Gotra: ನಿಮ್ಮ ಗೋತ್ರ ತಿಳಿದಿಲ್ಲ ಎಂದಾದರೆ ಯಾವ ಗೋತ್ರ ಹೇಳಬೇಕು? ಧರ್ಮ ಶಾಸ್ತ್ರದಲ್ಲಿ ಅದರ ಸ್ವಾರಸ್ಯ ಮತ್ತು ಮಹತ್ವ ಏನು?

ಒಮ್ಮೆ ಭೂಮಿ ತನ್ನ ಒಡಲಲ್ಲಿ ಆದ ಅನಾಹುತಗಳಿಂದ ತನ್ನ ಕಕ್ಷೆಯಿಂದ ಜಾರುತ್ತಿರುವಾಗ, ಕಶ್ಯಪ ಮುನಿಯ ತಪಸ್ಸು ಶಕ್ತಿಯಿಂದ ಭೂಮಿಯನ್ನು ತನ್ನ ಊರು (ತೊಡೆ)ವಿನಲ್ಲಿ ಧರಿಸಿದ್ದರಿಂದ ಭೂಮಾತೆಗೆ ಉರ್ವಿ ಎಂಬ ಹೆಸರು ಬಂದಿದೆ.

Gotra: ನಿಮ್ಮ ಗೋತ್ರ ತಿಳಿದಿಲ್ಲ ಎಂದಾದರೆ ಯಾವ ಗೋತ್ರ ಹೇಳಬೇಕು? ಧರ್ಮ ಶಾಸ್ತ್ರದಲ್ಲಿ ಅದರ ಸ್ವಾರಸ್ಯ ಮತ್ತು ಮಹತ್ವ ಏನು?
ನಿಮ್ಮ ಗೋತ್ರ ತಿಳಿದಿಲ್ಲ ಎಂದಾದರೆ ಯಾವ ಗೋತ್ರ ಹೇಳಬೇಕು? ಧರ್ಮಶಾಸ್ತ್ರದಲ್ಲಿ ಅದರ ಸ್ವಾರಸ್ಯ ಮತ್ತು ಮಹತ್ವ ಏನು?

ಯಾರಿಗೆ ತಮ್ಮ ಗೋತ್ರ ತಿಳಿದಿಲ್ಲವೊ ಅವರು ತಮ್ಮ ಗೋತ್ರ ಕಶ್ಯಪ ಗೋತ್ರ ಎಂದು ಹೇಳಲು ಧರ್ಮಶಾಸ್ತ್ರದಲ್ಲಿ ತಿಳಿಸಲಾಗಿದೆ! ಹಾಗಾದರೆ ಧರ್ಮಶಾಸ್ತ್ರದಲ್ಲಿ ಅದರ ಮಹತ್ವ ಏನು ತಿಳಿಯೋಣ ಬನ್ನಿ

1. ಕಶ್ಯಪ ಮಹರ್ಷಿಗಳು ಈಗ ನಡೆಯುತ್ತಿರುವ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬರು ಮತ್ತು ಮೂಲ ಸಪ್ತ ಗೋತ್ರ (Clan, Lineage) ಪ್ರವರ್ತಕರಲ್ಲಿ ಮೊದಲಿಗರು.

2. ಬ್ರಹ್ಮನ ಮಗನಾದ ಮರೀಚಿ ಮತ್ತು ಮಹರ್ಷಿ ಕರ್ದಮ ಮುನಿಯ ಮಗಳಾದ ಕಲೆ ದಂಪತಿಗಳಿಗೆ ಜನಿಸಿದ ಸುಪುತ್ರ ಕಶ್ಯಪ ಮುನಿ.

3.ದಕ್ಷನ 13 ಪುತ್ರಿಯರಾದ ದಿತಿ, ಅದಿತಿ, ದನು, ಕಲಾ, ಗನಾಯು, ಕ್ರೋಧಾ, ಪ್ರಾಧಾ, ವಿನತೆ, ಕಪಿಲಾ, ಮುನಿ, ಕದ್ರು, ಸುರಸೆ ಮತ್ತು ಇಲೆ ಯರು ಕಶ್ಯಪ ಬ್ರಹ್ಮನ ಪತ್ನಿಯರು.

4. ಬ್ರಹ್ಮದೇವನ ಅಣತಿಯಂತೆ ಸೃಷ್ಟಿಕಾರ್ಯದಲ್ಲಿ ಕಶ್ಯಪ ಮುನಿಗಳು ತಮ್ಮ ಪತ್ನಿಯರಾದ ಅದಿತಿಯಿಂದ ಆದಿತ್ಯರು, ದಿತಿಯಿಂದ ದೈತ್ಯರು/ರಾಕ್ಷಸರು, ದನುಯಿಂದ ದಾನವರು, ಕಲಾಯಿಂದ ಕಾಲಕೇಯರು, ಗನಾಯುಯಿಂದ ಸಿದ್ಧರು, ಕ್ರೋಧೆಯಿಂದ ಪ್ರಾಣಿಗಳು, ಪ್ರಾದೆಯಿಂದ ಗಂಧರ್ವರು, ವಿನತೆಯಿಂದ ಅರುಣ ಮತ್ತು ಗರುಡ, ಕಪಿಲಾಯಿಂದ ಗೋವುಗಳು, ಮುನಿಯಲ್ಲಿ ಅಪ್ಸರೆಯರೂ, ಕದ್ರುಯಿಂದ ಸರ್ಪಗಳು, ಸುರಸೆಯಿಂದ ಯಕ್ಷರು, ಇಲೆಯಿಂದ ಮರ, ಬಳ್ಳಿ ಮತ್ತು ಹುಲ್ಲು ಮೊದಲಾದವರ ಉತ್ಪತ್ತಿಯಾಯಿತು.

5.ಮಹಾವಿಷ್ಣುವಿನ ಐದನೇ ವಾಮನಾವತಾರಿಗೆ ಕಶ್ಯಪ ಮಹರ್ಷಿಯೇ ಪಿತ.

6. ಒಮ್ಮೆ ಭೂಮಿ ತನ್ನ ಒಡಲಲ್ಲಿ ಆದ ಅನಾಹುತಗಳಿಂದ ತನ್ನ ಕಕ್ಷೆಯಿಂದ ಜಾರುತ್ತಿರುವಾಗ, ಕಶ್ಯಪ ಮುನಿಯ ತಪಸ್ಸು ಶಕ್ತಿಯಿಂದ ಭೂಮಿಯನ್ನು ತನ್ನ ಊರು (ತೊಡೆ)ವಿನಲ್ಲಿ ಧರಿಸಿದ್ದರಿಂದ ಭೂಮಾತೆಗೆ ಉರ್ವಿ ಎಂಬ ಹೆಸರು ಬಂದಿದೆ.

7. ಭಗವಾನ್ ಪರಶುರಾಮರು 21 ಬಾರಿ ಭೂ ಪ್ರದಕ್ಷಿಣೆ ಮಾಡಿ ದುಷ್ಟ ಕ್ಷತ್ರಿಯರನ್ನು ಧ್ವಂಸ ಮಾಡಿ, ತಾನು ಗೆದ್ದ ಭೂಮಿಯನ್ನು ಇದೇ ಕಶ್ಯಪ ಮುನಿಗೆ ದಾನ ಮಾಡಿದ್ದರಿಂದ ಭೂಮಿಗೆ ಕಶ್ಯಾಪಿ ಎಂಬ ಹೆಸರೂ ಬಂದಿದೆ.

8. ವರುಣ ದೇವನು ಗೋವುಗಳನ್ನು ಕಶ್ಯಪ ಮುನಿಗೆ ಅವಶ್ಯಕತೆಗಾಗಿ ಸಾಲದ ರೂಪದಲ್ಲಿ ನೀಡಿದ್ದು, ಮುಂದೆ ಹಿಂದಿರುಗಿಸಲು ಕೇಳಿದಾಗ ತನ್ನಿಬ್ಬರು ಪತ್ನಿಯರ ಮಾತಿಗೆ ಗೋವುಗಳನ್ನು ವರುಣ ದೇವನಿಗೆ ಹಿಂದಿರುಗಿಸಲು ಒಪ್ಪದೇ ಇದ್ದಾಗ, ವರುಣ ದೇವನ ಶಾಪಕ್ಕೆ ಗುರಿಯಾಗಿ ಮುಂದೆ ಕಶ್ಯಪರು ಯಾದವ ಕುಲದ ವಾಸುದೇವ ಮತ್ತು ತನ್ನಿಬ್ಬರು ಪತ್ನಿಯರು ದೇವಕಿ ಮತ್ತು ರೋಹಿಣಿಯಾಗಿ ಜನ್ಮವೆತ್ತಿದರು ಮುಂದೆ ವಿಷ್ಣುವಿನ 8ನೇ ಅವತಾರವಾದ ಶ್ರೀ ಕೃಷ್ಣ ಪರಮಾತ್ಮನ ತಂದೆಯಾಗುವ ಸೌಭಾಗ್ಯ ದೊರೆಯಿತು.

9. ಭಗವಾನ್ ಪರಶುರಾಮರಿಗೂ ಮತ್ತು ಶ್ರೀರಾಮಚಂದ್ರ ಪ್ರಭುವಿಗೂ ಕಶ್ಯಪ ಮುನಿಗಳು ಪುರೋಹಿತರಾಗಿದ್ದರು. ನೀಲಮತ ಪುರಾಣದ ಪ್ರಕಾರ ಈಗಿನ ಕಾಶ್ಮೀರವಿರುವ ಸ್ಥಳದಲ್ಲಿ ’ಸತೀಸರ’ಎನ್ನುವ ಬಹುದೊಡ್ಡ ಸರೋವರವಿತ್ತಂತೆ. ಶಿವ ಸತಿಯರಿಗೆ ಅದು ತುಂಬಾ ಪ್ರಿಯವಾದ ಸರೋವರವಾಗಿದ್ದರಿಂದ ಕಶ್ಯಪರು ಈ ಸರೋವರವನ್ನು ಶಿವ ಸತಿಯರಿಗೆ ಬಳುವಳಿಯಾಗಿ ಕೊಟ್ಟಿದ್ದರಂತೆ.

ಆದರೆ ಆ ಸರೋವರದಲ್ಲಿ ಜಲೋಧ್ಭವ ಎನ್ನುವ ರಾಕ್ಷಸ ಅಡಗಿಕೊಂಡು ಕಶ್ಯಪರ ಸಂತಾನಗಳಿಗೆ ಕಿರುಕುಳ ಕೊಡುತ್ತಿದ್ದ. ಆಗ ಕಶ್ಯಪರು ಅವರ ಮಗ ’ಅನಂತ ನಾಗ’ನ ಜೊತೆಗೂಡಿ ಒಂದು ವರಾಹ ಮುಖ (ಇಂದಿನ ಬಾರಮುಲ್ಲ) ಎನ್ನುವ ಕಣಿವೆಯನ್ನು ಕಡಿದು ಆ ಸರೋವರದ ನೀರನ್ನು ಹೊರ ಹರಿಸುತ್ತಾರೆ. ಹೀಗೆ ಹರಿದ ನೀರು ಪಶ್ಚಿಮದ ಇನ್ನೊಂದು ಕಣಿವೆಗೆ ಹರಿಯುತ್ತದೆ. ಅದನ್ನು ಕಶ್ಯಪ ಸಾಗರವೆಂದೂ (ಇಂದಿನ ಕ್ಯಾಸ್ಪಿಯನ್‌ ಸಮುದ್ರ) ಕರೆಯುತ್ತಾರೆ.

ನಂತರ ವಿಷ್ಣು ಆ ಜಲೋಧ್ಭವ ರಾಕ್ಷಸರ ಸಂಹಾರ ಮಾಡುತ್ತಾರೆ. ಹೀಗೆ ಬರಿದು ಮಾಡಿದ ಸರೋವರದ ತಪ್ಪಲಿನಲ್ಲಿ ವೇದ ವ್ಯಾಸಂಗಕ್ಕೆಂದೇ ವಿಶೇಷವಾಗಿ ಒಂದು ಪವಿತ್ರ ಕ್ಷೇತ್ರವನ್ನು ನಿರ್ಮಿಸುತ್ತಾರೆ. ಅದನ್ನು ಕಶ್ಯಪರ ಮೈರಾ, ಕಶ್ಯಪ ಪುರ, ಕ್ರಮೇಣ ಕಾಶ್ಮೀರದ ಉದ್ಭವವಾಗುತ್ತದೆ.

ಈ ಸುಂದರ ಕಾಶ್ಮೀರವನ್ನು ನೋಡಲು ಮುಂದೆ ಗೌರಿಯೂ ಗಣೇಶನ ಜೊತೆ ಹಿಮಚ್ಚಾದಿತ ಪರ್ವತ ಮಾರ್ಗವಾಗಿ ಬರುತ್ತಿದ್ದಳು. ಅದನ್ನು ‘ಗೌರೀ ಮಾರ್ಗ’ ಎಂದು ಕರೆಯುತ್ತಿದ್ದರು. ಅದೂ ಸಹಾ ಇಸ್ಲಾಮೀಕರಣಗೊಂಡು ‘ಗುಲ್ಮಾರ್ಗ’ ವಾಗಿದೆ. ’ನೀಲಮತಿ ಪುರಾಣ’ ಮತ್ತು ಅದರ ಆಧಾರಿತ ’ರಾಜತರಂಗಿಣಿ’ ಇವು ಕಾಶ್ಮೀರದ ಪೌರಾಣಿಕ ಮತ್ತು ಐತಿಹಾಸಕದ ದಾಖಲೆಗಳು. ಹನ್ನೆರಡನೇ ಶತಮಾನದಲ್ಲಿ ’ಕಲ್ಹಣ’ ಎಂಬ ಪಂಡಿತರು ಬರೆದ ಗ್ರಂಥಗಳ ಸರಮಾಲೆ ವಿಶ್ವದೆಲ್ಲೆಡೆ ಬಹಳ ಕುತೂಹಲ ಮತ್ತು ಆಸ್ಥೆಯಿಂದ ಅಭ್ಯಸಿಸಲಾಗುತ್ತಿದೆ.

(importance of kashyapa gotra and details)

Read Full Article

Click on your DTH Provider to Add TV9 Kannada