Medicinal Plants: ಇನ್ಸುಲಿನ್ ಗಿಡದ ಆರೋಗ್ಯಯುತ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ತಿಳಿದಿದೆ ?

ಇನ್ಸುಲಿನ್ ಗಿಡವು ಹುಲ್ಲಿನ ಕಳೆ ಮಧ್ಯ ಬೆಳೆಯುತ್ತದೆ ಮತ್ತು ಇದನ್ನು ಹೆಚ್ಚಾಗಿ ಜಾನುವಾರುಗಳು ತಿನ್ನುತ್ತವೆ. ಈ ಸಸ್ಯವನ್ನು ಗ್ರಾಮೀಣ ಪ್ರದೇಶದ ಜನರು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಈ ಸಸ್ಯವನ್ನು ಅಮೃತ ಕಡ, ಬೆಣ್ಣೆ ಬಿದಿರು, ಕಾಡು ಹೊಕ್ಕುಳ ಅಥವಾ ಎಂಡ್ರಾಕು ಎಂದೂ ಕರೆಯುತ್ತಾರೆ.

Medicinal Plants: ಇನ್ಸುಲಿನ್ ಗಿಡದ ಆರೋಗ್ಯಯುತ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ತಿಳಿದಿದೆ ?
ಇನ್ಸುಲಿನ್ ಗಿಡ
Follow us
TV9 Web
| Updated By: ಆಯೇಷಾ ಬಾನು

Updated on: Sep 16, 2021 | 7:05 AM

ಪ್ರಕೃತಿ ಮನುಷ್ಯನೊಂದಿಗೆ ಬೇರ್ಪಡಿಸಲಾಗದಂತ ಸಂಬಂಧ ಹೊಂದಿದೆ. ಪ್ರಕೃತಿ ಮನುಷ್ಯನ ಜೀವನಾಡಿಯಾಗಿದೆ. ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರ ಎಲ್ಲವೂ ಪ್ರಕೃತಿಯಲ್ಲಿ ಸಿಗುವ ಸಸ್ಯಗಳಿಂದ ಬರುತ್ತವೆ. ಆಯುರ್ವೇದವು ಇಂತಹ ಅನೇಕ ಸಸ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಇಂದು ನಾವು ಹೊಲಗಳಲ್ಲಿ, ಮನೆಯ ಸುತ್ತ ಮತ್ತು ಎಲ್ಲೆಡೆ ಬೆಳೆಯುವ ಸಸ್ಯದ ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳೊಣ. ಇನ್ಸುಲಿನ್ ಗಿಡವು (Insulin plant) ಹುಲ್ಲಿನ ಕಳೆ ಮಧ್ಯ ಬೆಳೆಯುತ್ತದೆ ಮತ್ತು ಇದನ್ನು ಹೆಚ್ಚಾಗಿ ಜಾನುವಾರುಗಳು ತಿನ್ನುತ್ತವೆ. ಈ ಸಸ್ಯವನ್ನು ಗ್ರಾಮೀಣ ಪ್ರದೇಶದ ಜನರು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಈ ಸಸ್ಯವನ್ನು ಅಮೃತ ಕಡ, ಬೆಣ್ಣೆ ಬಿದಿರು, ಕಾಡು ಹೊಕ್ಕುಳ ಅಥವಾ ಎಂಡ್ರಾಕು ಎಂದೂ ಕರೆಯುತ್ತಾರೆ. ಇದು ಕಮಲಿಸಾ ಕುಲಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಕಮಲಿನಾ ಬೆಂಗಾಲ್ಸಿ. 

ಇನ್ಸುಲಿನ್ ಗಿಡದ ಪ್ರಯೋಜನಗಳು:

ಗಾಯ ಮತ್ತು ಹುಣ್ಣು ಕಡಿಮೆ ಮಾಡುತ್ತದೆ ಇನ್ಸುಲಿನ್ ಗಿಡವು ಕೇವಲ ಸಸ್ಯದ ಹೆಸರಲ್ಲ, ಅದು ನಿಜವಾಗಿಯೂ ಮಕರಂದದ ಗುಣಗಳನ್ನು ಹೊಂದಿದೆ ಎಂದು ಹಿರಿಯರು ಹೇಳುತ್ತಾರೆ. ಈ ಸಸ್ಯವು ಆಂಟಿಫಂಗಲ್ ಮತ್ತು ಉರಿಯೂತವನ್ನು ದೂರ ಮಾಡುವ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ಈ ಸಸ್ಯದ ಎಲೆಗಳು ಮತ್ತು ಬೇರುಗಳು ಗಾಯ ಮತ್ತು ಹುಣ್ಣುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ರೋಗಕ್ಕೆ ರಾಮಬಾಣ ಮುಖದ ಮೇಲಿನ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ, ಮೊಡವೆಗಳು ಮತ್ತು ಕಲೆಗಳನ್ನು ಕಡಿಮೆ ಮಾಡಲು ಉತ್ತಮ ಔಷಧಿಯಾಗಿದೆ. ಇನ್ಸುಲಿನ್ ಗಿಡ  ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಎಲೆಗಳನ್ನು ಮೃದುವಾದ ಪೇಸ್ಟ್ ಮಾಡಿ ಮುಖದ ಮೇಲೆ ಮೊಡವೆ ಮತ್ತು ಕಲೆಗಳು ಇರುವಲ್ಲಿ ಹಚ್ಚಿದರೆ ಬೇಗ ಗುಣವಾಗುತ್ತವೆ. ಇನ್ಸುಲಿನ್ ಗಿಡಗಳಿಂದ  ಮುಖವು ಸುಂದರವಾಗಿರುತ್ತದೆ.

ಕಾಲೋಚಿತ ರೋಗಗಳಿಗೆ ಪರಿಹಾರ ಈ ಇನ್ಸುಲಿನ್ ಗಿಡದ ಎಲೆಗಳು ಜ್ವರಕ್ಕೆ ಔಷಧಿಯಾಗಿ ಕೆಲಸ ಮಾಡುತ್ತವೆ. ಇವುಗಳಲ್ಲಿ ಆರು ಎಲೆಗಳನ್ನು ತೆಗೆದುಕೊಂಡು ಅರ್ಧ ಚಮಚ ಜೀರಿಗೆ ಮತ್ತು ಅರ್ಧ ಚಮಚ ಮೆಣಸನ್ನು 150 ಗ್ರಾಂ ನೀರಿನಲ್ಲಿ ಬೆರೆಸಿ ಈ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಈ ಕಷಾಯವನ್ನು ದಿನಕ್ಕೊಮ್ಮೆ ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ. ದೇಹದ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲೆಗಳನ್ನು ಪುಡಿಮಾಡಿ ರಸವನ್ನು ಕುಡಿಯುವುದರಿಂದ ಮಲೇರಿಯಾ ಜ್ವರ ಕಡಿಮೆಯಾಗುತ್ತದೆ. ಗಂಟಲು ನೋವನ್ನು ನಿವಾರಿಸಲು ಈ ಎಲೆಗಳನ್ನು ಬಳಸಲಾಗುತ್ತದೆ.

ಸಂಧಿವಾತವನ್ನು ತಡೆಗಟ್ಟುತ್ತದೆ ಗಿಡದಲ್ಲಿರುವ ರಾಸಾಯನಿಕಗಳನ್ನು ಕೀಲು ನೋವುಗಳ ಮೇಲೆ ಹಚ್ಚಿದರೆ ನೋವುಗಳು ಬೇಗ ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಈ ಗಿಡದ ಎಲೆಗಳನ್ನು ಪೇಸ್ಟ್ ಮಾಡಿ ಮತ್ತು ಅದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿದರೆ ದೇಹದಲ್ಲಿನ ನೋವು ಕಡಿಮೆಯಾಗುತ್ತದೆ.

* ಈ ಎಲೆಯನ್ನು ಈಗಲೂ ಗ್ರಾಮದಲ್ಲಿ ಹಾವಿನ ವಿಷಕ್ಕೆ ಪ್ರತಿವಿಷವಾಗಿ ಬಳಸಲಾಗುತ್ತದೆ.

* ನಿಯಮಿತ ಮುಟ್ಟಿನಿಲ್ಲದ ಮಹಿಳೆಯರಿಗೆ ಇನ್ಸುಲಿನ್ ಗಿಡ ಅಮೃತದಂತೆ ಕೆಲಸ ಮಾಡುತ್ತದೆ. ಈ ಎಲೆ ಮತ್ತು ಕಾಂಡದ ಕಷಾಯವನ್ನು ಕುಡಿಯುವುದರಿಂದ ನಿಯಮಿತವಾಗಿ ಮುಟ್ಟಾಗುತ್ತದೆ. ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ.

*ಇನ್ಸುಲಿನ್ ಗಿಡದ ಎಲೆಯ ಕಷಾಯವು ಮೂತ್ರದಲ್ಲಿನ ಉರಿಯೂತ ನಿವಾರಣೆ ಮಾಡುತ್ತದೆ.

* ಈ ಸಸ್ಯದ ಬೇರುಗಳನ್ನು ಜ್ವರ ಮತ್ತು ಯಕೃತ್ತಿನ ರೋಗವನ್ನು ನಿವಾರಿಸಲು ಬಳಸಲಾಗುತ್ತದೆ.

* ಈ ಗಿಡವನ್ನು ಬೇಯಿಸಿ ತರಕಾರಿಯಾಗಿಯೂ ತಿನ್ನಲಾಗುತ್ತದೆ. ಈ ರೀತಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇನ್ಸುಲಿನ್ ಗಿಡ ಆಯುರ್ವೇದ ಮತ್ತು ಯುನಾನಿ ಔಷಧಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಇದನ್ನೂ ಓದಿ: ಅವರೆಕಾಳು ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?

Power Nap: ಹಗಲಲ್ಲಿ ಮಲಗುವ ಅಭ್ಯಾಸ ಇದೆಯೇ? ಈ 5 ಆರೋಗ್ಯಯುತ ಬದಲಾವಣೆಯ ಬಗ್ಗೆ ತಿಳಿಯಿರಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ