ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ವಿಧಾನವನ್ನು ಬಳಸಿ ಎಟಿಎಂನಿಂದ ಹಣ ದೋಚುತ್ತಿದ್ದ ಆರೋಪಿಗಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣ ಮೂಲದ ಶಹಜಾದ್ ಮತ್ತು ಶಾಹೀದ್ ಬಂಧಿತರು. ಆರೋಪಿಗಳು ಹರಿಯಾಣ ಮೂಲದ ಪರಿಚಯಸ್ಥರ ಬಳಿಯಿಂದ ಎಟಿಎಂ ಪಡೆಯುತ್ತಾರೆ. ನಂತರ ಅವರೇ 50 ಸಾವಿರ ಅಥವಾ 1 ಲಕ್ಷ ಹಣವನ್ನು ಹಾಕುತ್ತಿದ್ರು. ಬಳಿಕ ಅವರೇ ಎಟಿಎಂ ಬಳಿ ಹೋಗಿ ಹಣ ಡ್ರಾ ಮಾಡುತ್ತಿದ್ರು. ಎಟಿಎಂನಿಂದ ಹೊರಗೆ ಬಂದ ಹಣವನ್ನು ಯಾರಿಗೂ ಅನುಮಾನ ಬಾರದಂತೆ ಅವರೇ ಕೈನಲ್ಲಿ ಇಟ್ಟುಕೊಳ್ಳುತ್ತಿದ್ರು ಎಂದು ತಿಳಿದುಬಂದಿದೆ.
ಎಂಟಿಎಂನಿಂದ ನೋಟುಗಳು ಬಂದ ನಂತರ ಆರೋಪಿಗಳ ಅಲ್ಲೇ ಇಟ್ಕೊಂಡು ಇರ್ತಿದ್ರು. ಆಗ ಮಷಿನ್ನಲ್ಲಿ ಹಣ ವಾಪಸ್ ಹೋದ ಹಾಗೆಯೇ ತೋರಿಸುತ್ತಿತ್ತು. ಬಳಿಕ ಖತರ್ನಾಕ್ ಆರೋಪಿಗಳು ಹಣವನ್ನು ತೆಗೆದುಕೊಂಡು ಅಲ್ಲಿಂದ ಎಸ್ಕೇಪ್ ಆಗುತ್ತಿದ್ರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಈ ಜಾಲದ ಹಿಂದೆ ಯಾರ್ಯಾರಿದ್ದಾರೆ ಅನ್ನೋದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.