ಮೈಸೂರು: ಮಹಿಳೆಯೊಬ್ಬರು ವಿಷ ಸೇವಿಸುವ ವಿಡಿಯೋ ಮಾಡಿ ಪ್ರಿಯಕರನಿಗೆ ಅದನ್ನು ಕಳಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಟಿ.ಕೆ.ಲೇಔಟ್ನಲ್ಲಿ ನಡೆದಿದೆ. ಶೀಲಾ(38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಆರೋಪಿ ವೆಂಕಟೇಶ್ ಮತ್ತು ಶೀಲಾ ನಡುವೆ ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ಇಬ್ಬರೂ ಸೇರಿ ಫರ್ನೀಚರ್ ಅಂಗಡಿ ತೆರೆದಿದ್ದರು. ಹಣದ ವಿಚಾರಕ್ಕೆ ಇತ್ತೀಚೆಗೆ ಇವರಿಬ್ಬರ ನಡುವೆ ಜಗಳವಾಗಿ, ವೆಂಟಕೇಶ್ ಮನೆ ಬಾಗಿಲಿಗೆ ಬಂದು ಗಲಾಟೆ ಮಾಡಿದ್ದ. ಹೀಗಾಗಿ ಮನನೊಂದ ಶೀಲಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.