CBSE 10th Result 2021: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಆಗಸ್ಟ್​ 2ಕ್ಕೆ ಘೋಷಣೆ ಸಾಧ್ಯತೆ; ಇಲ್ಲಿದೆ ನೋಡಿ ಮಾಹಿತಿ

| Updated By: Lakshmi Hegde

Updated on: Aug 01, 2021 | 6:29 PM

ಕೊವಿಡ್​ 19 ಹಿನ್ನೆಲೆಯಲ್ಲಿ ಈ ಬಾರಿ ಸಿಬಿಎಸ್​ಇ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಿಲ್ಲ. ಬದಲಾಗಿ ಆಂತರಿಕ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುತ್ತಿದೆ.

CBSE 10th Result 2021: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಆಗಸ್ಟ್​ 2ಕ್ಕೆ ಘೋಷಣೆ ಸಾಧ್ಯತೆ; ಇಲ್ಲಿದೆ ನೋಡಿ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಘೋಷಣೆಯಾಗಿದ್ದು, ಇನ್ನು ಸಿಬಿಎಸ್​ಇ 10ನೇ ತರಗತಿ ಫಲಿತಾಂಶ (CBSE 10th Result) ಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ಸಿಬಿಎಸ್​ಇ 10ನೇ ತರಗತಿ ಫಲಿತಾಂಶವನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಆಗಸ್ಟ್​ 2ರಂದು ಅಂದರೆ ನಾಳೆಯೇ ಪ್ರಕಟಿಸಲಿದೆ ಎನ್ನಲಾಗಿದೆ. ಹಾಗೊಮ್ಮೆ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ನಾಳೆ ಪ್ರಕಟವಾದರೆ ವಿದ್ಯಾರ್ಥಿಗಳು cbseresults.nic.in ಮತ್ತು cbse.gov.in. ವೆಬ್​ಸೈಟ್​ಗಳ ಮೂಲಕವೇ ತಮ್ಮ ಅಂಕವನ್ನು ನೋಡಬಹುದಾಗಿದೆ. ಶುಕ್ರವಾರ ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಈ ವೇಳೆ ಮಾತನಾಡಿದ್ದ ಪರೀಕ್ಷೆಗಳ ಕಂಟ್ರೋಲರ್​ ಸನ್ಯಂ ಭಾರದ್ವಾಜ್​, 10ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಮುಂದಿನವಾರ ಪ್ರಕಟಿಸಲಾಗುವುದು ಎಂದಿದ್ದರು. ಇದೀಗ ಬಂದಿರುವ ಮಾಹಿತಿ ಪ್ರಕಾರ ನಾಳೆಯೇ ರಿಸಲ್ಟ್​ ಬರಲಿದೆ.

ಕೊವಿಡ್​ 19 ಹಿನ್ನೆಲೆಯಲ್ಲಿ ಈ ಬಾರಿ ಸಿಬಿಎಸ್​ಇ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಿಲ್ಲ. ಬದಲಾಗಿ ಆಂತರಿಕ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುತ್ತಿದೆ. ಈಗ ನೀಡುವ ಫಲಿತಾಂಶದಿಂದ ತೃಪ್ತಿಯಾಗದಿದ್ದರೆ ವಿದ್ಯಾರ್ಥಿಗಳ ಎದುರು ಒಂದು ದಾರಿಯಿದೆ. ಕೊವಿಡ್​ 19 ಸಂದರ್ಭ ಸಾಮಾನ್ಯ ಸ್ಥಿತಿಗೆ ಮರಳಿದ ಮೇಲೆ ನಡೆಸಲಾಗುವ ಪರೀಕ್ಷೆಗಳಿಗೆ ಹಾಜರಾಗಲು ತಮ್ಮ ಶಾಲೆಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನೀವು ಈ ವಿಧಾನಗಳನ್ನು ಅನುಸರಿಸುವ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ..
1. cbseresults.nic.in ಅಥವಾ cbse.nic.in ವೆಬ್​ಸೈಟ್​ಗೆ ಭೇಟಿ ನೀಡಿ
2. ಅದರಲ್ಲಿ ಪರೀಕ್ಷಾ ಫಲಿತಾಂಶ ಎಂದಿರುವಲ್ಲಿ ಕ್ಲಿಕ್​ ಮಾಡಿ..ನಿಮ್ಮ ರೋಲ್​ ನಂಬರ್​, ಹುಟ್ಟಿದ ದಿನದ ವಿವರಗಳನ್ನು ಸಲ್ಲಿಸಿ
3. ಅದೆಲ್ಲ ಆದ ಬಳಿಕ ನಿಮ್ಮ ಸಿಬಿಎಸ್​ಇ 10ನೇ ತರಗತಿ ಫಲಿತಾಂಶವನ್ನು ವೀಕ್ಷಿಸಬಹುದು.
4. ಸ್ಕ್ರೀನ್​ ಮೇಲೆ ಕಾಣುವ ಫಲಿತಾಂಶವನ್ನು ಡೌನ್​ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದುಕೊಳ್ಳಿ.

ಇದನ್ನೂ ಓದಿ: ಟಿವಿ9 ಕನ್ನಡ ಫಲಶ್ರುತಿ: ಪುಸ್ತಕ, ಆಟಿಕೆ ಸಾಮಗ್ರಿ ಕಳೆದುಕೊಂಡಿದ್ದ ಬಾಲಕಿಯ ಕಣ್ಣಿರಿಗೆ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ

CBSE 10th Result 2021 Date And Time check here to know more information

Published On - 6:27 pm, Sun, 1 August 21