Daily Horoscope: ಹೊಸ ಉದ್ಯಮದ ಯೋಚನೆಯನ್ನು ಸದ್ಯ ಕೈ ಬಿಡುವುದು ಒಳ್ಳೆಯದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಅಕ್ಟೋಬರ್ 05: ಸಾಲವೇ ನಿಮಗೆ ಸಾಲವಾಗದು. ಅನಾರೋಗ್ಯದ ಕಾರಣ ಆರ್ಥಿಕ ಮಟ್ಟವು ಕುಸಿಯುವುದು. ಹೆಚ್ಚಿನ ಆರ್ಥಿಕಮೂಲವನ್ನೂ ಪಡೆಯಲು ಕಷ್ಟವಾದೀತು. ಹೊಸ ಉದ್ಯಮದ ಯೋಚನೆಯನ್ನು ಸದ್ಯ ಕೈ ಬಿಡುವುದು ಒಳ್ಳೆಯದು. ಹಾಗಾದರೆ ಅಕ್ಟೋಬರ್ 05ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಸ್ವಾತಿ, ಯೋಗ: ವಿಷ್ಕಂಭ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:22 ರಿಂದ 10:52, ಯಮಘಂಡ ಕಾಲ ಮಧ್ಯಾಹ್ನ 01:50ರಿಂದ 03: 19ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:24 ರಿಂದ 07:53 ರವರೆಗೆ.
ಸಿಂಹ ರಾಶಿ: ನಿಮ್ಮ ವ್ಯಕ್ತಿತ್ವದಿಂದ ಯಾರಾದರೂ ಆಕರ್ಷಿತರಾಗಹುದು. ಮಕ್ಕಳಿಂದ ನಿಮ್ಮ ತೊಂದರೆ ದೂರಾಗುವುದು. ಸಾಲವೇ ನಿಮಗೆ ಸಾಲವಾಗದು. ಅನಾರೋಗ್ಯದ ಕಾರಣ ಆರ್ಥಿಕ ಮಟ್ಟವು ಕುಸಿಯುವುದು. ಹೆಚ್ಚಿನ ಆರ್ಥಿಕಮೂಲವನ್ನೂ ಪಡೆಯಲು ಕಷ್ಟವಾದೀತು. ಹೊಸ ಉದ್ಯಮದ ಯೋಚನೆಯನ್ನು ಸದ್ಯ ಕೈ ಬಿಡುವುದು ಒಳ್ಳೆಯದು. ನಿಮ್ಮ ಕುಂದುಕೊರತೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲು ಇಚ್ಛೆಪಡುವುದಿಲ್ಲ. ಆಪ್ತರ ಜೊತೆ ನೋವು ಎಲ್ಲವನ್ನೂ ಮರೆಯಲು ಸುತ್ತಾಡಲಿದ್ದೀರಿ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ಅಧಿಕಾರಕ್ಕಾಗಿ ನೀವು ತಂತ್ರವನ್ನು ಬಳಸಬಹುದು. ಮಕ್ಕಳಿಗೆ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತೆಯಿಂದ ಇರುವುದು ಸುಖವೆನಿಸಬಹುದು. ಸರ್ಕಾರದ ಕೆಲಸವನ್ನು ಬಹಳ ಕಷ್ಟದಿಂದ ಮಾಡಿಸಿಕೊಳ್ಳಬೇಕು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ಹಾಗೆಯೇ ಉಳಿಯದು.
ಕನ್ಯಾ ರಾಶಿ; ಔಷದೀಯ ವ್ಯಾಪಾರದಲ್ಲಿ ಗಣನೀಯ ಪ್ರಗತಿಯು ಕಾಣಿಸುವುದು. ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ನಿಮ್ಮ ಬಳಿ ಅಪರಿಚಿತರು ಸಹಾಯವನ್ನು ಕೇಳಿಕೊಂಡು ಬರಬಹುದು. ಇಲ್ಲ ಎನದೇ ಅಲ್ಪವನ್ನಾದರೂ ದಾನಮಾಡಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ. ಯಾವ ಹೊರೆಯನ್ನೂ ನೀವು ಹೊರಲು ಸಿದ್ಧರಾಗುವುದಿಲ್ಲ. ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಕಾರ್ಯವನ್ನು ಮಾಡುವ ಯೋಚನೆ ಇರಲಿದೆ. ಅಧಿಕ ಕಾರ್ಯಗಳು ಇರಲಿದ್ದು ನಿಮಗೆ ಯಾವುದೂ ಸೂಚಿಸದೇ ಹೋಗಬಹುದು. ಮನಬಂದಂತೆ ಯಾರ ಬಗ್ಗೆಯೂ ಮಾತನಾಡುವುದು ಬೇಡ. ಬಂಧುಗಳ ಜೊತೆ ನಿಮ್ಮ ವಿಚಾರವನ್ನು ಹಂಚಿಕೊಂಡು ಸಮಾಧಾನ ಪಡುವಿರಿ. ಭವಿಷ್ಯದ ಬಗ್ಗೆ ಚಿಂತೆಯೂ ಕಾಡಬಹುದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ಮಕ್ಕಳ ತೀರ್ಮಾನಕ್ಕೆ ನೀವು ಬದ್ಧರಾಗಬೇಕಾಗುವುದು. ಅಪರಿಚಿತರ ಜೊತೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಿರಿ.
ತುಲಾ ರಾಶಿ: ನಿಮ್ಮ ಖರ್ಚಿನ ಅಂದಾಜು ಮೀರಿದಂತೆ ನಿಮಗೆ ಕಾಣಿಸಬಹುದು. ನಿಮಗೆ ಸಿಗುವ ಜಯದಿಂದ ಕುಟುಂಬಕ್ಕೆ ಸಂತಸ. ಒಂಟಿಯಾಗಿ ಇದ್ದಷ್ಟೂ ನಿಮಗೆ ಏನೇನೋ ಯೋಚನೆಗಳು ಬರಬಹುದು. ನಿಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ. ಕೆಲವು ಪ್ರಗತಿಗಳು ನಿಮಗೆ ಆಶ್ಚರ್ಯಕರ ಎನಿಸುವುದು. ಜಾಣತನದಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಬೇಕಾಗಬಹುದು. ಇಂದು ನಿಮಗೆ ಎಲ್ಲ ಕಾರ್ಯಗಳೂ ವಿಳಂಬವಾಗಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲದೇ ಹೋಗಬಹುದು. ನೀವು ನಡೆಸುವ ಉದ್ಯಮಕ್ಕೆ ನೀವು ವೇಗವನ್ನು ಕೊಡುವಿರಿ. ವಿದೇಶಪ್ರಯಾಣಕ್ಕೆ ನಿಮಗೆ ಅವಕಾಶಗಳು ಬರಬಹುದು. ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡುವಿರಿ. ಆತ್ಮೀಯರ ಒಡನಾಟದಿಂದ ನಿಮಗೆ ಖುಷಿಯಾಗಲಿದೆ. ವಿವಾದವನ್ನು ಮಾಡಿಕೊಳ್ಳಲು ಮನಸ್ಸಾಗದು. ವಿಶ್ವಾಸವನ್ನು ಉಳಿಸಿಕೊಳ್ಳುವ ಬಗ್ಗೆ ನಿಮ್ಮ ಪ್ರಯತ್ನ ಇರುವುದು.
ವೃಶ್ಚಿಕ ರಾಶಿ: ಎಲ್ಲವನ್ನೂ ಸಂಭ್ರಮಿಸಿದರೆ ಯಾವುದೂ ಕಷ್ಟವೆನಿಸದು. ನಿಮ್ಮ ಸಮಾನರಿಗೂ ಕೆಲವು ಸಂದರ್ಭದಲದಲಿ ಗೌರವ ಕೊಡಬೇಕಾಗುವುದು. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಆಗದು. ದ್ವಂದ್ವಗಳು ಬಂದಾಗ ಎದುರಿಸುವ ಬಗ್ಗೆ ಯೋಚಿಸಿ. ಆಪ್ತರ ಭೇಟಿಯಾಗುವ ನಿಮ್ಮ ಕಾರ್ಯವು ಸಫಲವಾಗದು. ಅಧಿಕಾರಿ ವರ್ಗ ನಿಮ್ಮ ಮೇಲೆ ಬಂದ ದೂರಿನ ವಿಚಾರಣೆಯನ್ನು ಮಾಡಬಹುದು. ಸ್ತ್ರೀಯರ ಸಖ್ಯವನ್ನು ನೀವು ಮಾಡಿಕೊಳ್ಳುವಿರಿ. ಹಿತಶತ್ರುಗಳನ್ನು ಹಿಮ್ಮೆಟ್ಟಿಸಲು ನಿಮಗೆ ಕೆಲವು ತಂತ್ರಗಳು ಗೊತ್ತಿರುವುದು. ಅದನ್ನು ಪ್ರಯೋಗಿಸುವಿರಿ. ನಿಮ್ಮ ಅಗಾಧ ಜ್ಞಾನದ ಬಗ್ಗೆ ಸ್ಥೈರ್ಯವು ಬೇಕು. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಕೆಲವು ಅನುಭವಗಳು ನಿಮಗೆ ಪಾಠವಾಗಬಹುದು.