ಬೆಂಗಳೂರು, ಜನವರಿ 05: ಬೆಂಗಳೂರಿನ ಪ್ರತಿಷ್ಟಿತ ಮಹಿಳಾ ಮಹಾವಿದ್ಯಾಲಯಗಳಲ್ಲಿ ಒಂದಾಗಿರುವ ಮೌಂಟ್ ಕಾರ್ಮೆಲ್ ಕಾಲೇಜು (Mount Carmel College Autonomous) ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ವಜ್ರ ಮಹೋತ್ಸವ ಸಂದರ್ಭದಲ್ಲಿ ಕಾಲೇಜು ಆಡಳಿತ ಹೊಸದೊಂದು ನಿರ್ಧಾರ ಮಾಡಿದೆ. ಅದು 2024-25ನೇ ಶೈಕ್ಷಣಿಕ ವರ್ಷದಿಂದ ಸಹ ಶಿಕ್ಷಣ ಆರಂಭಿಸಲಿದೆ. ಈ ಮೂಲಕ ಹುಡುಗರಿಗೂ ಪ್ರವೇಶ ನೀಡುವ ಮೂಲಕ ಸಹ ಶಿಕ್ಷಣಕ್ಕೆ (Co Education) ಬದಲಾಗುತ್ತಿದೆ.
ಈ ಬಗ್ಗೆ ಮೌಂಟ್ ಕಾರ್ಮೆಲ್ ಕಾಲೇಜಿನ ಶೈಕ್ಷಣಿಕ ರಿಜಿಸ್ಟ್ರಾರ್ ಸುಮಾ ಸಿಂಗ್ ಮಾತನಾಡಿ, ಸಂಸ್ಥೆಯು ಇನ್ಮುಂದೆ ಸಹ ಶಿಕ್ಷಣವನ್ನು ಆರಂಭಿಸಲಿದೆ. ಹೀಗಾಗಿ ಹುಡುಗರಿಗೂ ಪ್ರವೇಶ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಹೇಳಿದರು.
ಇದನ್ನೂ ಓದಿ: Inspiring: ಕಾಲೇಜು ಅರ್ಧಕ್ಕೆ ಬಿಟ್ಟು ಸ್ವಂತ ಕಂಪನಿ ಕಟ್ಟಿದ ಬೆಂಗಳೂರು ಹುಡುಗ; ಬಾಲಿವುಡ್ ಸಿನಿಮಾ ಆಗಿದೆ ಇವರ ಸಾಹಸ
ಸಂಸ್ಥೆಯು ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ದಾಖಲಾತಿ ಆರಂಭಿಸಿದೆ. 2015 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್‌ನಿಂದ ಅನುಮತಿ ಪಡೆದ ನಂತರ ಸಂಸ್ಥೆಯು ಹುಡುಗರಿಗೂ ಪಿಜಿ ಕೋರ್ಸ್‌ಗಳನ್ನು ಆರಂಭಿಸಿತು.
ಕಾಲೇಜಿನಲ್ಲಿ ಪ್ರಸ್ತುತ 13 ಹುಡುಗರು ಪಿಜಿ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ. ಸಂಸ್ಥೆಯಲ್ಲಿ ಸುಮಾರು 45 ಪದವಿಪೂರ್ವ ಕೋರ್ಸ್‌ಗಳನ್ನು ಮತ್ತು 21 ಸ್ನಾತಕೋತ್ತರ ಕೋರ್ಸ್‌ಗಳಿವೆ. ಇದೀಗ ಕಾಲೇಜು “ಡೀಮ್ಡ್-ಟು-ಬಿ-ಯೂನಿವರ್ಸಿಟಿ” ಸ್ಥಾನಮಾನವನ್ನು ಪಡೆಯುವ ಪ್ರಕ್ರಿಯೆಯಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ