ಮಳ್ಳಿಯಂತೆ ಛತ್ರಗಳಿಗೆ ಹೋಗಿ ಆಭರಣ ದೋಚುತ್ತಿದ್ದ ಕಳ್ಳಿ ಸಿಕ್ಕಿಬಿದ್ಳು!

|

Updated on: Oct 24, 2020 | 9:47 PM

ನೀಟಾಗಿ ಡ್ರೆಸ್ ಮಾಡಿಕೊಂಡು ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಒಬ್ಬ ಗೃಹಿಣಿಯಂತೆ ನುಗ್ಗಿ ಮಹಿಳೆಯರ ಆಭರಣಗಳನ್ನು ಕಳವು ಮಾಡುತ್ತಿದ್ದ ಕಳ್ಳಿಯನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಕಮಲಮ್ಮ(26) ಎಂದು ಗುರುತಿಸಲಾಗಿದ್ದು ಆಕೆ ನಾಗರಹೊಳೆಯ ನಿವಾಸಿಯೆಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ ಕಮಲಮ್ಮನ ಕಳುವು ಮಾಡುವ ರೀತಿ ಸುಲಭವಾಗಿತ್ತು. ಮದುವೆ ನಡೆಯುತ್ತಿದ್ದ ಛತ್ರಗಳಿಗೆ ಆಕೆ ಸದ್ಗೃಹಿಣಿಯಂತೆ ಡ್ರೆಸ್ ಮಾಡಿಕೊಂಡು ಮದುವೆಮನೆಗಳ ನೆಂಟಳೇನೋ ಎಂಬಂತೆ ಪ್ರವೇಶಿಸುತ್ತಿದ್ದಳು. ಹೆಚ್ಚು ಆಭರಣ ಧರಿಸಿರುವ ಮಹಿಳೆಯರೇ ಆಕೆಯ ಟಾರ್ಗೆಟ್ ಆಗಿರುತ್ತಿದ್ದರು. ಅವರು […]

ಮಳ್ಳಿಯಂತೆ ಛತ್ರಗಳಿಗೆ ಹೋಗಿ ಆಭರಣ ದೋಚುತ್ತಿದ್ದ ಕಳ್ಳಿ ಸಿಕ್ಕಿಬಿದ್ಳು!
Follow us on

ನೀಟಾಗಿ ಡ್ರೆಸ್ ಮಾಡಿಕೊಂಡು ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಒಬ್ಬ ಗೃಹಿಣಿಯಂತೆ ನುಗ್ಗಿ ಮಹಿಳೆಯರ ಆಭರಣಗಳನ್ನು ಕಳವು ಮಾಡುತ್ತಿದ್ದ ಕಳ್ಳಿಯನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಕಮಲಮ್ಮ(26) ಎಂದು ಗುರುತಿಸಲಾಗಿದ್ದು ಆಕೆ ನಾಗರಹೊಳೆಯ ನಿವಾಸಿಯೆಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ ಕಮಲಮ್ಮನ ಕಳುವು ಮಾಡುವ ರೀತಿ ಸುಲಭವಾಗಿತ್ತು. ಮದುವೆ ನಡೆಯುತ್ತಿದ್ದ ಛತ್ರಗಳಿಗೆ ಆಕೆ ಸದ್ಗೃಹಿಣಿಯಂತೆ ಡ್ರೆಸ್ ಮಾಡಿಕೊಂಡು ಮದುವೆಮನೆಗಳ ನೆಂಟಳೇನೋ ಎಂಬಂತೆ ಪ್ರವೇಶಿಸುತ್ತಿದ್ದಳು. ಹೆಚ್ಚು ಆಭರಣ ಧರಿಸಿರುವ ಮಹಿಳೆಯರೇ ಆಕೆಯ ಟಾರ್ಗೆಟ್ ಆಗಿರುತ್ತಿದ್ದರು. ಅವರು ನಿದ್ರೆಗೆ ಜಾರಿದ ಕೂಡಲೇ ತನ್ನ ಕೈಚಳಕ ಮೆರೆಯುತ್ತಿದ್ದಳು. ತನ್ನ ಕೆಲಸವಾದ ನಂತರ ಕಮಲಮ್ಮ ಮೆತ್ತಗೆ ಅಲ್ಲಿಂದ ಜಾರುತ್ತಿದ್ದಳು.

ಕಳೆದ ತಿಂಗಳು ಕಾಮಾಕ್ಷಿಪಾಳ್ಯದ ಛತ್ರದಲ್ಲಿ ಮದುವೆಗೆ ಬಂದಿದ್ದವರ ಚಿನ್ನಾಭರಣವನ್ನು ಕದ್ದಿದ್ದ ಕಮಲಮ್ಮನ ವಿರುದ್ಧ ಕೇಸು ದಾಖಲಾಗಿತ್ತು. ಪೊಲೀಸರು ಆಕೆಯಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.