ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡವು ಈ ಬಾರಿ ನಾಲ್ಕು ಹೊಸ ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅದರಂತೆ ಆರ್ಸಿಬಿ ಬಳಗದಲ್ಲಿ ವನಿಂದು ಹಸರಂಗ, ದುಷ್ಮಂತ ಚಮೀರಾ, ಜಾರ್ಜ್ ಗಾರ್ಟನ್, ಟಿಮ್ ಡೇವಿಡ್ ಎಂಟ್ರಿಯಾಗಿದೆ. ಆದರೆ ಇವರ್ಯಾರು ಐಪಿಎಲ್ ಅನುಭವ ಹೊಂದಿಲ್ಲ ಎಂಬುದು ವಿಶೇಷ. ಹೀಗಾಗಿ ಬದಲಿ ವಿದೇಶಿ ಆಟಗಾರರನ್ನು ಕಣಕ್ಕಿಳಿಸುವ ಸಂದರ್ಭ ಬಂದರೆ ಚೊಚ್ಚಲ ಬಾರಿ ಐಪಿಎಲ್ ಆಡಲಿರುವ ಆಟಗಾರರಿಗೆ ಮಣೆ ಹಾಕಬೇಕಾಗುತ್ತದೆ. ಇದೀಗ ಉಳಿದಿರುವುದು ಕೇವಲ 7 ಪಂದ್ಯಗಳು ಮಾತ್ರ. ಇದು ಕೂಡ ಹೊಸ ಆಟಗಾರರ ಮೇಲೆ ಒತ್ತಡವನ್ನು ಉಂಟು ಮಾಡಲಿದೆ.