ಕೇರಳ: ನಾಪತ್ತೆಯಾಗಿ ಕೆಲವು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ದೇಹ ಪತ್ತೆ

|

Updated on: Nov 21, 2024 | 8:49 AM

ಕೇರಳದ ಕರುನಾಗಪಲ್ಲಿಯಿಂದ ನಾಪತ್ತೆಯಾಗಿದ್ದ 48 ವರ್ಷದ ಮಹಿಳೆಯ ಕೊಳೆತ ಶವವನ್ನು ಮಂಗಳವಾರ ಗುಂಡಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯಲಕ್ಷ್ಮಿ ಎಂದು ಗುರುತಿಸಲಾಗಿರುವ ಮಹಿಳೆಯ ಶವವನ್ನು ಆಲಪ್ಪುಳದ ಅಂಬಲಪುಳದ ಕರೂರ್ ನಿವಾಸಿ ಜಯಚಂದ್ರನ್ ಎಂಬ 50 ವರ್ಷದ ವ್ಯಕ್ತಿಯ ಮನೆಯ ಸಮೀಪದಿಂದ ವಶಪಡಿಸಿಕೊಳ್ಳಲಾಗಿದೆ. ಕೊಲೆ ಆರೋಪದ ಮೇಲೆ ಜಯಚಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ: ನಾಪತ್ತೆಯಾಗಿ ಕೆಲವು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ದೇಹ ಪತ್ತೆ
ಅಪರಾಧ
Image Credit source: India Today
Follow us on

ಕೇರಳದ ಕರುನಾಗಪಲ್ಲಿಯಿಂದ ನಾಪತ್ತೆಯಾಗಿದ್ದ 48 ವರ್ಷದ ಮಹಿಳೆಯ ಕೊಳೆತ ಶವವನ್ನು ಮಂಗಳವಾರ ಗುಂಡಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯಲಕ್ಷ್ಮಿ ಎಂದು ಗುರುತಿಸಲಾಗಿರುವ ಮಹಿಳೆಯ ಶವವನ್ನು ಆಲಪ್ಪುಳದ ಅಂಬಲಪುಳದ ಕರೂರ್ ನಿವಾಸಿ ಜಯಚಂದ್ರನ್ ಎಂಬ 50 ವರ್ಷದ ವ್ಯಕ್ತಿಯ ಮನೆಯ ಸಮೀಪದಿಂದ ವಶಪಡಿಸಿಕೊಳ್ಳಲಾಗಿದೆ. ಕೊಲೆ ಆರೋಪದ ಮೇಲೆ ಜಯಚಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಲಕ್ಷ್ಮಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂಬ ಶಂಕೆಯಿಂದ ಜಯಚಂದ್ರ ಆಕೆಯನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆಯ ಬಳಿಕ ಶವವನ್ನು ಮನೆಯಲ್ಲೇ ಇರಿಸಿಕೊಂಡಿದ್ದ, ಅಕ್ಕಪಕ್ಕದ ಮನೆಯವರು ಹಬ್ಬಕ್ಕೆಂದು ದೇವಸ್ಥಾನಗಳಿಗೆ ಹೋದ ಸಮಯವನ್ನು ಬಳಸಿಕೊಂಡು ಆಕೆಯ ಚಿನ್ನಾಭರಣಗಳನ್ನು ತೆಗೆದು ಆಕೆಯ ದೇಹವನ್ನು ತನ್ನ ಜಮೀನಿನಲ್ಲಿ ಹೂತು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಯಚಂದ್ರ ರಾಜ್ಯ ಸಾರಿಗೆ ಬಸ್‌ನಲ್ಲಿ ಆಕೆಯ ಫೋನ್ ಅನ್ನು ಎಸೆದಿದ್ದ, ಬಸ್ ಕಂಡಕ್ಟರ್ ಸ್ವಿಚ್ ಆಫ್ ಆಗಿದ್ದ ಸೆಲ್ ಫೋನ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಫೋನ್‌ನ ಟವರ್ ಲೊಕೇಶನ್ ಮತ್ತು ಕರೆ ದಾಖಲೆಗಳನ್ನು ಗಮನಿಸಿದ ನಂತರ ಆತ ತಪ್ಪೊಪ್ಪಿಕೊಂಡಿದ್ದಾನೆ.

ಮತ್ತಷ್ಟು ಓದಿ: ಮದುವೆಯಾಗುವುದಿಲ್ಲ ಎಂದಿದ್ದಕ್ಕೆ ಶಾಲೆಯಲ್ಲೇ ಶಿಕ್ಷಕಿಗೆ ಚಾಕುವಿನಿಂದ ಇರಿದು ಕೊಲೆ

ಜಯಚಂದ್ರ ನವೆಂಬರ್ 6 ರಂದು ವಿಜಯಲಕ್ಷ್ಮಿ ಜತೆ ವಾಗ್ವಾದ ಮಾಡಿದ್ದ, ಅದು ತಾರಕಕ್ಕೇರಿ ಕೊಲೆಯ ಹಂತಕ್ಕೆ ತಲುಪಿತ್ತು. ಮಹಿಳೆಯ ಶವವನ್ನು ತನ್ನ ಮನೆಯ ಹಿಂದೆ ಕೇವಲ ಐದು ಮೀಟರ್‌ ದೂರದ ಗುಂಡಿಯಲ್ಲಿ ಹೂತು, ಮೂರು ತೆಂಗಿನ ಸಸಿಗಳನ್ನು ನೆಟ್ಟು ಅಪರಾಧವನ್ನು ಮರೆಮಾಚಲು ಯತ್ನಿಸಿದ್ದ.

ಎರಡು ವಾರಗಳ ನಂತರ ದೇಹವು ಕೊಳೆತ ಸ್ಥಿತಿಯಲ್ಲಿದ್ದು, ಮುಖ ವಿರೂಪಗೊಂಡಿತ್ತು. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಲಪ್ಪುಳ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಜಯಚಂದ್ರ ಹೇಗೆ ಕೊಲೆ ಮಾಡಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅಪರಾಧದಲ್ಲಿ ಬೇರೆ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ