Poverty: ಭಾರತೀಯ ರಾಜ್ಯಗಳ ಪೈಕಿ ಕೇರಳದಲ್ಲಿ ಅತಿಕಡಿಮೆ ಬಡತನ; ಕರ್ನಾಟಕದಲ್ಲೆಷ್ಟಿದೆ? ಬಡತನ ಅಳತೆ ಹೇಗೆ?

Multi Dimensional Poverty Index: ಭಾರತದಲ್ಲಿ ಬಹು ಆಯಾಮದ ಬಡತನ ಶೇ. 14.96ರಷ್ಟಿದೆ. ಇದು 2019-20 ಅವಧಿಯಲ್ಲಿ ನಡೆಸಲಾದ ಅಧ್ಯಯನದಲ್ಲಿ ಕಂಡುಬಂದಿರುವ ಸಂಗತಿ. ಕೇರಳ ಅತಿ ಕಡಿಮೆ ಎಂಪಿಐ ಇರುವ ರಾಜ್ಯ. ಕೇರಳ, ಗೋವಾ ಮತ್ತು ಪುದುಚೇರಿಯಲ್ಲಿ ಎಂಪಿಐ ಶೇ. 1ಕ್ಕಿಂತಲೂ ಕಡಿಮೆ ಇದೆ. ಕರ್ನಾಟಕದ ಮಲ್ಟಿ ಡೈಮೆನ್ಷನ್ ಪಾವರ್ಟಿ ಇಂಡೆಕ್ಸ್ 7.58ರಷ್ಟಿದೆ. ಭಾರತದ ಹೃದಯಭಾಗದ ಪ್ರದೇಶಗಳಲ್ಲಿ ಅತಿಹೆಚ್ಚು ಬಡತನ ದರ ಇದೆ.

Poverty: ಭಾರತೀಯ ರಾಜ್ಯಗಳ ಪೈಕಿ ಕೇರಳದಲ್ಲಿ ಅತಿಕಡಿಮೆ ಬಡತನ; ಕರ್ನಾಟಕದಲ್ಲೆಷ್ಟಿದೆ? ಬಡತನ ಅಳತೆ ಹೇಗೆ?
ಬಡತನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 19, 2023 | 7:32 PM

ಭಾರತದಲ್ಲಿ ಬಹು ಆಯಾಮದ ಬಡತನ (Multi Dimensional Poverty Index) ಶೇ. 14.96ರಷ್ಟಿದೆ. ಈ ಪೈಕಿ ಕೇರಳ ಅತಿ ಕಡಿಮೆ ಬಡತನ ಇರುವ ಪ್ರದೇಶವಾಗಿದೆ. ಗೋವಾದಲ್ಲೂ ಅತಿಕಡಿಮೆ ಬಡತನ ಇದೆ. ಭಾರತದಲ್ಲಿ ಶೇ. 1ಕ್ಕಿಂತಲೂ ಕಡಿಮೆ ಬಡತನ ಇರುವ ಪ್ರದೇಶಗಳಲ್ಲಿ ಕೇರಳ, ಗೋವಾ ಮತ್ತು ಪುದುಚೇರಿ ಇದೆ. ಕೇರಳದಲ್ಲಿ ಮಲ್ಟಿ ಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ 0.55 ಪ್ರತಿಶತ ಮಾತ್ರ ಇರುವುದು. ಗೋವಾದಲ್ಲಿ ಶೇ. 0.84 ಮತ್ತು ಪುದುಚೇರಿಯಲ್ಲಿ ಶೇ. 0.85 ಮಾತ್ರವೇ ಎಂಪಿಐ ಇರುವುದು.

ಬಿಹಾರ ರಾಜ್ಯದಲ್ಲಿ ಅತೀ ಹೆಚ್ಚು ಬಡತನ ಇರುವುದು. ಇಲ್ಲಿ ಎಂಪಿಐ ಶೇ. 33.76ರಷ್ಟು ಇದೆ. ಜಾರ್ಖಂಡ್, ಮೇಘಾಲಯ, ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಲ್ಲಿ ಬಡತನ ಪ್ರಮಾಣ ಶೇ. 20ಕ್ಕಿಂತಲೂ ಹೆಚ್ಚಿದೆ. ಮಹಾರಾಷ್ಟ್ರವೂ ಒಳಗೊಂಡಂತೆ ದಕ್ಷಿಣದ ಎಲ್ಲಾ ಪ್ರದೇಶಗಳಲ್ಲೂ ಬಡತನ ಶೇ. 10ಕ್ಕಿಂತ ಕಡಿಮೆ ಇರುವುದು ವಿಶೇಷ. ಕರ್ನಾಟಕದಲ್ಲಿ ಶೇ. 7.58 ಇದೆ.

ಇದನ್ನೂ ಓದಿ: ಪೇಟೆಂಟ್ ವ್ಯಾಜ್ಯ; ಆ್ಯಪಲ್​ನ ಸ್ಮಾರ್ಟ್​ವಾಚ್​ಗಳಿಗೆ ಅಮೆರಿಕದಲ್ಲಿ ನಿಷೇಧ ಸಾಧ್ಯತೆ; ಏನಿದು ಬಿಕ್ಕಟ್ಟು?

ಬಹು ಆಯಾಮ ಬಡತನದ ರಾಜ್ಯವಾರು ಪಟ್ಟಿ

  1. ಬಿಹಾರ: ಶೇ. 33.76
  2. ಜಾರ್ಖಂಡ್: 28.81
  3. ಮೇಘಾಲಯ: 27.79
  4. ಉತ್ತರಪ್ರದೇಶ: 22.93
  5. ಮಧ್ಯಪ್ರದೇಶ: 20.63
  6. ಅಸ್ಸಾಂ: 19.35
  7. ಛತ್ತೀಸ್​ಗಡ: 16.37
  8. ಒಡಿಶಾ: 15.68
  9. ನಾಗಾಲ್ಯಾಂಡ್: 15.43
  10. ರಾಜಸ್ಥಾನ್: 15.31
  11. ಅರುಣಾಚಲಪ್ರದೇಶ: 13.76
  12. ತ್ರಿಪುರ: 13.11
  13. ಪಶ್ಚಿಮ ಬಂಗಾಳ: 11.89
  14. ಗುಜರಾತ್: 11.66
  15. ಉತ್ತರಾಖಂಡ್: 9.67
  16. ಮಣಿಪುರ್: 8.10
  17. ಮಹಾರಾಷ್ಟ್ರ: 7.81
  18. ಕರ್ನಾಟಕ: 7.58
  19. ಹರ್ಯಾಣ: 7.07
  20. ಆಂಧ್ರಪ್ರದೇಶ: 6.06
  21. ತೆಲಂಗಾಣ: 5.88
  22. ಮಿಜೋರಾಂ: 5.30
  23. ಹಿಮಾಚಲಪ್ರದೇಶ: 4.93
  24. ಪಂಜಾಬ್: 4.75
  25. ಸಿಕ್ಕಿಂ: 2.60
  26. ತಮಿಳುನಾಡು: 2.20
  27. ಗೋವಾ: 0.84
  28. ಕೇರಳ: 0.55

ಕೇಂದ್ರಾಡಳಿತ ಪ್ರದೇಶಗಳ ಪಾವರ್ಟಿ ಇಂಡೆಕ್ಸ್

  1. ದಾದ್ರ, ನಗರ್ ಹವೇಲಿ, ದಮನ್ ದಿಯು: 9.21
  2. ಜಮ್ಮು ಕಾಶ್ಮೀರ: 4.80
  3. ಲಡಾಖ್: 3.53
  4. ಚಂದೀಗಡ್: 3.52
  5. ದೆಹಲಿ: 3.43
  6. ಅಂಡಮಾನ್ ನಿಕೋಬಾರ್: 2.30
  7. ಲಕ್ಷದ್ವೀಪ್: 1.11
  8. ಪುದುಚೇರಿ: 0.85

(ಈ ಪಟ್ಟಿಯಲ್ಲಿರುವ ಅಂಕಿ ಸಂಖ್ಯೆ 2019-20ರ ಅವಧಿಯದ್ದು.)

ಇದನ್ನೂ ಓದಿ: Indian Economy: ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಿರಲಿದೆ: ಐಎಂಎಫ್ ಅನಿಸಿಕೆ

ಮಲ್ಟಿ ಡೈಮೆನ್ಷನಲ್ ಪಾವರ್ಟಿಯ ಅಳತೆಗೋಲು ಏನು?

ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ (ಯುಎನ್​ಡಿಪಿ), ಆಕ್ಸ್​ಫರ್ಡ್ ಪಾವರ್ಟಿ, ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ (ಒಪಿಎಚ್​ಐ) ಸಂಸ್ಥೆಗಳ ಜೊತೆ ಸೇರಿ ನೀತಿ ಆಯೋಗ್ ಭಾರತದಲ್ಲಿ ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ (ಎಂಪಿಐ) ಅಭಿವೃದ್ಧಿಪಡಿಸಿದೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ವಿವಿಧ ಸ್ತರಗಳಲ್ಲಿ ಬಡತನದ ಪ್ರಮಾಣವನ್ನು ಅಳೆಯಲಾಗುತ್ತದೆ.

ಎಂಪಿಐ ಇಂಡೆಕ್ಸ್​ಗೆ ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ ಈ ಮೂರು ವಿಭಾಗಗಳನ್ನು ಸಮಾನವಾಗಿ ಪರಿಗಣಿಸಲಾಗಿದೆ. ಈ ಮೂರು ವಿಭಾಗಗಳಿಂದ 10 ಮಾನದಂಡಗಳನ್ನು ಇಂಡೆಕ್ಸ್​ಗೆ ಬಳಕೆ ಮಾಡಲಾಗಿದೆ. ಈ 10 ಸೌಕರ್ಯಗಳು ಎಷ್ಟು ಮಂದಿಗೆ ಸಿಗುತ್ತಿವೆ ಎಂಬುದು ಅಳತೆಗೋಲು.

  • ಆರೋಗ್ಯ: ಪೌಷ್ಟಿಕತೆ, ಮಗು ಆಯಸ್ಸು, ತಾಯಿಯ ಆರೋಗ್ಯ. ಈ ಪೈಕಿ ಪೌಷ್ಟಿಕತೆಗೆ ಹೆಚ್ಚು ತೂಕ ಇದೆ.
  • ಶಿಕ್ಷಣ: ಶಾಲಾ ಶಿಕ್ಷಣದ ಅವಧಿ, ಶಾಲಾ ಹಾಜರಾತಿ.
  • ಜೀವನಮಟ್ಟ: ಅಡುಗೆ ಇಂಧನ, ನೈರ್ಮಲ್ಯತೆ, ಕುಡಿಯುವ ನೀರು, ವಸತಿ, ವಿದ್ಯುತ್, ಆಸ್ತಿ, ಬ್ಯಾಂಕ್ ಖಾತೆ.

ಇವಿಷ್ಟೂ ಅಂಶಗಳನ್ನು ಪರಿಗಣಿಸಿ ಬಹು ಆಯಾಮ ಬಡತನ ಸೂಚಿ ತಯಾರಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Tue, 19 December 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ