AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೀತಿಗೆ ವಯಸ್ಸಿಲ್ಲ’: 40 ವರ್ಷದ ಕಿರಿ ನಟಿಯ ಜೊತೆ ಹಿರಿಯ ನಟನ ಡೇಟಿಂಗ್?

ಬಾಲಿವುಡ್ ನಟ ಗೋವಿಂದ್ ನಾಮದೇವ್ ಅವರು 40 ವರ್ಷ ಕಿರಿಯ ನಟಿ ಶಿವಾಂಗಿ ವರ್ಮಾ ಅವರೊಂದಿಗಿನ ಫೋಟೋ ವೈರಲ್ ಆಗಿದ್ದು, ಡೇಟಿಂಗ್ ಸುದ್ದಿ ಹರಡಿದೆ. ಆದರೆ, ಗೋವಿಂದ್ ಅವರು ಇದು ತಮ್ಮ ಮುಂಬರುವ ಚಿತ್ರ "ಗೌಹರಗಂಜವಾಲೆ" ಚಿತ್ರೀಕರಣದ ಭಾಗ ಎಂದು ಸ್ಪಷ್ಟಪಡಿಸಿದ್ದಾರೆ. ಪತ್ನಿ ಸುಧಾ ಅವರ ಮೇಲಿನ ತಮ್ಮ ಪ್ರೀತಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ಫೋಟೋ ಚಿತ್ರದ ಪ್ರಚಾರಕ್ಕಾಗಿ ಎಂದು ತಿಳಿದುಬಂದಿದೆ.

‘ಪ್ರೀತಿಗೆ ವಯಸ್ಸಿಲ್ಲ’: 40 ವರ್ಷದ ಕಿರಿ ನಟಿಯ ಜೊತೆ ಹಿರಿಯ ನಟನ ಡೇಟಿಂಗ್?
Govinda Namdev Shivangi
 ಶ್ರೀಲಕ್ಷ್ಮೀ ಎಚ್
| Edited By: |

Updated on:Dec 20, 2024 | 9:38 PM

Share

ಬಾಲಿವುಡ್ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುವ ನಟ ಗೋವಿಂದ್ ನಾಮದೇವ್, ಎಪ್ಪತ್ತನೇ ವಯಸ್ಸಿನಲ್ಲಿ ನಟಿಯೊಂದಿಗಿನ ಸುತ್ತಾಟದ ಕಾರಣಕ್ಕೆ ಸುದ್ದಿ ಆಗಿದ್ದಾರೆ. ಗೋವಿಂದ್ ನಾಮದೇವ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ನಟಿ ಶಿವಾಂಗಿ ವರ್ಮಾ ಅವರೊಂದಿಗಿನ ಅವರ ಚಿತ್ರವೊಂದು ಎಲ್ಲರ ಗಮನ ಸೆಳೆದಿದೆ. ಅಷ್ಟೇ ಅಲ್ಲ, ಫೋಟೋಗೆ ನಟಿ ನೀಡಿರುವ ಕ್ಯಾಪ್ಷನ್ ಓದಿದ ಫ್ಯಾನ್ಸ್ ಹುಬ್ಬು ಏರಿಸಿದ್ದಾರೆ.

‘ಪ್ರೀತಿಗೆ ವಯಸ್ಸಿಲ್ಲ, ಮಿತಿಯಿಲ್ಲ’ ಎಂದು ಶಿವಾಂಗಿ ಈ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಆ ಬಳಿಕ ಇಬ್ಬರ ಸಂಬಂಧ ಚರ್ಚೆಗೆ ಬಂದಿದೆ. 70 ವರ್ಷದ ಗೋವಿಂದ್ ನಾಮದೇವ್ ತನಗಿಂತ 40 ವರ್ಷ ಕಿರಿಯ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರಾ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಅನೇಕರು ಇದನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಈ ಚರ್ಚೆಗಳಿಗೆ ಕೊನೆಗೂ ಗೋವಿಂದ್ ನಾಮದೇವ್ ಪ್ರತಿಕ್ರಿಯಿಸಿದ್ದಾರೆ.

ಶಿವಾಂಗಿ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ‘ಇದು ನಿಜ ಜೀವನವಲ್ಲ ಆದರೆ ರೀಲ್ ಜೀವನ’ ಎಂದು ಅವರು ಬರೆದಿದ್ದಾರೆ. ‘ಗೌಹರಗಂಜ್ವಾಲೆ ಎಂಬ ಸಿನಿಮಾ ಇದೆ. ಈ ಚಿತ್ರದ ಚಿತ್ರೀಕರಣವನ್ನು ಇಂದೋರ್‌ನಲ್ಲಿ ನಡೆಸುತ್ತಿದ್ದೇವೆ. ಇದೇ ಸಿನಿಮಾದ ಕಥೆ. ಇದರಲ್ಲಿ ಮುದುಕನೊಬ್ಬ ಚಿಕ್ಕ ಹುಡುಗಿಯನ್ನು ಪ್ರೀತಿಸುತ್ತಾನೆ. ನನ್ನ ನಿಜ ಜೀವನದ ಬಗ್ಗೆ ಹೇಳುವುದಾದರೆ, ಈ ಜನ್ಮದಲ್ಲಿಯೂ ನಾನು ಯಾವುದೇ ಯುವಕ ಅಥವಾ ಹಿರಿಯರನ್ನು ಪ್ರೀತಿಸಲು ಸಾಧ್ಯವಿಲ್ಲ. ನನ್ನ ಸುಧಾ.. ನನ್ನ ಉಸಿರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮದುವೆ ವಿಷಯ ಬಚ್ಚಿಟ್ಟದ್ದ ಬಾಲಿವುಡ್ ನಟಿ ತಾಪ್ಸಿ ಪನ್ನು

ಸುಧಾ ಗೋವಿಂದ್ ನಾಮದೇವ್ ಅವರ ಪತ್ನಿ. ಈ ಪೋಸ್ಟ್ ಮೂಲಕ ಪತ್ನಿ ಮೇಲಿನ ಪ್ರೀತಿಯನ್ನೂ ವ್ಯಕ್ತಪಡಿಸಿದ್ದಾರೆ. ಇದನ್ನು ಕೇಳಿ ಎಲ್ಲರೂ ಖುಷಿ ಹೊರಹಾಕಿದ್ದಾರೆ.

ಮುಂಬರುವ ಚಿತ್ರದಲ್ಲಿ ಶಿವಾಂಗಿ ಮತ್ತು ಗೋವಿಂದ್ ನಾಮದೇವ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅದೊಂದು ಕಾಮಿಡಿ ಚಿತ್ರ. ಶಿವಾಂಗಿ ಈ ಪಾತ್ರಕ್ಕಾಗಿ ಆಡಿಷನ್ ಮತ್ತು ಲುಕ್ ಟೆಸ್ಟ್ ಮಾಡಿದರು. ಅದರ ನಂತರ ಅವರು ಆಯ್ಕೆಯಾದಳು. ಈ ಚಿತ್ರದ ಪ್ರಚಾರಕ್ಕಾಗಿಯೇ ಅವರು ಗೋವಿಂದ್ ನಾಮದೇವ್ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿ ಮುಜುಗರದ ಶೀರ್ಷಿಕೆಯನ್ನು ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:12 pm, Fri, 20 December 24