AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rann Ustava: ರನ್ ಉತ್ಸವಕ್ಕೆ ದೇಶವಾಸಿಗಳಿಗೆ ಮೋದಿಯಿಂದ ವಿಶೇಷ ಆಹ್ವಾನ, ಈ ಸ್ಥಳಗಳಿಗೆ ಭೇಟಿ ನೀಡಿ

ರನ್ ಉತ್ಸವವು ಕಚ್‌ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಬಾರಿಯ ಗುಜರಾತ್‌ನ ಕಚ್ ರನ್ ಉತ್ಸವದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ. 'ಕಚ್ ನಿಮ್ಮೆಲ್ಲರಿಗಾಗಿ ಕಾಯುತ್ತಿದೆ. ಬನ್ನಿ, ನಡೆಯುತ್ತಿರುವ ರನ್ ಉತ್ಸವದಲ್ಲಿ ಕಚ್‌ನ ಅದ್ಭುತ ಸಂಸ್ಕೃತಿ ಹಾಗೂ ಬೆಚ್ಚಗಿನ ಆತಿಥ್ಯವನ್ನು ಆನಂದಿಸಿ. ಈ ಹಬ್ಬವು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿದ್ದು, ನಿಜಕ್ಕೂ ನಿಮಗೆ ಮರೆಯಲಾಗದ ಅನುಭವವನ್ನು ನೀಡಲಿದೆ ಎಂದಿದ್ದಾರೆ. ಅದಲ್ಲದೇ ಈ ಉತ್ಸವದ ಹೊರತಾಗಿ ಇನ್ನಷ್ಟು ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 21, 2024 | 5:51 PM

ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಅನುಭವಿಸಲು ಪ್ರಧಾನಿ ಮೋದಿ ವೈಯಕ್ತಿಕ ಆಹ್ವಾನವನ್ನು ನೀಡಿದ್ದಾರೆ. ರನ್ನ್ ಉತ್ಸವವು 1 ಡಿಸೆಂಬರ್ 2024  ರಂದು ಪ್ರಾರಂಭವಾಗಿದ್ದು, ಮುಂದಿನ ವರ್ಷದ 28 ಫೆಬ್ರವರಿ 2025 ರವರೆಗೆ ನಡೆಯುತ್ತದೆ. ರನ್ ಉತ್ಸವದಲ್ಲಿ ಟೆಂಟ್ ಸಿಟಿ ಮಾರ್ಚ್ 2025 ರವರೆಗೆ ತೆರೆದಿರುತ್ತದೆ.

1 / 5
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ (ಸಿಂಧೂ ಕಣಿವೆ ನಾಗರೀಕತೆಗೆ ಸಂಬಂಧಿಸಿದ) ಧೋಲವೀರಕ್ಕೆ ಭೇಟಿ ನೀಡುವ ಮೂಲಕ  ಪ್ರಾಚೀನಕಾಲದ ಶ್ರೀಮಂತ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಬಹುದು. ಅದರೊಂದಿಗೆ ವಿಜಯ್ ವಿಲಾಸ್ ಅರಮನೆ, ಕಲಾ ಡುಂಗರ್‌ಗೆ ಸೇರಿದಂತೆ ಪ್ರಕೃತಿಯ ನಡುವೆ ಇರುವ ಈ ಸ್ಥಳಗಳಿಗೂ ಭೇಟಿ ನೀಡಬಹುದು.

2 / 5
ಬಿಳಿ ಉಪ್ಪಿನ ಬಯಲಿನಿಂದ ಸುತ್ತುವರಿದಿರುವ 'ರೋಡ್ ಟು ಹೆವನ್' ಭಾರತದ ಅತ್ಯಂತ ಸುಂದರವಾದ ರಸ್ತೆಯಲ್ಲಿ ಒಂದಾಗಿದೆ. ಇದು ಸುಮಾರು 30 ಕಿಲೋಮೀಟರ್ ಉದ್ದವಿದ್ದು, ಖವ್ರಾವನ್ನು ಧೋಲಾವಿರಾಗೆ ಸಂಪರ್ಕಿಸುತ್ತದೆ. ಉತ್ಸವ ನೋಡಲು ಹೋದರೆ ಈ ರಸ್ತೆಯ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.

3 / 5
ಲಖ್ಪತ್ ಕೋಟೆಗೆ ಭೇಟಿ ನೀಡುವ ಮೂಲಕ  ಭವ್ಯವಾದ ಸಂಸ್ಕೃತಿಯೊಂದಿಗೆ ಬೆರೆತು ಹೋಗಬಹುದು. ಅದಲ್ಲದೇ  ಜಡೇಜಾಗಳ ಆಶ್ರಯ ದೇವತೆಯಾಗಿರುವ ಮಾತಾ ನೊ ಮಧ್ ಆಶಾಪುರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ನಮ್ಮ ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸಬಹುದು.

4 / 5
ಕ್ರಾಂತಿ ತೀರ್ಥದ ಶ್ಯಾಮ್‌ಜಿ ಕೃಷ್ಣ ವರ್ಮಾ ಸ್ಮಾರಕದಲ್ಲಿ ನಮನ ಸಲ್ಲಿಸುವ ಮೂಲಕ ನಮ್ಮ ಸ್ವಾತಂತ್ರ್ಯ ಹೋರಾಟದ  ನೆನಪುಗಳನ್ನು ಮೆಲುಕು ಹಾಕಬಹುದು . ಅದಲ್ಲದೇ, ಕಚ್ ಕರಕುಶಲ ವಸ್ತುಗಳ ವೀಕ್ಷಿಸುವ ಮೂಲಕ ಕಚ್ ಜನರ ಪ್ರತಿಭೆಗೆ ನೀವು ಸಾಕ್ಷಿಯಾಗಬಹುದು.

5 / 5

Published On - 5:50 pm, Sat, 21 December 24

Follow us