ಬೈಕ್ನಲ್ಲಿ ಹೋಗುವಾಗ ಕೆಸರು ತಾಗಿದ್ದಕ್ಕೆ ಅವಮಾನ ಮಾಡಿದ್ದ ವಿದ್ಯಾರ್ಥಿನಿ ಮೇಲೆ ವ್ಯಕ್ತಿ ಹಾಗೂ ಅವನ ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಸೆಪ್ಟೆಂಬರ್ 22ರಂದು ಕಾಲೇಜು ವಿದ್ಯಾರ್ಥಿನಿ ಮೊಬೈಲ್ನ್ನು ಅಂಗಡಿಗೆ ರಿಪೇರಿಗೆ ಕೊಡಲೆಂದು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ವಿಚಾರಣೆ ವೇಳೆ, ಪ್ರಮುಖ ಆರೋಪಿ ಕಿಶನ್ ಕೋಲ್, ತನ್ನ ಬೈಕ್ನಲ್ಲಿ ಸಾಕಷ್ಟು ಕೆಸರು ಇರುವ ರಸ್ತೆಯಲ್ಲಿ ಹೋಗುತ್ತಿದ್ದೆವು, ರಸ್ತೆಬದಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕೆಸರು ತಾಗಿತ್ತು. ಅಷ್ಟೆಲ್ಲಾ ಜನರ ಎದುರು ತನಗೆ ಅವಮಾನ ಮಾಡಿದ್ದಳು ಎಂದು ಆರೋಪಿ ಹೇಳಿದ್ದು, ಇದರಿಂದ ತನಗೆ ಮುಜುಗರ ಉಂಟಾಯಿತು ಎಂದಿದ್ದಾನೆ.
ಅವಮಾನದಿಂದ ಕೋಪಗೊಂಡ ಆರೋಪಿಗಳು ಸಂತ್ರಸ್ತೆಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 22 ರಂದು ಕಿಶನ್ ಕೋಲ್ ಮತ್ತು ಆತನ ಸ್ನೇಹಿತ ಸಂತಲಾಲ್ ಆಕೆಯನ್ನು ಅಪಹರಿಸಿ ಪೊದೆಗಳ ಹಿಂದೆ ಕರೆದೊಯ್ದು ಅಲ್ಲಿ ಅಪರಾಧ ಎಸಗಿದ್ದರು.
ಮತ್ತಷ್ಟು ಓದಿ: ರಾಜಸ್ಥಾನ: ಮಸೀದಿಯೊಳಗೆ 5 ವರ್ಷದ ಬಾಲಕಿ ಮೇಲೆ ಮೌಲ್ವಿಯಿಂದ ಅತ್ಯಾಚಾರ
ಘಟನೆಯ ಬಗ್ಗೆ ವಿದ್ಯಾರ್ಥಿನಿ ತನ್ನ ಕುಟುಂಬಕ್ಕೆ ತಿಳಿಸಿದ್ದು, ನಂತರ ದೂರು ದಾಖಲಿಸಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವಿದ್ಯಾರ್ಥಿನಿ ದೂರು ಮತ್ತು ಹೇಳಿಕೆ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ