Power Nap: ಹಗಲಲ್ಲಿ ಮಲಗುವ ಅಭ್ಯಾಸ ಇದೆಯೇ? ಈ 5 ಆರೋಗ್ಯಯುತ ಬದಲಾವಣೆಯ ಬಗ್ಗೆ ತಿಳಿಯಿರಿ

ಒಂದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ಮಲಗುವುದನ್ನು "ಪವರ್ ನ್ಯಾಪ್​"ಎಂದು ಕರೆಯಲಾಗುತ್ತದೆ. ಹಗಲಿನಲ್ಲಿ ಮಲಗುವುದರಿಂದ ಅನೇಕ ಪ್ರಯೋಜನಗಳಿವೆ ಅವುಗಳ ಬಗ್ಗೆ ತಿಳಿಯುವುದು ಸೂಕ್ತ.

Power Nap: ಹಗಲಲ್ಲಿ ಮಲಗುವ ಅಭ್ಯಾಸ ಇದೆಯೇ? ಈ 5 ಆರೋಗ್ಯಯುತ ಬದಲಾವಣೆಯ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Sep 15, 2021 | 1:02 PM

ಬದಲಾಗುತ್ತಿರುವ ಜೀವನ ಶೈಲಿಯ ಭಾಗವಾಗಿ ಶೇಕಡಾ 51 ಕ್ಕಿಂತ ಹೆಚ್ಚು ಜನರಿಗೆ ರಾತ್ರಿ ವೇಳೆ ಸರಿಯಾದ ನಿದ್ರೆ ಬರುವುದಿಲ್ಲ. ವಿಶೇಷವಾಗಿ ವಯಸ್ಕರು ಹಗಲಿನಲ್ಲಿ ದಣಿದಂತೆ ಕಾಣುತ್ತಾರೆ. ಹೀಗಾಗಿ ಮಧ್ಯಾಹ್ನ ಸ್ವಲ್ಪ ನಿದ್ದೆ ಮಾಡಿದರೆ ಹೆಚ್ಚು ವಿಶ್ರಾಂತಿ ದೊರೆತಂತಾಗುತ್ತದೆ. ಅಲ್ಲದೆ ನವಚೈತನ್ಯ ದೊರಕಿದಂತಾಗುತ್ತದೆ. ಒಂದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ಮಲಗುವುದನ್ನು “ಪವರ್ ನ್ಯಾಪ್​” (Power Nap) ಎಂದು ಕರೆಯಲಾಗುತ್ತದೆ. ಹಗಲಿನಲ್ಲಿ ಮಲಗುವುದರಿಂದ ಅನೇಕ ಪ್ರಯೋಜನಗಳಿವೆ ಅವುಗಳ ಬಗ್ಗೆ ತಿಳಿಯುವುದು ಸೂಕ್ತ.

1. ಒತ್ತಡದ ನಿವಾರಣೆಗಾಗಿ ಹಗಲು -ರಾತ್ರಿ ಕೆಲಸ ಮಾಡುವ ಜನರಿಗೆ ಮಧ್ಯಾಹ್ನದ ನಿದ್ರೆ ಉತ್ತಮ ಪರಿಹಾರವಾಗಿದೆ. ಅವರು ಒಂದು ಗಂಟೆ ಮಲಗಿದರೆ  ಮತ್ತೆ ಕೆಲಸ ಮಾಡಲು ಸಿದ್ಧರಾಗುತ್ತಾರೆ. ನೀವು ಒತ್ತಡದಲ್ಲಿದ್ದಾಗ ಅಥವಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದಾಗ ಸ್ವಲ್ಪ ವಿರಾಮ ತೆಗೆದುಕೊಳ್ಳುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

2. ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ ಸೈಟೋಕಿನ್​ಗಳು ನಿದ್ರೆಯ ಸಮಯದಲ್ಲಿ ಉತ್ಪತ್ತಿಯಾಗುವ ಪ್ರೋಟೀನ್​ಗಳಾಗಿದೆ. ಇದು ದೇಹವನ್ನು ಸಕ್ರಿಯವಾಗಿರಿಸುತ್ತದೆ. ಮಧ್ಯಾಹ್ನದ ನಿದ್ದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ನಿದ್ರೆ ಬಹಳ ಮುಖ್ಯ. ಆಗ ಮಾತ್ರ ಮನುಷ್ಯ ಬೇಗನೆ ಚೇತರಿಸಿಕೊಳ್ಳುತ್ತಾನೆ.

3. ಮೆದುಳನ್ನು ಎಚ್ಚರಿಸುತ್ತದೆ ಹಗಲಿನ ನಿದ್ರೆ ಬುದ್ದಿ ಶಕ್ತಿಯನ್ನು ಸುಧಾರಿಸುತ್ತದೆ. ನಿಮ್ಮ ಮೆದುಳನ್ನು ಎಚ್ಚರಿಸುತ್ತದೆ. ಕೆಲವು ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ನಿದ್ರಿಸುತ್ತಾರೆ.  ಆದರೆ ಈ ನಿದ್ರೆ 10 ಥವಾ 20 ನಿಮಿಷಗಳಾಗಿರಬೇಕು. ಹಾಗಿದ್ದಾಗ ತುಂಬಾ ಸಕ್ರಿಯರಾಗಿ ಕೆಲಸ ನಿರ್ವಹಿಸಬಹುದು.

4. ಹೃದಯದ ಆರೋಗ್ಯಕ್ಕೆ ಸಹಕಾರಿ ಹಗಲಿನ ನಿದ್ರೆ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದು ದೇಹಕ್ಕೆ ಉತ್ತಮ ಪರಿಹಾರವನ್ನು ನೀಡುತ್ತದೆ.  ಆ ಮೂಲಕ ನೀವು ನಿಮ್ಮ ಹೃದಯವನ್ನು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ಸುರಕ್ಷಿತವಾಗಿ ರಕ್ಷಿಸಬಹುದು.

5. ನಿದ್ರೆ ಯಾವಾಗಲೂ ನಿಯಂತ್ರಣದಲ್ಲಿರಬೇಕು ಮಧ್ಯಾಹ್ನದ ನಿದ್ರೆ ಒಂದು ಗಂಟೆಯೊಳಗೆ ಇರಬೇಕು. ಇಲ್ಲದಿದ್ದರೆ ಬೊಜ್ಜು ಮತ್ತು ಆಲಸ್ಯ ಹೆಚ್ಚಾಗುತ್ತದೆ. ಇದರ ಜೊತೆಯಲ್ಲಿ, ಹೃದ್ರೋಗ ಮತ್ತು ಮಧುಮೇಹದ ಅಪಾಯವಿದೆ. ಆದ್ದರಿಂದ ನಿದ್ರೆ ಯಾವಾಗಲೂ ನಿಯಂತ್ರಣದಲ್ಲಿರಬೇಕು.

ಇದನ್ನೂ ಓದಿ: Snoring: ನಿದ್ರೆಯಲ್ಲಿ ಗೊರಕೆ ಏಕೆ ಬರುತ್ತದೆ? ಸಮಸ್ಯೆಯಿಂದ ಹೊರಬರಲು ಈ ಸಲಹೆಗಳನ್ನು ಅನುಸರಿಸಿ

Health Tips: ರಾತ್ರಿ ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಿಸಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್