ಕಳೆದ ವರ್ಷ, ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಬಿಟ್ಟು ತವರಿಗೆ ಮರಳಿತು. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿಯನ್ನು ಆಡಬೇಕಿತ್ತು. ಆದರೆ ಆತಿಥೇಯ ತಂಡದ ಸದಸ್ಯರು ಕೋವಿಡ್ ಸೋಂಕಿಗೆ ಒಳಗಾಗಿದ್ದರು, ನಂತರ ಮೊದಲ ಏಕದಿನ ಪಂದ್ಯವನ್ನು ಮುಂದೂಡಲಾಯಿತು. ಇದಾದ ನಂತರ, ತಂಡಗಳು ತಂಗಿದ್ದ ಹೋಟೆಲ್‌ನ ಸಿಬ್ಬಂದಿಗೂ ಕೋವಿಡ್ ತಗುಲಿತ್ತು. ಇದರ ನಂತರ ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.