ಕೊಡವ ಜನಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

|

Updated on: May 09, 2020 | 10:48 AM

ಕೊಡಗು: ಕೊಡವ ಜನಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಹೊಸ್ಕೇರಿ ಗ್ರಾಮದ ಕೆ.ಬಿ.ಸುಖೇಶ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಡವ ಜನಾಂಗದ ವಿರುದ್ಧ ಹೇಳಿಕೆಗಳನ್ನು ಹರಿಬಿಟ್ಟಿದ್ದ. ಈ ಬಗ್ಗೆ ಮಡಿಕೇರಿ ಕೊಡವ ಸಮಾಜದಿಂದ ಪೊಲೀಸರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಕೊಟ್ಟಿದ್ದರು. ಒಂದು ಬಾರಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ‌ ನೀಡಲಾಗಿತ್ತು. ಆದರೆ ಎರಡನೇ ಬಾರಿಯೂ ನಿಂದನೆ ಹೇಳಿಕೆಯನ್ನು ಮತ್ತೆ ಹಾಕಿದ್ದ. ಹೀಗಾಗಿ ಐಪಿಸಿ ಕಾಯ್ದೆ 153 A ರಂತೆ ಪ್ರಕರಣ ದಾಖಲಿಸಿಕೊಂಡು ಸುಖೇಶ್ ಎಂಬುವನ್ನು […]

ಕೊಡವ ಜನಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್
Follow us on

ಕೊಡಗು: ಕೊಡವ ಜನಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಹೊಸ್ಕೇರಿ ಗ್ರಾಮದ ಕೆ.ಬಿ.ಸುಖೇಶ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊಡವ ಜನಾಂಗದ ವಿರುದ್ಧ ಹೇಳಿಕೆಗಳನ್ನು ಹರಿಬಿಟ್ಟಿದ್ದ. ಈ ಬಗ್ಗೆ ಮಡಿಕೇರಿ ಕೊಡವ ಸಮಾಜದಿಂದ ಪೊಲೀಸರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಕೊಟ್ಟಿದ್ದರು. ಒಂದು ಬಾರಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ‌ ನೀಡಲಾಗಿತ್ತು.

ಆದರೆ ಎರಡನೇ ಬಾರಿಯೂ ನಿಂದನೆ ಹೇಳಿಕೆಯನ್ನು ಮತ್ತೆ ಹಾಕಿದ್ದ. ಹೀಗಾಗಿ ಐಪಿಸಿ ಕಾಯ್ದೆ 153 A ರಂತೆ ಪ್ರಕರಣ ದಾಖಲಿಸಿಕೊಂಡು ಸುಖೇಶ್ ಎಂಬುವನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.