ಮೈಲಾರ ಮಲ್ಲಣ್ಣ ಅವತಾರವೆತ್ತಿ ಅಸುರರನ್ನು ಕೊಂದ ಶಿವ ಬೀದರ್​ನ ಈ ದೇವಸ್ಥಾನದಲ್ಲಿ ಖಂಡೋಬಾನಾಗಿ ಪೂಜಿಸಲ್ಪಡುತ್ತಾನೆ!

ಮೈಲಾರ ಮಲ್ಲಣ್ಣ ಅವತಾರವೆತ್ತಿ ಅಸುರರನ್ನು ಕೊಂದ ಶಿವ ಬೀದರ್​ನ ಈ ದೇವಸ್ಥಾನದಲ್ಲಿ ಖಂಡೋಬಾನಾಗಿ ಪೂಜಿಸಲ್ಪಡುತ್ತಾನೆ!

TV9 Web
| Updated By: ಆಯೇಷಾ ಬಾನು

Updated on: Sep 19, 2021 | 8:02 AM

ದೇವರುಗಳ ಸೇನೆ ರಾಕ್ಷಸರ ಸೇನೆಯನ್ನು ಕೊಂದು ಹಾಕಿದರೆ, ಮಾರ್ತಂಡನ ಅವತಾರದಲ್ಲಿದ್ದ (ಖಂಡೋಬಾ) ಶಿವ ಮೈಲಾಸುರ ಮತ್ತು ಮಣಿಕಾಸುರರನ್ನು ಕೊಂದನಂತೆ.

ಬೀದರ್ ಮತ್ತು ಮಹಾರಾಷ್ಟ್ರದ ಉದ್ಗೀರ್ ರಸ್ತೆಯಲ್ಲಿ ಬೀದರ ನಗರದಿಂದ ಸುಮಾರು 15 ಕಿಮೀ ದೂರದ ಖಾನಾಪುರನಲ್ಲಿರುವ ಶಿವ ಮೈಲಾರ ಮಲ್ಲಣ್ಣ ದೇವಸ್ಥಾನ ಕರ್ನಾಟಕದ ಉತ್ತರ ಭಾಗವಲ್ಲದೆ ಗಡಿ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಬಹಳ ಪ್ರಸಿದ್ಧಿ ಹೊಂದಿದ ದೇವಸ್ಥಾನ. ಈ ದೇವಸ್ಥಾನದಲ್ಲಿ ಶಿವ ಉಗ್ರರೂಪದಲ್ಲಿ ಅವತಾರ ತಳೆದಿದ್ದಾನೆ. ಈ ಭಾಗದ ಜನ ಶಿವನನ್ನು ಖಂಡೋಬಾ, ಖಂಡೇರಾಯ, ಮಾರ್ತಂಡ ಭೈರವ, ಮೈಲಾರ ಲಿಂಗ ಅಂತಲೂ ಪೂಜಿಸುತ್ತಾರೆ. ಈ ದೇವಸ್ಥಾನದ ಹಲವಾರು ವೈಶಿಷ್ಟ್ಯಗಳಲ್ಲಿ ಒಂದೆಂದರೆ, ಇಲ್ಲಿನ ಪ್ರಧಾನ ಅರ್ಚಕರು ಕುರುಬ ಸಮುದಾಯದವರಾಗಿರುತ್ತಾರೆ.

ಬ್ರಹ್ಮನಿಂದ ಅದೃಶ್ಯರಾಗುವಂಥ ವರ ಪಡೆದು ಭೂಲೋಕದಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡುತ್ತಾ, ಸಾಧು ಸಂತರು ಮತ್ತು ಋಷಿಗಳಿಗೆ ವಿಪರೀತ ಕಿರುಕುಳ ನೀಡುತ್ತಿದ್ದ ರಾಕ್ಷಸ ಮಲ್ಲಾಸುರ ಮತ್ತು ಅವನ ತಮ್ಮ ಮಣಿಕಾಸುರ ಜನರಲ್ಲಿ ಭೀತಿ ಹುಟ್ಟಿಸಿದ್ದರಂತೆ. ಆಗ ಏಳು ಋಷಿಗಳು ತಮ್ಮನ್ನು ಕಾಪಾಡುವಂತೆ ಇಂದ್ರ ಮತ್ತು ವಿಷ್ಟುವಿನ ಮೊರೆ ಹೋಗುತ್ತಾರೆ.

ಆದರೆ, ಅವರಿಬ್ಬರೂ ತಮ್ಮಿಂದಾಗದು ಅಂತ ಹೇಳಿ ಬಿಡುತ್ತಾರೆ. ಬಳಿಕ ಋಷಿಗಳು ಶಿವನ ಮೊರೆ ಹೋಗುತ್ತಾರೆ. ಆಗ ಶಿವ ಮಾರ್ತಂಡ ಭೈರವನ ಅವತಾರ ತಾಳಿ ದೇವರುಗಳ ಸೈನ್ಯದೊಂದಿಗೆ ಭೂಲೋಕಕ್ಕೆ ಬಂದು ರಾಕ್ಷಸರನ್ನು ಸಂಹರಿಸುತ್ತಾನೆ. ಶಿವನು ಬಸವನ ಮೇಲೆ ಸವಾರಿಯಾಗಿ ಬಂದನೆಂಬ ಪ್ರತೀತಿ ಇದೆ.

ದೇವರುಗಳ ಸೇನೆ ರಾಕ್ಷಸರ ಸೇನೆಯನ್ನು ಕೊಂದು ಹಾಕಿದರೆ, ಮಾರ್ತಂಡನ ಅವತಾರದಲ್ಲಿದ್ದ (ಖಂಡೋಬಾ) ಶಿವ ಮೈಲಾಸುರ ಮತ್ತು ಮಣಿಕಾಸುರರನ್ನು ಕೊಂದನಂತೆ.

ಪ್ರತಿ ರವಿವಾರದಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಹಾಗೆಯೇ, ಪ್ರತಿ ಹುಣ್ಣಿಮೆ ಮತ್ತು ಅಮವಾಸ್ಯೆ ದಿನಗಳಲ್ಲೂ ಭಾರಿ ಸಂಖ್ಯೆಯ ಭಕ್ತಾದಿಗಳು ಇಲ್ಲಿ ಪೂಜೆ ಸಲ್ಲಿಸಲು ಬರುತ್ತಾರೆ. ರವಿವಾರದಂದು ಇಲ್ಲಿ ರಾಸುಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.

ಇದನ್ನೂ ಓದಿ:  IPL 2021: ಬಂದ ತಕ್ಷಣ ನನ್ನ ಸ್ನೇಹಿತನನ್ನು ನನ್ನಿಂದ ಕಸಿದುಕೊಂಡೆ! ಕೊಹ್ಲಿ ಕಾಲೆಳೆದ ಮ್ಯಾಕ್ಸ್‌ವೆಲ್; ವಿಡಿಯೋ ನೋಡಿ