Yadgir New: ಚಲಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಮಹಿಳೆ ಸಾವು

|

Updated on: May 28, 2023 | 7:55 AM

ಕಲಬುರಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಸುರಪುರದಿಂದ ವಜ್ಜಲಕ್ಕೆ ಬಸ್ ನಲ್ಲಿ ವಾಪಸ್ ಬರುವಾಗ ನಂದಮ್ಮರಿಗೆ ಬಸ್ಸಿನಲ್ಲೇ ಎದೆನೋವು ಕಾಣಸಿಕೊಂಡು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Yadgir New: ಚಲಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಮಹಿಳೆ ಸಾವು
ಹೃದಯಾಘಾತ (ಸಾಂದರ್ಭಿಕ ಚಿತ್ರ)
Image Credit source: Times Of India
Follow us on

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇನಹಳ್ಳಿ ಬಳಿ ಚಲಿಸುತ್ತಿದ್ದ ಬಸ್‌ನಲ್ಲೇ(Bus) ಮಹಿಳೆ ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ ಘಟನೆ ನಡೆದಿದೆ. ನಂದಮ್ಮ ಹೊರಟ್ಟಿ(60) ಮೃತ ದುರ್ದೈವಿ. ಹುಣಸಗಿ ತಾಲೂಕಿನ ವಜ್ಜಲ ಗ್ರಾಮದವರಾದ ನಂದಮ್ಮ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆ ಕಲಬುರಗಿ ಆಸ್ಪತ್ರೆಗೆ ಹೋಗಿದ್ರು. ಸುರಪುರದಿಂದ ವಜ್ಜಲಕ್ಕೆ ಬಸ್ ನಲ್ಲಿ ವಾಪಸ್ ಬರುವಾಗ ನಂದಮ್ಮರಿಗೆ ಬಸ್ಸಿನಲ್ಲೇ ಎದೆನೋವು ಕಾಣಸಿಕೊಂಡಿದೆ. ತಕ್ಷಣವೇ ಸಮೀಪದ ಕಲ್ಲದೇವನಹಳ್ಳಿ ಆರೋಗ್ಯ ಕೇಂದ್ರಕ್ಕೆ ದಾಖಲಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ನಂತರ ನಂದಮ್ಮ ಮೃತಪಟ್ಟಿರುವುದಾಗಿ ಕುಟುಂಸ್ಥರಿಗೆ ವೈದ್ಯರು ತಿಳಿಸಿದ್ದಾರೆ.

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಮೈಸೂರು: ಇದೇ ಮೇ.24 ರಂದು ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮದಲ್ಲಿ ನಡೆದಿತ್ತು. ಯಾಲಕ್ಕಿಗೌಡ (65) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. 3 ಎಕರೆ ಜಮೀನು ಹೊಂದಿದ್ದ ಯಾಲಕ್ಕಿ ಗೌಡ, ತಂಬಾಕು ಬ್ಯಾರನ್ ಹೊಂದಿದ್ದರು. ಹೊಗೆಸೊಪ್ಪು, ಶುಂಠಿ ಬೆಳೆ ಬೆಳೆದಿದ್ದ ರೈತ. ಕೃಷಿ ಚಟುವಟಿಕೆಗಾಗಿ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯ ಐಓಬಿ ಬ್ಯಾಂಕಿನಲ್ಲಿ 12ಲಕ್ಷ ಹಾಗೂ ಗ್ರಾಮದಲ್ಲಿ 6 ಲಕ್ಷ ಕೈ ಸಾಲ ಪಡೆದಿದ್ದರು. ಆದರೆ, ನಾಲ್ಕು ವರ್ಷಗಳಿಂದ ಬೆಳೆ ಕೈ ಕೊಟ್ಟು ನಷ್ಟ ಅನುಭವಿಸಿದ ಕಾರಣ, ಸಾಲ ತೀರಿಸಲಾಗಿಲ್ಲ. ಇದರಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Cubbon Park: ಬೆಂಗಳೂರಿನ ಹಸಿರಿನ ಅರಸಿ ಕಬ್ಬನ್ ಪಾರ್ಕ್​ನಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ

ಚುಕ್ಕೆ ಜಿಂಕೆ ಬೇಟೆಯಾಡಿದ್ದ ವ್ಯಕ್ತಿ ಬಂಧನ

ಕಲಬುರಗಿ: ಚುಕ್ಕೆ ಜಿಂಕೆ ಬೇಟೆಯಾಡ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ವನ್ಯ ಜೀವಿಧಾಮದಲ್ಲಿ ಜಿಂಕೆ ಬೇಟೆಯಾಡ್ತಿದ್ದವನನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಚುಕ್ಕೆ ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ. ಬಂಧಿತನಿಂದ ಮಾಂಸ, ಬೇಟೆಯಾಡುವ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ