Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspiring: ಕಾಲೇಜು ಅರ್ಧಕ್ಕೆ ಬಿಟ್ಟು ಸ್ವಂತ ಕಂಪನಿ ಕಟ್ಟಿದ ಬೆಂಗಳೂರು ಹುಡುಗ; ಬಾಲಿವುಡ್ ಸಿನಿಮಾ ಆಗಿದೆ ಇವರ ಸಾಹಸ

Bengaluru Boy Varun Agarwal: ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವರುಣ್ ಅಗರ್ವಾಲ್ ಓದು ಅರ್ಧಕ್ಕೆ ಬಿಟ್ಟು 22ನೇ ವಯಸ್ಸಿನಲ್ಲಿ ಆಲ್ಮ ಮಾಟರ್ ಎಂಬ ಆನ್ಲೈನ್ ಸ್ಟೋರ್ ಸ್ಥಾಪಿಸಿದ್ದರು. ‘ಹೌ ಐ ಬ್ರೇವ್ಡ್ ಅನು ಆಂಟಿ ಅಂಡ್ ಕೋ ಫೌಂಡೆಡ್ ಎ ಮಿಲಿಯನ್ ಡಾಲರ್ ಕಂಪನಿ’ ಎಂದು ಇವರು ಬರೆದ ಪುಸ್ತಕ 5 ಲಕ್ಷ ಪ್ರತಿಗಳಷ್ಟು ಮಾರಾಟವಾಗಿದೆ. ಓದಿನಲ್ಲಿ ಅಷ್ಟಕಷ್ಟೇ ಇದ್ದ ವರುಣ್ ಅಗರ್ವಾಲ್ ಅವರ ಜೀವನದ ಕಥೆ ಸಿನಿಮಾ ಆಗುತ್ತಿದೆ. ದಂಗಲ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Inspiring: ಕಾಲೇಜು ಅರ್ಧಕ್ಕೆ ಬಿಟ್ಟು ಸ್ವಂತ ಕಂಪನಿ ಕಟ್ಟಿದ ಬೆಂಗಳೂರು ಹುಡುಗ; ಬಾಲಿವುಡ್ ಸಿನಿಮಾ ಆಗಿದೆ ಇವರ ಸಾಹಸ
ವರುಣ್ ಅಗರ್ವಾಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 20, 2023 | 5:17 PM

ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓದು ಬಹಳ ಮುಖ್ಯ. ಆದರೆ ಓದೇ ಸರ್ವಸ್ವ ಅಲ್ಲ ಎಂದು ನಿರೂಪಿಸಿದವರು ಹಲವರಿದ್ದಾರೆ. ವ್ಯಾವಹಾರಿಕ ಜ್ಞಾನ, ಪರಿಶ್ರಮ, ಛಲ ಇದ್ದರೆ ಯಶಸ್ಸಿನ ಮೆಟ್ಟಿಲೇರಬಹುದು ಎಂದು ಬಹಳ ಜನರು ತೋರಿಸಿಕೊಟ್ಟಿದ್ದಾರೆ. ಶಾಲೆಯಲ್ಲಿ ವಿಫಲರಾದರೂ ಬದುಕಿನಲ್ಲಿ ಸಫಲರಾದವರು ಬಹಳ ಇದ್ದಾರೆ. ಇಂಥವರಲ್ಲಿ ಬೆಂಗಳೂರು ಹುಡುಗ ವರುಣ್ ಅಗರ್ವಾಲ್ (Varun Agarwal) ಒಬ್ಬರು.

1987ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ ವರುಣ್ ಅಗರ್ವಾಲ್ 2009ರಲ್ಲಿ ಆಲ್ಮ ಮಾಟರ್ (Alma Mater) ಎಂಬ ಆನ್​ಲೈನ್ ಸ್ಟೋರ್​ನ ಸಹ ಸಂಸ್ಥಾಪಕರಾಗಿದ್ದರು. ಆಗ ಇವರ ವಯಸ್ಸು ಕೇವಲ 22 ವರ್ಷ ಮಾತ್ರ. ವರುಣ್ ಬಿಸಿನೆಸ್​ಮ್ಯಾನ್ ಮಾತ್ರವಲ್ಲ, ಚಿತ್ರ ನಿರ್ಮಾಣ ಕೂಡ ಮಾಡುತ್ತಾರೆ. ಇವರ ಎಂತು ಕಟ್ಲೆಟ್ಸ್ (The Enthu Cutlets) ಎಂಬ ಯೂಟ್ಯೂಬ್ ಮತ್ತು ಫೇಸ್​ಬುಕ್ ಅಕೌಂಟ್ ಹೊಂದಿದ್ದಾರೆ.

ಇದನ್ನೂ ಓದಿ: Layoff Effect: ಅಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದು ಸಂಸ್ಥೆಯ ನೈತಿಕ ಸ್ಥೈರ್ಯ ಉಡುಗಿಸಿತು: ಗೂಗಲ್ ಸಿಇಒ ಸುಂದರ್ ಪಿಚೈ

ವರುಣ್ ಅಗರ್ವಾಲ್ ಶಾಲೆಯಲ್ಲಿ ಓದುವಾಗ ಬ್ರಿಲಿಯಂಟ್ ಸ್ಟುಡೆಂಟ್ ಆಗಿರಲಿಲ್ಲ. ಅವರ ಓದಿನ ಹಾದಿ ಸುಗಮವಾಗಿರಲಿಲ್ಲ. ಆದರೆ, ವ್ಯಾವಹಾರಿಕ ಕ್ಷೇತ್ರದತ್ತಲೇ ಅವರ ಮನಸು ಹರಿದಾಡುತ್ತಿತ್ತು. ಬೆಂಗಳೂರಿನ ಸಿಎಂಆರ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದವರು, ಮಧ್ಯಕ್ಕೇ ನಿರ್ಗಮಿಸಿದ್ದರು. ತನ್ನ ಸ್ನೇಹಿತ ರೋಹನ್ ಮಲ್ಹೋತ್ರಾ ಜೊತೆ ಸೇರಿ 2009ರಲ್ಲಿ ಆಲ್ಮ ಮಾಟರ್ ಸಂಸ್ಥೆ ಸ್ಥಾಪಿಸಿದರು. ಇದು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆಂದು ತೆರೆಯಲಾದ ಆನ್ಲೈನ್ ಸ್ಟೋರ್.

ಅವರ ಜೀವನ ಸಿನಿಮಾ ಆಗುತ್ತಿರುವಾಗ….

ಇವರು ತನ್ನ ಉದ್ಯಮಸಾಹಸದ ಬಗ್ಗೆ ಒಂದು ಪುಸ್ತಕ ಕೂಡ ಬರೆದಿದ್ದಾರೆ. ‘ಹೌ ಐ ಬ್ರೇವ್ಡ್ ಅನು ಆಂಟಿ ಅಂಡ್ ಕೋ ಫೌಂಡೆಡ್ ಎ ಮಿಲಿಯನ್ ಡಾಲರ್ ಕಂಪನಿ’ (How I Braved Anu Aunty and Co-Founded a Million Dollar Company) ಎಂಬ ಆ ಪುಸ್ತಕದಲ್ಲಿ ಅವರು ತಮ್ಮ ಜೀವನ ಪ್ರಯಾಣದ ವಿವರವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Poverty: ಭಾರತೀಯ ರಾಜ್ಯಗಳ ಪೈಕಿ ಕೇರಳದಲ್ಲಿ ಅತಿಕಡಿಮೆ ಬಡತನ; ಕರ್ನಾಟಕದಲ್ಲೆಷ್ಟಿದೆ? ಬಡತನ ಅಳತೆ ಹೇಗೆ?

ಇವರ ಈ ಪುಸ್ತಕ ಬಹಳ ಜನಪ್ರಿಯವಾಗಿದೆ. ಐದು ಲಕ್ಷ ಪ್ರತಿಗಳು ಮಾರಾಟ ಆಗಿವೆ. ಅಷ್ಟೇ ಅಲ್ಲ, ಅವರ ಪುಸ್ತಕದ ಆಧಾರವಾಗಿ ಬಾಲಿವುಡ್​ನಲ್ಲಿ ಸಿನಿಮಾ ಕೂಡ ತಯಾರಾಗಿದೆ. ದಂಗಲ್ ನಿರ್ದೇಶಕ ನಿತೇಶ್ ತಿವಾರಿ ಈ ಚಿತ್ರ ನಿರ್ದೇಶಿಸಿದ್ದಾರೆ. ಸಿದ್ಧಾರ್ಥ್ ರಾಯ್ ಕಪೂರ್ ಇದರ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹೆಸರು ‘ತುಮ್​ಸೆ ನ ಹೋ ಪಾಯೇಗಾ’. ಇಷ್ವಾಕ್ ಸಿಂಗ್ ನಟಿಸಿರುವ ಈ ಸಿನಿಮಾ ಈ ವರ್ಷವೇ ಬಿಡುಗಡೆ ಆಗಿದ್ದು, ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Wed, 20 December 23

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ