿಂದಾಗಿ ಬಾಯಿಯಿಂದ ವಾಸನೆ ಬರುವ ಸಾಧ್ಯತೆಗಳಿರುತ್ತವೆ. ನಾವು ತಿನ್ನುವ ಆಹಾರ ಬಾಯಿಯಲ್ಲಿಯೇ ಶೇಖರಣೆಗೊಂಡು ಈ ಸಮಸ್ಯೆ ಕಾಡಬಹುದು. ಇದಕ್ಕೆಲ್ಲಾ ಕಾರಣಗಳೇನು? ಪರಿಹಾರ ಕಂಡು ಹಿಡಿಯುವ ವಿಧಾನ ಹೇಗೆ ಎಂಬೆಲ್ಲಾ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ.

ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಪದಾರ್ಥಗಳನ್ನು ಸೇವಿಸಿದಾಗ ವಾಸನೆ ಬರುವುದು ಸಹಜ. ಹಲ್ಲುಜ್ಜುವುದು, ಮೌತ್​ವಾಶ್​ ಮಾಡುವುದರಿಂದ ಕೆಟ್ಟವಾಸನೆಗಳನ್ನು ತಡೆಗಟ್ಟಬಹುದು. ಆಹಾರ ಸೇವಿಸಿದ ನಂತರ ಯಾವುದೇ ಕಾರಣಕ್ಕೂ ಸಹ ಮೌತ್​ವಾಶ್​ ಮಾಡದೇ ಹಾಗೆಯೇ ಇರಬೇಡಿ. ಜತೆಗೆ ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಿ.

ನಿಮ್ಮ ಬಾಯಿ ದುರ್ವಾಸನೆಗೆ ಹಲವು ಕಾರಣಗಳಿವೆ ಒಣಬಾಯಿ ಒಣಬಾಯಿ ಕೆಟ್ಟ ಉಸಿರಾಟದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಬಾಯಿಯನ್ನು ಯಾವಾಗಲೂ ಒಣಗಿಸಿಡುವುದರಿಂದ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಲಾಲಾರಸವು ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಮತ್ತು ತಾಜಾ ಉಸಿರಾಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಜೀರ್ಣಕಾರಿ ಸಮಸ್ಯೆಗಳು ಜೀರ್ಣಕ್ರಿಯೆ ಸಮಸ್ಯೆ, ಕರುಳಿನ ಅಸ್ವಸ್ಥತೆ ಮತ್ತು ಮಲಬದ್ಧತೆಯಂತಹ ಅನೇಕ ಜೀರ್ಣಕಾರಿ ಸಮಸ್ಯೆಗಳು ನಿಮ್ಮ ಬಾಯಿಯ ಮೂಲಕ ಕೆಟ್ಟ ಉಸಿರಾಟಕ್ಕೆ ಕಾರಣವಾಗಬಹುದು.

ಧೂಮಪಾನ ಸಿಗರೇಟಿನಲ್ಲಿ ಈಗಾಗಲೇ ಅನೇಕ ವಿಷಕಾರಿ ವಸ್ತುಗಳು ಮತ್ತು ರಾಸಾಯನಿಕಗಳು ಇದ್ದು, ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಆದರೆ ಅವು ಕೆಟ್ಟ ಉಸಿರಾಟಕ್ಕೆ ಕಾರಣವಾಗುತ್ತವೆ. ಜತೆಗೆ ನಿಮ್ಮ ಆರೋಗ್ಯವನ್ನೂ ಸಹ ಕೆಡಿಸುತ್ತವೆ.

ಆಲ್ಕೋಹಾಲ್ ಸೇವನೆ ಆಲ್ಕೋಹಾಲ್ ಸೇವನೆ ನಿಮ್ಮ ಆರೋಗ್ಯವನ್ನು ಕೆಡಿಸುತ್ತದೆ. ಜತೆಗೆ ಹಲವು ಸಮಯದವರೆಗೆ ಆಲ್ಕೋಹಾಲ್ ಅಂಶ ನಿಮ್ಮ ಬಾಯಿಯಲ್ಲಿರುವದರಿಂದ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳುತ್ತದೆ. ಇದು ಕೆಟ್ಟ ವಾಸನೆಗೆ ಕಾರಣವಾಗಬಹುದು.

ಪರಿಹಾರಕ್ಕೆ ಸಲಹೆಗಳು ತುಳಸಿ ಎಲೆಗಳನ್ನು ಆಗಾಗ ಸೇವಿಸುತ್ತಿರಿ. ಇದರಿಂದ ಬಾಯಿಯಿಂದ ಹೊರಬರುವ ಕೆಟ್ಟ ವಾಸನೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಬಾಯಿಯ ದುರ್ವಾಸನೆಯ ವಿರುದ್ಧ ಅತ್ಯತ್ತಮ ರಕ್ಷಣೆ ಎಂದು ಪರಿಗಣಿಸಲ್ಪಡುವ ಪ್ರಮುಖ ಉತ್ಕರ್ಷಣ ನಿರೋಧಕ ಪೋಷಕಾಂಶಗಳಾದ ಧಾನ್ಯಗಳು, ಹಣ್ಣುಗಳು, ತರಕಾರಿಗಳಾದ ಕ್ಯಾರೆಟ್, ಕಲ್ಲಂಗಡಿ ಮತ್ತು ಸಿಟ್ರಸ್ ಆಹಾರಗಳಲ್ಲಿರಲಿ.

ಊಟದ ತಕ್ಷಣ ಜೀರಿಗೆ ಅಗಿಯುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ. ಆಗ ಬಾಯಿಯಲ್ಲಿ ತೇವಾಂಶ ಉಳಿಯುತ್ತದೆ. ಇದು ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನೂ ತೆಗೆದು ಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Health Tips: ಒಮ್ಮೆ ಮಾಡಿಟ್ಟ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ; ಕಾರಣ ತಿಳಿದುಕೊಳ್ಳಿ

Health Tips: ರೋಗಗಳಿಂದ ದೂರವಿರಲು ಈ ಗಿಡಮೂಲಿಕೆಗಳನ್ನು ನೀವು ಸೇವಿಸುವ ಆಹಾರದಲ್ಲಿ ಸೇರಿಸಿ

(Health Tips Know about remedies for Bad mouth smell problem check in Kannada)

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?