AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Layoff Effect: ಅಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದು ಸಂಸ್ಥೆಯ ನೈತಿಕ ಸ್ಥೈರ್ಯ ಉಡುಗಿಸಿತು: ಗೂಗಲ್ ಸಿಇಒ ಸುಂದರ್ ಪಿಚೈ

Google CEO Speaks: 12,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ ಕ್ರಮ ಸಂಸ್ಥೆಯ ನೈತಿಕ ಸ್ಥೈರ್ಯವನ್ನು ಉಡುಗಿಸಿತು ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಆಲ್ಫಬೆಟ್ ಸಂಸ್ಥೆಯ ಎಲ್ಲಾ ಉದ್ಯೋಗಿಗಳ ಸಭೆಯೊಂದರಲ್ಲಿ 51 ವರ್ಷದ ಸುಂದರ್ ಪಿಚೈಗೆ ಈ ಪ್ರಶ್ನೆ ಎದುರಾಗಿತ್ತು. ಕಳೆದ ವರ್ಷ ಗೂಗಲ್​ನ ಮಾತೃಸಂಸ್ಥೆ ಆಲ್ಫಬೆಟ್ 12,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿತ್ತು.

Layoff Effect: ಅಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದು ಸಂಸ್ಥೆಯ ನೈತಿಕ ಸ್ಥೈರ್ಯ ಉಡುಗಿಸಿತು: ಗೂಗಲ್ ಸಿಇಒ ಸುಂದರ್ ಪಿಚೈ
ಗೂಗಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 20, 2023 | 10:28 AM

ನವದೆಹಲಿ, ಡಿಸೆಂಬರ್ 20: ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದು, ಕೆಲಸ ಬಿಡುವುದು ಸಾಮಾನ್ಯವೇ. ಆದರೆ. ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದರೆ (Mass Layoffs) ಹೇಗಾಗಬಹುದು. ವರ್ಷದ ಹಿಂದೆ ಅಮೇಜಾನ್, ಗೂಗಲ್ ಸಂಸ್ಥೆಗಳು 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮಾಸ್ ಆಗಿ ತೆಗೆದುಹಾಕಿದ್ದವು. ಅಷ್ಟು ದೊಡ್ಡ ಪ್ರಮಾಣದಲ್ಲಿ ಲೇ ಆಫ್ ಮಾಡಿದ ಪರಿಣಾಮವಾಗಿ ಗೂಗಲ್​ನ ಮಾತೃ ಸಂಸ್ಥೆ ಆಲ್ಫಬೆಟ್ ಸಂಸ್ಥೆ (Alphabet Inc) ನೈತಿಕ ಸ್ಥೈರ್ಯ ಕಳೆದುಕೊಂಡಿದೆಯಂತೆ. ಆಲ್ಫಬೆಟ್ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ (Sundar Pichai) ಇದನ್ನು ಒಪ್ಪಿಕೊಂಡಿದ್ದಾರೆ. ಗೂಗಲ್ ಸಂಸ್ಥೆ ಕಳೆದ ವರ್ಷ 12,000 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು.

ಅಂದು ಅಷ್ಟು ಮಂದಿಯನ್ನು ತೆಗೆಯುವಾಗ ಗೂಗಲ್ ಸಂಸ್ಥೆ ಹೊರ ಹೋಗುತ್ತಿದ್ದ ಉದ್ಯೋಗಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು ಹೌದು. ಇದೀಗ ಆ ವಿಚಾರದ ಬಗ್ಗೆ ಮೊದಲ ಬಾರಿಗೆ ಮಾತನಾಡಿರುವ ಸುಂದರ್ ಪಿಚೈ, 12,000 ಮಂದಿಯನ್ನು ಕೆಲಸದಿಂದ ತೆಗೆದುಹಾಕುವುದು ಸರಿಯಾದ ಕ್ರಮವಾಗಿರಲಿಲ್ಲ. ಸಂಸ್ಥೆಯ ನೈತಿಕ ಸ್ಥೈರ್ಯ ಕುಸಿಯುಂತಎ ಮಾಡಿತು ಎಂದಿದ್ದಾರೆ.

ಇದನ್ನೂ ಓದಿ: Poverty: ಭಾರತೀಯ ರಾಜ್ಯಗಳ ಪೈಕಿ ಕೇರಳದಲ್ಲಿ ಅತಿಕಡಿಮೆ ಬಡತನ; ಕರ್ನಾಟಕದಲ್ಲೆಷ್ಟಿದೆ? ಬಡತನ ಅಳತೆ ಹೇಗೆ?

ಇತ್ತೀಚೆಗೆ ನಡೆದ ಗೂಗಲ್​ನ ಎಲ್ಲಾ ಉದ್ಯೋಗಿಗಳ ಸಭೆಯಲ್ಲಿ ಸಿಇಒಗೆ ಈ ಪ್ರಶ್ನೆ ಎದುರಾಗಿತ್ತು. ಈ ಸಂದರ್ಭದಲ್ಲಿ ಸುಂದರ್ ಪಿಚೈ ಅಂದಿನ ಮಾಸ್ ಲೇ ಆಫ್ ಕ್ರಮದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. 25 ವರ್ಷದ ಸಂಸ್ಥೆಯ ಇತಿಹಾಸದಲ್ಲಿ ಅಂಥ ಕ್ಷಣ ಎದುರಾಗಿರಲಿಲ್ಲ. ಅಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ತೆಗೆಯುವುದರ ಬದಲು ಪರ್ಯಾಯ ಮಾರ್ಗಗಳನ್ನು ಅವಲೋಕಿಸಬಹುದಿತ್ತು ಎಂದು ಸಿಇಒ ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಆರ್ಥಿಕ ಹಿಂಜರಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಹಲವು ಟೆಕ್ ಸಂಸ್ಥೆಗಳು ನೂರಾರು, ಸಾವಿರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದವು. ಗೂಗಲ್ ಸಂಸ್ಥೆ ಕೂಡ ಇದೇ ಕಾರಣಕ್ಕೆ ಲೇ ಆಫ್ ಕ್ರಮ ಕೈಗೊಂಡಿತ್ತು.

ಇದನ್ನೂ ಓದಿ: ಪೇಟೆಂಟ್ ವ್ಯಾಜ್ಯ; ಆ್ಯಪಲ್​ನ ಸ್ಮಾರ್ಟ್​ವಾಚ್​ಗಳಿಗೆ ಅಮೆರಿಕದಲ್ಲಿ ನಿಷೇಧ ಸಾಧ್ಯತೆ; ಏನಿದು ಬಿಕ್ಕಟ್ಟು?

‘ಯಾವುದೇ ಸಂಸ್ಥೆಗೂ ಕೂಡ ಇದು ಸವಾಲಿನ ಸಮಯವಾಗಿದೆ. 25 ವರ್ಷದಲ್ಲಿ ಗೂಗಲ್​ನಲ್ಲಿ ಇಂಥ ಸ್ಥಿತಿ ಬಂದೊದಗಿರಲಿಲ್ಲ. ನಾವೇನಾದರೂ ಕ್ರಮ ಕೈಗೊಳ್ಳದೇ ಇದ್ದಿದ್ದರೆ ಇನ್ನಷ್ಟು ವಿಕೋಪಕ್ಕೆ ಹೋಗುವ ಅವಕಾಶ ಇತ್ತು’ ಎಂದು 51 ವರ್ಷದ ಆಲ್ಫಬೆಟ್ ಮತ್ತು ಗೂಗಲ್ ಸಿಇಒ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು