ಜನ್ಮದಿನದಂದೇ ನಾಲ್ಕನೇ ಮದುವೆ; ಇಲ್ಲಿದೆ ವನಿತಾ ವಿಜಯ್ಕುಮಾರ್ ಹಳೆಯ ವಿವಾಹದ ಕಥೆಗಳು
ನಟಿ ವನಿತಾ ವಿಜಯ್ಕುಮಾರ್ ಅವರು ಈಗಾಗಲೇ ಮೂರು ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ. ಈಗ 4ನೇ ಮದುವೆಗೆ ತಯಾರಾಗಿದ್ದಾರೆ. ಬಾಯ್ಫ್ರೆಂಡ್ ರಾಬರ್ಟ್ಗೆ ವನಿತಾ ಅವರೇ ಪ್ರಪೋಸ್ ಮಾಡಿದ್ದಾರೆ. ಬರ್ತ್ಡೇ ದಿನವೇ ಅವರು ವಿವಾಹ ಆಗುತ್ತಿದ್ದಾರೆ.
ತಮಿಳು ನಟಿ ವನಿತಾ ವಿಜಯ್ಕುಮಾರ್ ಅವರಿಗೆ ಇಂದು (ಅಕ್ಟೋಬರ್ 5) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದು ಮದುವೆ ವಿಚಾರಕ್ಕೆ. ಈಗಾಗಲೇ ಮೂರು ಬಾರಿ ಸಂಸಾರದಲ್ಲಿ ವೈಫಲ್ಯ ಕಂಡಿದ್ದಾರೆ. ನಾಲ್ಕನೇ ಮದುವೆಯನ್ನು ಅವರು ತಮ್ಮ ಬರ್ತ್ಡೇ ದಿನವೇ ಆಗುತ್ತಿದ್ದಾರಂತೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರಿಗೆ ಒಂದೇ ದಿನ ಎರಡು ಕಾರಣಕ್ಕೆ ವಿಶ್ ಮಾಡಲಾಗುತ್ತಿದೆ.
ವನಿತಾ ಅವರು ಇತ್ತೀಚೆಗೆ ಮದುವೆ ಬಗ್ಗೆ ಘೋಷಣೆ ಮಾಡಿದ್ದರು. ‘ದಿನವನ್ನು ಸೇವ್ ಮಾಡಿಕೊಳ್ಳಿ. ಅಕ್ಟೋಬರ್ 5’ ಎಂದು ಅವರು ಬರೆದುಕೊಂಡಿದ್ದರು. ಅಕ್ಟೋಬರ್ 5 ಅವರ ಜನ್ಮದಿನ. ಈ ದಿನವೇ ಅವರ ವಿವಾಹವು ಕೊರಿಯೋಗ್ರಾಫರ್ ರಾಬರ್ಟ್ ಜೊತೆ ನಡೆಯುತ್ತಿದೆ. ಈ ವಿಚಾರ ಅವರ ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದೆ.
ಎರಡನೇ ಮದುವೆ ಎಂದಾಗಲೇ ಕೆಲವರು ಗುಟ್ಟು ಕಾಪಾಡಿಕೊಳ್ಳುತ್ತಾರೆ. ಯಾವುದೇ ಆಡಂಬರ ಇಲ್ಲದೆ ವಿವಾಹ ಆಗೋಣ ಎಂದು ಭಾವಿಸುತ್ತಾರೆ. ಆದರೆ, ವನಿತಾಗೆ ಇದು ನಾಲ್ಕನೇ ವಿವಾಹ. ಮೊದಲ ಮದುವೆಗೆ ತೋರಿದ್ದ ಉತ್ಸಾಹವನ್ನೇ ಅವರು ಈಗಲೂ ತೋರಿಸುತ್ತಿದ್ದಾರೆ ಅನ್ನೋದು ವಿಶೇಷ. ಬ್ರೇಕಪ್ ಬಳಿಕ ಪ್ಯಾಚಪ್ ಮಾಡಿಕೊಂಡು ಮದುವೆ ಆಗುತ್ತಿದ್ದಾರೆ.
ರಾಬರ್ಟ್ ಹಾಗೂ ವನಿತಾ ಡೇಟಿಂಗ್ ಆರಂಭಿಸಿದ್ದು 11 ವರ್ಷಗಳ ಹಿಂದೆ. 2013ರಲ್ಲಿ ಇವರು ಭೇಟಿ ಆಗಿದ್ದರು. 2015ರಲ್ಲಿ ‘ಎಂಜಿಆರ್ ಶಿವಾಜಿ ರಜಿನಿ ಕಮಲ್’ ಹೆಸರಿನ ಸಿನಿಮಾನ ವನಿತಾ ನಿರ್ಮಾಣ ಮಾಡಿದರೆ, ರಾಬರ್ಟ್ ಅವರು ಈ ಚಿತ್ರ ನಿರ್ದೇಶನ ಮಾಡಿ, ನಟಿಸಿದ್ದರು ಕೂಡ. 2017ರಲ್ಲಿ ಇವರು ಬೇರೆ ಆಗಿದ್ದರು. ಈಗ ಮತ್ತೆ ಒಂದಾಗಿದ್ದು, ಮದುವೆ ಕೂಡ ಆಗುತ್ತಿದ್ದಾರೆ.
ಹಳೆಯ ಮದುವೆಗಳು
200ನೇ ಇಸ್ವಿಯಲ್ಲಿ ನಟ ಆಕಾಶ್ನ ಇವರು ಮದುವೆ ಆದರು. ಐದೇ ವರ್ಷಕ್ಕೆ ಅಂದರೆ 2005ರಲ್ಲಿ ಇವರು ಬೇರೆ ಆದರು. ಮಗನ ಹಕ್ಕನ್ನು ಪಡೆಯಲು ಇಬ್ಬರೂ ಕಿತ್ತಾಡಿದ್ದರು. 2007ರಲ್ಲಿ ವನಿತಾ ಉದ್ಯಮಿ ಆನಂದ್ ಜಯ್ ರಾಜನ್ ಅವರನ್ನು ವಿವಾಹ ಆದರು. 2012ರಲ್ಲಿ ಇವರ ಸಂಬಂಧ ಕೊನೆ ಆಯಿತು. 2020ರಲ್ಲಿ ಫೋಟೋಗ್ರಾಫರ್ ಪೀಟರ್ ಪೌಲ್ನ ಮದುವೆ ಆದರು. ಪೀಟರ್ಗೆ ಆಗಲೇ ಒಂದು ಮದುವೆ ಆಗಿತ್ತು. ಹೀಗಾಗಿ, ಇಬ್ಬರೂ ಬೇರೆ ಆದರು.
2013ರಲ್ಲೇ ವನಿತಾ ಹಾಗೂ ರಾಬರ್ಟ್ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಇತ್ತು. ಆ ವೇಳೆ ಅವರು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದರು. ತಾವು ವಿವಾಹ ಆಗಿಲ್ಲ ಎನ್ನುವ ವಿವಾರವನ್ನು ಅವರು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: 4ನೇ ಮದುವೆ ಆಗಲಿರುವ ನಟಿ ವನಿತಾ ವಿಜಯ್ಕುಮಾರ್; ಹಳೇ ಗೆಳೆಯನಿಗೆ ಮಂಡಿಯೂರಿ ಪ್ರಪೋಸ್
ಶಿಲ್ಪಾ ಅವರು 1989ರಲ್ಲಿ ‘ಭ್ರಷ್ಟಾಚಾರ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 2000ನೇ ಇಸ್ವಿಯಲ್ಲಿ ರಿಲೀಸ್ ಆದ ‘ಗಜ ಗಾಮಿನಿ’ ಅವರ ಕೊನೆಯ ಸಿನಿಮಾ. ಇದಾದ ಬಳಿಕ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:50 am, Sat, 5 October 24