Rann Ustava: ರನ್ ಉತ್ಸವಕ್ಕೆ ದೇಶವಾಸಿಗಳಿಗೆ ಮೋದಿಯಿಂದ ವಿಶೇಷ ಆಹ್ವಾನ, ಈ ಸ್ಥಳಗಳಿಗೆ ಭೇಟಿ ನೀಡಿ
ರನ್ ಉತ್ಸವವು ಕಚ್‌ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಬಾರಿಯ ಗುಜರಾತ್‌ನ ಕಚ್ ರನ್ ಉತ್ಸವದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ. 'ಕಚ್ ನಿಮ್ಮೆಲ್ಲರಿಗಾಗಿ ಕಾಯುತ್ತಿದೆ. ಬನ್ನಿ, ನಡೆಯುತ್ತಿರುವ ರನ್ ಉತ್ಸವದಲ್ಲಿ ಕಚ್‌ನ ಅದ್ಭುತ ಸಂಸ್ಕೃತಿ ಹಾಗೂ ಬೆಚ್ಚಗಿನ ಆತಿಥ್ಯವನ್ನು ಆನಂದಿಸಿ. ಈ ಹಬ್ಬವು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿದ್ದು, ನಿಜಕ್ಕೂ ನಿಮಗೆ ಮರೆಯಲಾಗದ ಅನುಭವವನ್ನು ನೀಡಲಿದೆ ಎಂದಿದ್ದಾರೆ. ಅದಲ್ಲದೇ ಈ ಉತ್ಸವದ ಹೊರತಾಗಿ ಇನ್ನಷ್ಟು ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.
Published On - 5:50 pm, Sat, 21 December 24