ಸರಪ್ರೈಸ್ ನೀಡುವುದಾಗಿ ಹೇಳಿ ಭಾವಿ ಪತಿಗೆ ಚಾಕು ಇರಿದ ಯುವತಿ
ಮೈಸೂರು: ಸರ್ಪ್ರೈಸ್ ನೀಡುವುದಾಗಿ ಹೇಳಿ ಮದುವೆ ನಿಶ್ಚಯವಾಗಿದ್ದ ಯುವಕನಿಗೆ ಭಾವಿ ಪತ್ನಿಯೇ ಚಾಕುವಿನಿಂದ ಇರಿದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ನಡೆದಿದೆ. ಸುರಗಳ್ಳಿ ಗ್ರಾಮದ ರವಿಕುಮಾರ್ಗೆ ಭಾವಿ ಪತ್ನಿ ವಿ.ಜಿ.ಕೊಪ್ಪಲಿನ ಅರುಣಿ ಚಾಕು ಇರಿದಿದ್ದಾಳೆ. ನಾಲ್ಕು ತಿಂಗಳ ಹಿಂದೆ ರವಿಕುಮಾರ್, ಅರುಣಿಗೆ ಮದುವೆ ನಿಶ್ಚಯವಾಗಿತ್ತು. ಸೋಮವಾರ ಸಂಜೆ ಯುವತಿ ಮನೆಗೆ ರವಿಕುಮಾರ್ ತೆರಳಿದ್ದ. ಈ ವೇಳೆ ಸರ್ಪ್ರೈಸ್ ನೀಡುವುದಾಗಿ ಹೇಳಿ ಭಾವಿ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಅರುಣಿ ಕೃತ್ಯ ಎಸಗಿದ್ದಾಳೆ. ಘಟನೆ ಬಳಿಕ ಪೊಲೀಸರ […]
Follow us on
ಮೈಸೂರು: ಸರ್ಪ್ರೈಸ್ ನೀಡುವುದಾಗಿ ಹೇಳಿ ಮದುವೆ ನಿಶ್ಚಯವಾಗಿದ್ದ ಯುವಕನಿಗೆ ಭಾವಿ ಪತ್ನಿಯೇ ಚಾಕುವಿನಿಂದ ಇರಿದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ನಡೆದಿದೆ. ಸುರಗಳ್ಳಿ ಗ್ರಾಮದ ರವಿಕುಮಾರ್ಗೆ ಭಾವಿ ಪತ್ನಿ ವಿ.ಜಿ.ಕೊಪ್ಪಲಿನ ಅರುಣಿ ಚಾಕು ಇರಿದಿದ್ದಾಳೆ.
ನಾಲ್ಕು ತಿಂಗಳ ಹಿಂದೆ ರವಿಕುಮಾರ್, ಅರುಣಿಗೆ ಮದುವೆ ನಿಶ್ಚಯವಾಗಿತ್ತು. ಸೋಮವಾರ ಸಂಜೆ ಯುವತಿ ಮನೆಗೆ ರವಿಕುಮಾರ್ ತೆರಳಿದ್ದ. ಈ ವೇಳೆ ಸರ್ಪ್ರೈಸ್ ನೀಡುವುದಾಗಿ ಹೇಳಿ ಭಾವಿ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಅರುಣಿ ಕೃತ್ಯ ಎಸಗಿದ್ದಾಳೆ. ಘಟನೆ ಬಳಿಕ ಪೊಲೀಸರ ಮುಂದೆ ಶರಣಾಗಿರುವ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ.
ನನಗೆ ವ್ಯಾಸಂಗ ಮಾಡಲು ಇಷ್ಟವಿತ್ತು. ಆದ್ರೆ ಮನೆಯಲ್ಲಿ ಎಷ್ಟೆ ಹೇಳಿದರು ಕೇಳದೆ ಮದುವೆ ನಿಶ್ಚಯಮಾಡಿದ್ದಾರೆ. ಇದರಿಂದ ಬೇಸತ್ತು ತಾನೇ ಚಾಕು ಇರಿದಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.