ಎಲ್ಲಿಯೂ ಮೇಕಪ್ ಇಲ್ಲದೆ ನಟಿಸಿದ್ದದ ಐಶ್ವರ್ಯಾ; ಆ ಸಿನಿಮಾ ಸೂಪರ್ ಹಿಟ್
ಐಶ್ವರ್ಯ ರೈ ಅವರು ‘ತಾಲ್’ ಚಿತ್ರದಲ್ಲಿ ಮೇಕ್ಅಪ್ ಇಲ್ಲದೆ ನಟಿಸಿದ್ದರು. ಈ ಚಿತ್ರಕ್ಕೆ ಹೆಚ್ಚಿನ ಯಶಸ್ಸು ತಂದುಕೊಟ್ಟಿತ್ತು. ನಿರ್ದೇಶಕ ಸುಭಾಷ್ ಘಾಯ್ ಅವರ ನಿರ್ಧಾರ ಇದಕ್ಕೆ ಕಾರಣ. 1999 ರಲ್ಲಿ ಬಿಡುಗಡೆಯಾದ ಈ ಚಿತ್ರ ಭಾರಿ ಯಶಸ್ಸು ಕಂಡಿತು. ಐಶ್ವರ್ಯರ ನೈಸರ್ಗಿಕ ಸೌಂದರ್ಯ ಹಾಗೂ ಅಭಿನಯ ಪ್ರೇಕ್ಷಕರ ಮನ ಗೆದ್ದಿತು.
ಐಶ್ವರ್ಯಾ ರೈ ಅವರ ಸೌಂದರ್ಯಕ್ಕೆ ಯಾರೂ ಸಾಟಿ ಇಲ್ಲ. ಬಾಲಿವುಡ್ನಲ್ಲಿ ಅವರು ಮಾಡಿರೋ ಹೆಸರು ತುಂಬಾನೇ ದೊಡ್ಡದು. ಅವರಿಗೆ ವಿಶ್ವ ಮಟ್ಟದಲ್ಲಿ ಖ್ಯಾತಿ ಸಿಕ್ಕಿದೆ. ಅವರು ಇತ್ತೀಚೆಗೆ ಸಿನಿಮಾ ಮಾಡೋದು ಕಡಿಮೆ ಆಗಿದೆ. ಆದರೆ, ಮೊದಲು ಈ ರೀತಿ ಇರಲಿಲ್ಲ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಪೈಕಿ ‘ತಾಲ್’ ಚಿತ್ರ ಕೂಡ ಒಂದು. ಅನಿಲ್ ಕಪೂರ್, ಅಕ್ಷಯ್ ಖನ್ನಾ, ಐಶ್ವರ್ಯಾ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಅಮ್ರೀಶ್ ಪುರಿ, ಅಲೋಕ್ ನಾಥ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
1999ರ ಆಗಸ್ಟ್ 13ರಂದು ‘ತಾಲ್’ ರಿಲೀಸ್ ಆಯಿತು. ಸಂಗೀತ ಕೂಡ ಪ್ರಾಮುಖ್ಯತೆ ಪಡೆದಿತ್ತು. 11 ಕೋಟಿ ರೂಪಾಯಿ ಬಜೆಟ್ನ ಈ ಚಿತ್ರ ಆಗಿನ ಕಾಲದಲ್ಲೇ 51 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಸಿನಿಮಾ ಉದ್ದಕ್ಕೂ ಐಶ್ವರ್ಯಾ ಅವರು ಎಲ್ಲಿಯೂ ಮೇಕಪ್ ಮಾಡಿಕೊಂಡಿರಲಿಲ್ಲ.
ಚಿತ್ರದ ನಿರ್ದೇಶಕ ಸುಭಾಷ್ ಘಾಯ್ ಅವರೇ ಈ ಚಿತ್ರ ನಿರ್ಮಾಣ ಮಾಡಿದ್ದರು. ‘ನನ್ನ ನಾಯಕಿಯರಿಗೆ ಮೇಕಪ್ ಬಳಕೆಯನ್ನು ಮಿತಿಗೊಳಿಸುವಂತೆ ನಾನು ಯಾವಾಗಲೂ ಕೇಳಿಕೊಳ್ಳುತ್ತೇನೆ. ಏಕೆಂದರೆ ಅದು ನಿಜವಾದ ಭಾವನೆಗಳನ್ನು ತರುತ್ತದೆ. ತಾಲ್ ಚಿತ್ರದಲ್ಲಿ ಐಶ್ವರ್ಯ ಅವರಿಗೇ ಮೇಕಪ್ ಮಾಡೋದು ಬೇಡ ಎಂದಿದ್ದೆ. ಅವರು ಎಲ್ಲಿಯೂ ಮೇಕಪ್ ಹಾಕಿರಲಿಲ್ಲ’ ಎಂದಿದ್ದಾರೆ ಅವರು.
‘ಐಶ್ವರ್ಯಾ ಬಳಿ ಸ್ವಲ್ಪವೂ ಮೇಕಪ್ ಮಾಡದಂತೆ ನಾನು ಕೋರಿದ್ದೆ’ ಎಂದಿದ್ದಾರೆ ಸುಭಾಷ್. ಕೊನೆಗೂ ನಿರ್ದೇಶಕರ ಕೋರಿಕೆ ಈಡೇರಿತು. ಐಶ್ವರ್ಯಾ ಅವರು ಮೇಕಪ್ ಇಲ್ಲದೆ ಮತ್ತಷ್ಟು ಸುಂದರವಾಗಿ ಕಾಣಿಸಿದರು. ಸಿನಿಮಾ ಸೂಪರ್ ಹಿಟ್ ಆಯಿತು. ನಿರ್ದೇಶಕರಿಗೂ ಈ ವಿಚಾರ ಸಾಕಷ್ಟು ಅಚ್ಚರಿ ತಂದಿತ್ತು. ಜನರು ಸಿನಿಮಾ ನೋಡಿ ಮೆಚ್ಚಿಕೊಂಡರು. ಈ ಚಿತ್ರ ಐಶ್ವರ್ಯಾ ವೃತ್ತಿ ಜೀವನದಲ್ಲಿ ವಿಶೇಷ ಸಿನಿಮಾ ಎನಿಸಿಕೊಂಡಿದೆ.
ಇದನ್ನೂ ಓದಿ: ಐಶ್ವರ್ಯಾ ರೈ ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್; ಈ ಫೋಟೋದಲ್ಲಿದೆ ಅಸಲಿ ವಿಷಯ
ಐಶ್ವರ್ಯಾ ರೈ ಅವರು ಕುಟುಂಬದ ಜೊತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಅವರು ಅಭಿಷೇಕ್ ಬಚ್ಚನ್ ಜೊತೆ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.