Tirumala Temple: ತಿರುಪತಿಯಲ್ಲಿ ಭಯೋತ್ಪಾದಕರ ಚಲನವಲನ? ಪೊಲೀಸರಿಗೆ ಮೇಲ್ ಅಲರ್ಟ್
ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ ಐಟಿ ವಿಭಾಗವು ಮತ್ತೊಂದು ನಕಲಿ ವೆಬ್‌ಸೈಟ್ ಅನ್ನು ಗುರುತಿಸಿದ್ದು, ಅವರ ದೂರಿನ ಮೇರೆಗೆ ತಿರುಮಲ 1 ಟೌನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಆಂಧ್ರ ಪ್ರದೇಶದ (Andhra pradesh) ತಿರುಪತಿಯ (Tirupati) ತಿರುಮಲದಲ್ಲಿ ಭಯೋತ್ಪಾದಕರ (Terrorism) ಚಲನವಲನದ ಬಗ್ಗೆ ಮೇಲ್ ಬಂದಿದೆ. ಈ ಮೇಲ್ ಸಾಕಷ್ಟು ಕೋಲಾಹಲಕ್ಕೆ ಕಾರಣವಾಯಿತು. ಅಪರಿಚಿತ ದುಷ್ಕರ್ಮಿಗಳು ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ಮೇಲ್ ಕಳುಹಿಸಿದ್ದಾರೆ. ಮೇಲ್ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಟಿಟಿಡಿ (TTD) ವಿಜಿಲೆನ್ಸ್ ಮತ್ತು ಪೊಲೀಸರು ತಿರುಮಲದಲ್ಲಿ ಭಾರೀ ತಪಾಸಣೆ ನಡೆಸಿದ್ದಾರೆ. ಕೊನೆಗೂ ಅದು ನಕಲಿ ಮೇಲ್ ಎಂಬುದು ಗೊತ್ತಾಗುತ್ತಿದ್ದಂತೆ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ಮೇಲ್ ಗೆ ತಿರುಪತಿ ಎಸ್ಪಿ ಪರಮೇಶ್ವರ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ಸಂದರ್ಭದಲ್ಲೂ ಸುಳ್ಳು ಪ್ರಚಾರವನ್ನು ನಂಬಬೇಡಿ ಎಂದು ಅವರು ಭಕ್ತರಿಗೆ ಸಲಹೆ ನೀಡಿದ್ದಾರೆ. ಮೇಲ್ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ತಿರುಮಲದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ನಕಲಿ ಅಂಚೆಗಳಿಂದ ಭಕ್ತರು ಆತಂಕ ಪಡಬೇಕಿಲ್ಲ ಎಂದ ಅವರು, ಕಾಲಕಾಲಕ್ಕೆ ಟಿಡಿಡಿಯಲ್ಲಿ ಪೊಲೀಸರ ಕಣ್ಗಾವಲು ಇರುತ್ತದೆ.
ನಕಲಿ ವೆಬ್‌ಸೈಟ್ ಪತ್ತೆ, ಭಕ್ತರಿಗೆ ಎಚ್ಚರಿಕೆ ನೀಡಿದ ಟಿಟಿಡಿ:
One more fake website has been identified by TTD IT wing and upon their complaint a case has been registered in Tirumala 1 Town Police Station. as FIR 19/2023 u/s 420,468,471 IPC. pic.twitter.com/Ff0vEdpqsE
— Tirumala Tirupati Devasthanams (@TTDevasthanams) April 23, 2023
ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ (ಟಿಟಿಡಿ) ಐಟಿ ವಿಭಾಗವು ಮತ್ತೊಂದು ನಕಲಿ ವೆಬ್‌ಸೈಟ್ ಅನ್ನು ಗುರುತಿಸಿದ್ದು, ಅವರ ದೂರಿನ ಮೇರೆಗೆ ತಿರುಮಲ 1 ಟೌನ್ ಪೊಲೀಸ್ ಠಾಣೆಯಲ್ಲಿ FIR 19/2023 u/s 420,468,471 IPC ಪ್ರಕರಣ ದಾಖಲಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:06 am, Tue, 2 May 23