Horoscope: ಈ ರಾಶಿಯವರು ಇಂದು ಸಂಗಾತಿಯೊಂದಿಗೆ ಜಗಳವಾಡುವಿರಿ

ಅಕ್ಟೋಬರ್ 05,​ 2024: ಸಂಗಾತಿಯ ಜೊತೆ‌ಗಿನ ಕಲಹದಿಂದ‌ ಕೆಲ ಕಾಲ ಮೌನವು ಆವರಿಸುವುದು. ಇಂದು ಆಲಸ್ಯವು ಅಧಿಕವಾಗಿ ಇರಲಿದೆ. ಉತ್ತಮವಾದ ವೈವಾಹಿಕ ಸಂಬಂಧವನ್ನು ಪೂರ್ವಾಪರ ಯೋಚಿಸದೇ ಬಿಡುವಿರಿ. ಸ್ವತಂತ್ರವಾಗಿ ಬದುಕಲು ನಿಮಗೆ ಇಷ್ಟವಾದೀತು. ಹಾಗಾದರೆ ಅಕ್ಟೋಬರ್ 05ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರು ಇಂದು ಸಂಗಾತಿಯೊಂದಿಗೆ ಜಗಳವಾಡುವಿರಿ
ಈ ರಾಶಿಯವರು ಇಂದು ಸಂಗಾತಿಯೊಂದಿಗೆ ಜಗಳವಾಡುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 05, 2024 | 12:05 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಸ್ವಾತಿ, ಯೋಗ: ವಿಷ್ಕಂಭ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:22 ರಿಂದ 10:52, ಯಮಘಂಡ ಕಾಲ ಮಧ್ಯಾಹ್ನ 01:50ರಿಂದ 03: 19ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:24 ರಿಂದ 07:53 ರವರೆಗೆ.

ಮೇಷ ರಾಶಿ: ನಿಮಗೆ ಇಂದು ಬಂಧನದಿಂದ ಮುಕ್ತವಾದಂತೆ ಅನ್ನಿಸಬಹುದು. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶವು ಮತ್ತೆ ಸಿಗುವುದು. ಮೋಜಿನಲ್ಲಿ ಈ ದಿನವನ್ನು ಕಳೆಯುವಿರಿ. ಇಂದು ವಿದ್ಯಾಭ್ಯಾಸದಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಆಸ್ತಿ ಖರೀದಿಯ ಬಗ್ಗೆ ಮನೆಯಲ್ಲಿ ಚಿಂತನೆಯನ್ನು ನಡೆಸಬಹುದು. ಬರಬೇಕಾದ ಹಣವನ್ನು ಪಡೆಯಲು ಮನೆಗೇ ಹೋಗಲಿದ್ದೀರಿ. ಉದ್ಯೋಗದ ಕಾರಣಕ್ಕೆ ಅಲೆದಾಟ ಅತಿಯಾಗಬಹುದು. ಮಾತು ಅವಮಾನವಂತೆ ಕಂಡರೆ ಅಲ್ಲಿರುವುದು ಬೇಡ.‌ ಬಂಧುಗಳ ಜೊತೆ ನಿಮ್ಮ ಮಾತುಕತೆ ಅಸಹಜವಾಗಿ ಇರಲಾರದು. ಸ್ನೇಹಕ್ಕೆ ನಿಮ್ಮ ಪ್ರತ್ಯುಪಕಾರವು ಇರಲಿದೆ. ಪತ್ನಿಯ ಮಾತು ನಿಮಗೆ ಅಸಮಾಧಾನವನ್ನು ತರಿಸಬಹುದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಮಾತು ನೇರವಾಗಿದ್ದರೂ ಮೃದುವಾಗಿ ಬಳಸಿಕೊಳ್ಳುವಿರಿ. ಯಾರಾದರೂ ನೀವು ಕೊಟ್ಟ ಸಲುಗೆಯನ್ನು ದುರುಪಯೋಗ ಮಾಡಿಕೊಳ್ಳಬಹುದು.

ವೃಷಭ ರಾಶಿ: ಶ್ರಮದಿಂದ ಎಲ್ಲ ಕಾರ್ಯವೂ ಆಗದು. ಉಪಾಯದಿಂದ ಮಾಡುವುದನ್ನು ಹಾಗೆಯೇ ಮಡುವುದು ಸೂಕ್ತ. ನೀವು ಬಂಧುಗಳಿಂದ ಸಹಾಯವನ್ನು ನಿರೀಕ್ಷಿಸುವಿರಿ. ನಿಮ್ಮ ಸಂಪತ್ತಿನ ಅಳೆಯುವರು. ಗುಟ್ಟನ್ನು ನೀವು ಬಿಟ್ಟಕೊಡುವಿರಿ. ನಿಮ್ಮ ತಪ್ಪು ತಿಳಿದಿಕೊಂಡವರಿಗೆ ಸರಿಯಾದ‌ ಮಾಹಿತಿಯನ್ನು ಕೊಡುವಿರಿ.‌ ಇಂದು ನಿಮ್ಮ ಆಲಸ್ಯವು ಯಶಸ್ಸಿನ ಶತ್ರುವಾಗಬಹುದು. ಸುಳ್ಳು ಹೇಳಿಕೊಂಡು ನಿಮ್ಮ ದಾಖಲೆಗಳನ್ನು ಪರಿಶೀಲಿಸಬಹುದಿ. ಧಾರ್ಮಿಕ ವಿಚಾರಕ್ಕೆ ನೀವು ಹೆಚ್ಚು ಒತ್ತಡುವಿರಿ. ಕುಟುಂಬದ ಮನೆಯಲ್ಲಿಯೇ ಇದ್ದು ಸಮಯವನ್ನು ಕಳೆಯುವಿರಿ. ಹೊಸತನ್ನು ಮಾಡಬೇಕು ಎಂಬ ಮನಸ್ಸು ಬರಬಹುದು. ಭೂಮಿಯ ವ್ಯವಹಾರವು ಇಂದು ಕಾರಣಾಂತರಗಳಿಂದ ಸ್ವಲ್ಪ ಹಿಮ್ಮುಖವಾಗಿ ಹೋಗಬಹುದು. ಯಾರ ಬಗೆಗೂ ಊಹಾಪೋಹಗಳನ್ನು ಸೃಷ್ಟಿಸುವುದು ಬೇಡ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.

ಮಿಥುನ ರಾಶಿ: ಬಿಗುಮಾನವು ನಿಮ್ಮನ್ನು ತೆರೆಯಲು ಬಿಡದು. ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ಬಂಧುಗಳಿಗಾಗಿ ನೀವು ಹಣವನ್ನು ನೀಡಬೇಕಾಗಬಹುದು. ವಿದ್ಯಾಭ್ಯಾಸಕ್ಕಾಗಿ ಮನೆಯವರಿಂದ ಪ್ರೋತ್ಸಾಹವನ್ನು ಪಡೆಯುವಿರಿ. ಅನಿವಾರ್ಯವಾಗಿ ನೀವು ಬದಲಾಯಿಸಿದ ವೃತ್ತಿಗೇ ಹೋಗಬೇಕಾಗುವುದು. ನಿಮ್ಮನ್ನು ಅತಿಯಾಗಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ನಿಮಗೆ ಕೆಲವು ಜವಾಬ್ದಾರಿಗಳು ಬಂದು ಗಂಭೀರವಾಗುವಿರಿ. ಆರ್ಥಿಕ ವ್ಯವಹಾರದಲ್ಲಿ ನಿಮಗೆ ನಿಷ್ಠೆ ಇರುವುದು. ನಿಮ್ಮ ವೃತ್ತಿಯು ನಿಮಗೆ ಹಿಡಿಸುವುದು. ಸಹೋದರಿಂದ ನಿಮಗೆ ಬೇಕಾದ ಸಹಾಯ ಇಂದು ಪಡೆಯುವಿರಿ. ನಿಮ್ಮ ಬಗ್ಗೆ ಯಾರಿಂದಲೋ ಮಾಹಿತಿಯನ್ನು ಪಡೆಯುವರು. ಸಂಬಂಧಿಸದ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗಬಹುದು. ಸುಮ್ಮನೆ ಕುಳಿತಿರುವುದು ನಿಮಗೆ ಕಷ್ಟ. ನಿಮ್ಮನ್ನು ಯಾರಾದರೂ ಅಸ್ತ್ರವಾಗಿ ಬಳಸಿಕೊಳ್ಳಬಹುದು.

ಕಟಕ ರಾಶಿ: ನಿಮ್ಮ ಉದ್ಯಮವು ಇಚ್ಛೆಗೆ ಅನುಸಾರವಾಗಿ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸುವಿರಿ. ನಾಯಕರಾಗುವುದಕ್ಕಿಂತ ಹಾಗೆ ನಡೆದುಕೊಳ್ಳುವುದೂ ಮುಖ್ಯವಾಗಲಿದೆ. ಜೀವನವು ಬಹಳ ನಿಧಾನವಾಗಿ ಚಲಿಸುತ್ತಿದೆ ಎಂದು ಅನ್ನಿಸಬಹುದು. ಸಂಗಾತಿಯ ಜೊತೆ‌ಗಿನ ಕಲಹದಿಂದ‌ ಕೆಲ ಕಾಲ ಮೌನವು ಆವರಿಸುವುದು. ಇಂದು ಆಲಸ್ಯವು ಅಧಿಕವಾಗಿ ಇರಲಿದೆ. ಉತ್ತಮವಾದ ವೈವಾಹಿಕ ಸಂಬಂಧವನ್ನು ಪೂರ್ವಾಪರ ಯೋಚಿಸದೇ ಬಿಡುವಿರಿ. ಸ್ವತಂತ್ರವಾಗಿ ಬದುಕಲು ನಿಮಗೆ ಇಷ್ಟವಾದೀತು. ಆಪ್ತರ ಜೊತೆ ಅನೇಕ ದಿನಗಳ ಅನಂತರ ನೀವು ಕಾಲಕಳೆಯುವಿರಿ. ಇದು ನಿಮಗೆ ಸಂತೋಷವನ್ನು ಕೊಡುವುದು. ಯಾವ ಮೆಚ್ಚುಗೆಯನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಲಾರಿರಿ. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಇನ್ನೊಬ್ಬರಿಂದ ನಿಮಗೆ ಉತ್ತೇಜನ ಸಿಗಲಿದೆ. ಇಂದು ಸಹೋದ್ಯೋಗಿಗಳ ಬಗ್ಗೆ ನಿಮಗೆ ಅನಾದರ ಬರಬಹುದು.