ಪಿಯುಸಿ ಬೋರ್ಡ್ ಪರೀಕ್ಷೆಯ ನಂತರ ಯಾವ ಕೋರ್ಸ್ ಮಾಡಬೇಕು ಅನ್ನುವ ಗೊಂದಲ ವಿದ್ಯಾರ್ಥಿಗಳಲ್ಲಿರುವುದು ಸಹಜ. ಬಹಳಷ್ಟು ಸಲ ಪಿಯುಸಿ (PUC) ನಂತರ ಯಾವ ವಿಷಯವನ್ನು ಅಥವಾ ಕೋರ್ಸ್ ಅನ್ನು ಆಯ್ಕೆ ಮಾಡುತ್ತಿರೋ ಅದೇ ಕ್ಷೇತ್ರದಲ್ಲಿ ನಿಮ್ಮ ವೃತ್ತಿ ಜೀವನವನ್ನೂ ಕಟ್ಟಿಕೊಳ್ಳುತ್ತೀರಿ. ಹಾಗಾಗಿ ಪುಯುಸಿ ಬಳಿಕ ಯಾವ ವಿಷಯದಲ್ಲಿ ನಿಮಗೆ ಆಸಕ್ತಿ ಇದೆಯೋ ಅದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ವಿಜ್ಞಾನ (Science), ವಾಣಿಜ್ಯ (Commerce), ಕಲೆ (Arts), ಅಥವಾ ಯಾವುದೇ ಇತರ ವಿಷಯವಾಗಿರಲಿ, ಪ್ರತಿಯೊಂದು ಆಯ್ಕೆಯು ವೃತ್ತಿ ಮಾರ್ಗಗಳ ವ್ಯಾಪ್ತಿಯನ್ನು ತೆರೆಯುತ್ತದೆ.
ಈ ಕೆಳಗೆ ಪಿಯುಸಿ ನಂತರ ವಾಣಿಜ್ಯಕ್ಕೆ ಸಂಬಂಧಪಟ್ಟ ಯಾವ ಕೋರ್ಸ್ ಮಾಡಿದರೆ ಹೆಚ್ಚು ಸಂಬಳ ಸಿಗಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳನ್ನು ನೋಡಬಹುದು. ವಾಣಿಜ್ಯ ವಿಷಯವನ್ನು ನೀವು ಆಯ್ಕೆ ಮಾಡಿದರೆ ಮುಂದೆ ನಿಮಗೆ ಸಿಎ, ಸಿಎಸ್ ನಂತಹ ವೃತ್ತಿಪರ ಕೋರ್ಸ್ ಕೂಡ ಮಾಡುವ ಅವಕಾಶ ಇರುತ್ತದೆ.
ವಾಣಿಜ್ಯ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು, ಪಿಯುಸಿ ವಾಣಿಜ್ಯದ ನಂತರ ಆಯ್ಕೆ ಮಾಡಲು ಲಭ್ಯವಿರುವ ವಿವಿಧ ಕೋರ್ಸ್‌ಗಳ ಬಗ್ಗೆ ನೀವು ತಿಳಿದಿರಬೇಕು. 2023 ರಲ್ಲಿ ವಿದ್ಯಾರ್ಥಿಗಳಿಗೆ ಬಹಳಶ್ಟಿ ಆಯ್ಕೆ ಮತ್ತು ಅವಕಾಶಗಳು ಲಭ್ಯವಿವೆ. ಅಗತ್ಯವಿರುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದರಿಂದ ನಿಮ್ಮ ಕನಸಿನ ಕೆಲಸವನ್ನು ಪಡೆಯಲು ಸಹಾಯ ಮಾಡುತ್ತದೆ.
ವಾಣಿಜ್ಯ ಕೋರ್ಸ್ಗಳು ವಿದ್ಯಾರ್ಥಿಗಳಿಗೆ ವ್ಯವಸ್ಥಾಪಕ ಕೌಶಲ್ಯಗಳನ್ನು ನೀಡಲು ವಾಣಿಜ್ಯ, ಅರ್ಥಶಾಸ್ತ್ರ, ವ್ಯಾಪಾರ ಕಾನೂನು, ಲೆಕ್ಕಪತ್ರ ನಿರ್ವಹಣೆ, ತೆರಿಗೆ ಮತ್ತು ಹಣಕಾಸು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಬಿಕಾಮ್ ಆಕಾಂಕ್ಷಿಗಳು ಸಾಮಾನ್ಯ ವ್ಯವಹಾರ ತತ್ವಗಳ ಬಗ್ಗೆ ಕಲಿಯುತ್ತಾರೆ. ಬಿಕಾಂ ಕೋರ್ಸ್‌ಗಳಿಗೆ ಅರ್ಹತೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ 50% ಅಂಕಗಳು. ಬಿಕಾಂ ಕೋರ್ಸ್ ವಾಣಿಜ್ಯ ವಿದ್ಯಾರ್ಥಿಗಳ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ಕೋರ್ಸ್ ಆಗಿದೆ. ಬಿಕಾಂ ಪಠ್ಯಕ್ರಮವು ತೆರಿಗೆ, ಅರ್ಥಶಾಸ್ತ್ರ, ಖಾತೆಗಳು ಇತ್ಯಾದಿ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.
ಇದನ್ನೂ ಓದಿ: ಪಿಯುಸಿ ನಂತರ ವಿಜ್ಞಾನಕ್ಕೆ ಸಂಬಂಧ ಪಟ್ಟ ಯಾವ ಕೋರ್ಸ್ ಮಾಡಿದರೆ ಅತೀ ಹೆಚ್ಚು ಸಂಬಳ ಪಡೆಯಬಹುದು?
ಪದವಿ ಪೂರ್ವ ವಾಣಿಜ್ಯ 3 ವರ್ಷದ ಪೂರ್ಣ ಸಮಯ ಕೋರ್ಸ್ ಆಗಿರುತ್ತದೆ. ಇದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರಿ ಸುಮಾರು 2.5-18 ಲಕ್ಷ ರೂ. ವರೆಗೂ ವಾರ್ಷಿಕ ವೇತನ ಸಿಗುವ ಸಾಧ್ಯತೆಗಳಿವೆ. ಉನ್ನತ ಶಿಕ್ಷಣ ಪಡೆಯುವವರಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ- ಬಹಳಷ್ಟು ಅವಕಾಶಗಳಿವೆ. ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವವರಿಗೆ ಹಲವಾರು ಸ್ನಾತಕೋತ್ತರ ಕೋರ್ಸ್ಗಳು ಮತ್ತು ವೃತ್ತಿಪರ ಕೋರ್ಸ್ಗಳು ಮಾಡುವ ಅವಕಾಶ ಇದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ