ಬೆಂಗಳೂರು: ಏರಿಯಾದಲ್ಲಿ ಹವಾ ಮೇಂಟೇನ್ ಮಾಡೋಕೆ ಹೋಗಿ ಯುವಕನೊಬ್ಬನನ್ನು ಆತನ ಗೆಳೆಯರೇ ಕೊಲೆಗೈದಿರುವ ಘಟನೆ ನಿನ್ನೆ ಸಂಜೆ ಗಂಗಮ್ಮನಗುಡಿಯಲ್ಲಿ ನಡೆದಿದೆ. ಕಾರ್ತಿಕ್(25) ಹತ್ಯೆಯಾದ ಯುವಕ.
ಕಾರ್ತಿಕ್ ಸ್ನೇಹಿತ ಅಶೋಕ್ ಹಾಗೂ ಆತನ ಸಹಚರರಿಂದ ಕೃತ್ಯ ಎಸಗಲಾಗಿದೆ ಎಂಬ ಮಾಹಿತಿ ದೊರೆತಿದೆ. ಅಂದ ಹಾಗೆ, ಹತ್ಯೆಯಾದ ಕಾರ್ತಿಕ್ ಮತ್ತು ಹಂತಕ ಅಶೋಕ್ ಒಂದೇ ಗ್ಯಾಂಗ್ನ ಸದಸ್ಯರಂತೆ.
ನಿನ್ನೆ ಮಧ್ಯಾಹ್ನ ಎಲ್ಲರೂ ಸೇರಿ ಎಣ್ಣೆ ಪಾರ್ಟಿ ಮಾಡಿದ ಬಳಿಕ ಅವರ ನಡುವೆಯೇ ಗಲಾಟೆ ಶುರುವಾಗಿದೆ. ಏರಿಯಾದಲ್ಲಿ ಹವಾ ಮೇಂಟೇನ್ ಮಾಡೋಕೆ ನಾ ಮುಂದು ತಾ ಮುಂದು ಎಂದು ಮಾತು ಶುರುವಾಗಿ ಇಬ್ಬರ ಮಧ್ಯೆ ವಗ್ವಾದ ನಡೆದಿದೆ ಎಂದು ಹೇಳಲಾಗಿದೆ. ಕೊನೆಗೆ ಅಶೋಕ್ ಅಂಡ್ ಗ್ಯಾಂಗ್, ಸಿಟ್ಟಿನಲ್ಲಿ, ತರಕಾರಿ ಕತ್ತರಿಸುವ ಚಾಕುವಿನಿಂದ ಕಾರ್ತಿಕ್ನ ಬರ್ಬರವಾಗಿ ಕೊಲೆಗೈದಿದ್ದಾರಂತೆ.
ಸದ್ಯ, ಈ ಬಗ್ಗೆ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶೋಕ್ ಮತ್ತು ಆತನ ಸಹಚರರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.