Tv9 Impact: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಮೋಜು ಮಸ್ತಿ ಮಾಡಿದ್ದವರಿಗೆ ಪೊಲೀಸರಿಂದ ಎಚ್ಚರಿಕೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ನಡೆದ ಭೀಕರ ಅಪಘಾತದ ದೃಶ್ಯ ನೋಡಿದರೆ ಎದೆ ಜಲ್ಲ್ ಅನ್ನುತ್ತೆ. ಬೈಕ್ ನಿಲ್ಲಿಸುವ ಹೊತ್ತಿಗೆ ಯುವಕ- ಯುವತಿಗೆ ಕಾರೊಂದು ರಭಸವಾಗಿ ಬಂದು ಹೊಡೆದಿತ್ತು.
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಯುವಕ- ಯುವತಿಯರು ಮೋಜು ಮಸ್ತಿ ಮಾಡುತ್ತ ಅಪಾಯವನ್ನು ಬರ ಮಾಡಿಕೊಳ್ಳುತ್ತಿದ್ದಾರೆ ಅಂತ ಟಿವಿ9 ಡಿಜಿಟಲ್ ತಂಡ ಸೆ.17ಕ್ಕೆ ವರದಿ ಮಾಡಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಮೋಜು ಮಸ್ತಿ ಮಾಡಿದವರನ್ನು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಠಾಣೆಗೆ ಕರೆಯಿಸಿ ಐಎಂವಿ ಕಾಯಿದೆ ರೀತಿಯ ಕಾನೂನು ಕ್ರಮವಹಿಸಿ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ನಡೆದ ಭೀಕರ ಅಪಘಾತದ ದೃಶ್ಯ ನೋಡಿದರೆ ಎದೆ ಜಲ್ಲ್ ಅನ್ನುತ್ತೆ. ಬೈಕ್ ನಿಲ್ಲಿಸುವ ಹೊತ್ತಿಗೆ ಯುವಕ- ಯುವತಿಗೆ ಕಾರೊಂದು ರಭಸವಾಗಿ ಬಂದು ಹೊಡೆದಿತ್ತು. ಕಾರಿನ ರಭಸಕ್ಕೆ ಯುವಕ- ಯುವತಿ ಫ್ಲೈ ಓವರ್ ಕೆಳಗೆ ಬಿದ್ದಿದ್ದರು. ಇಬ್ಬರ ದೇಹ ಚಿದ್ರ ಚಿದ್ರವಾಗಿತ್ತು. ಈ ಘಟನೆ ನಡುಕ ಹುಟ್ಟಿಸಿತ್ತು. ಆದರೆ ಘಟನೆ ಮಾಸುವ ಮುನ್ನವೇ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಯುವಕ-ಯುವತಿಯರು ಮೋಜು ಮಸ್ತಿ ಮಾಡುತ್ತ ಅಪಾಯವನ್ನು ಬರ ಮಾಡಿಕೊಳ್ಳುತ್ತಿದ್ದರು.
ಯುವಕ-ಯುವತಿಯರ ತಂಡವೊಂದು ಅಪಘಾತ ನಡೆದ ಜಾಗದಲ್ಲಿ ಕಾರು ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡಿ ಹುಚ್ಚರಂತೆ ಮೋಜು ಮಸ್ತಿ ಮಾಡಿತ್ತು. KA 01MG 1929 ನಂಬರ್ನ ಕಾರಿನಲ್ಲಿ ಬಂದು ನಾಲ್ಕು ಜನ ಯುವಕ-ಯುವತಿಯರು ತಡೆಗೋಡೆಯ ಬಳಿ ಭರ್ಜರಿ ಡ್ಯಾನ್ಸ್ ಮಾಡಿದ್ದರು. ಕ್ಯಾಮೆರಾ ನೋಡಿದ್ದರೂ ಪೋಸ್ ಕೊಟ್ಟು ಡ್ಯಾನ್ಸ್ ಮಾಡಿದ್ದರು. ಈ ಬಗ್ಗೆ ಟಿವಿ9 ವರದಿ ಮಾಡಿತ್ತು.
ಈ ಬಗ್ಗೆ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿರುವ ಡಿಸಿಪಿ ಟ್ರಾಫಿಕ್ ಈಸ್ಟ್, ಮಾಧ್ಯಮದಲ್ಲಿ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಲೇಬೆನಲ್ಲಿ ಅನಾವಶ್ಯಕವಾಗಿ ನಿಂತುಕೊಂಡು ಕಾಲ ಕಳೆಯುತ್ತಿದ್ದ ಒಂದು ವಾಹನ ಮತ್ತು ಸವಾರರ ಬಗ್ಗೆ ವರದಿ ಪ್ರಸಾರವಾಗಿತ್ತು. ಅವರನ್ನು ಠಾಣೆಗೆ ಕರೆಸಿ ಈ ರೀತಿ ಪುನಾರವರ್ತನೆ ಆಗದಂತೆ ಎಚ್ಚರಿಕೆ ನೀಡಲಾಗಿದೆ ಅಂತ ತಿಳಿಸಿದೆ.
ಇದನ್ನೂ ಓದಿ
ಮೈಲಾರ ಮಲ್ಲಣ್ಣ ಅವತಾರವೆತ್ತಿ ಅಸುರರನ್ನು ಕೊಂದ ಶಿವ ಬೀದರ್ನ ಈ ದೇವಸ್ಥಾನದಲ್ಲಿ ಖಂಡೋಬಾನಾಗಿ ಪೂಜಿಸಲ್ಪಡುತ್ತಾನೆ!
(Police have warned those who dance on the electronic city flyover)
Published On - 10:43 am, Sun, 19 September 21