CBSE Class 10th Result 2021: ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಇಂದೇ ಪ್ರಕಟ ಸಾಧ್ಯತೆ; ರೋಲ್​ನಂಬರ್​ ಇಲ್ಲದೆಯೂ ರಿಸಲ್ಟ್​ ನೋಡಬಹುದು..

| Updated By: Lakshmi Hegde

Updated on: Jul 20, 2021 | 10:36 AM

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ, ವಿದ್ಯಾರ್ಥಿಗಳ ಅಂಕಪಟ್ಟಿ (Mark Sheet)ಯನ್ನು ಡಿಜಿಲಾಕರ್​ (Digilocker-ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಒದಗಿಸಿರುವ ಆನ್​ಲೈನ್​ ಸೇವೆ)ನಲ್ಲೂ ಹಂಚಿಕೊಂಡಿದೆ.

CBSE Class 10th Result 2021: ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಇಂದೇ ಪ್ರಕಟ ಸಾಧ್ಯತೆ; ರೋಲ್​ನಂಬರ್​ ಇಲ್ಲದೆಯೂ ರಿಸಲ್ಟ್​ ನೋಡಬಹುದು..
ಪ್ರಾತಿನಿಧಿಕ ಚಿತ್ರ
Follow us on

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board Of Secondary Education) ಇನ್ನೂ ಸಿಬಿಎಸ್​ಇ(CBSE) 10ನೇ ತರಗತಿ ಪರೀಕ್ಷೆ 2021ರ ಫಲಿತಾಂಶ ಪ್ರಕಟಗೊಳ್ಳುವ ದಿನಾಂಕ ಮತ್ತು ಸಮಯವನ್ನು ಘೋಷಿಸಿಲ್ಲ. ಮಂಡಳಿಯ ಅಂಕಪಟ್ಟಿ ತಯಾರಿಕಾ ನೀತಿಯ ಅನ್ವಯ ಫಲಿತಾಂಶ ಇಂದು (ಜು.20) ಫಲಿತಾಂಶ ಪ್ರಕಟಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಅದೂ ಕೂಡ ದೃಢವಾದ ವರದಿಯಲ್ಲ. ಇನ್ನು ಫಲಿತಾಂಶದ ದಿನ ಇನ್ನೂ ಮುಂದೂಡಲ್ಪಡುವ ಸಾಧ್ಯತೆ ಹೆಚ್ಚಾಗಿದೆ ಎಂದೂ ಮೂಲಗಳು ತಿಳಿಸಿವೆ.

ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಯಾವಾಗಲೇ ಘೋಷಣೆಯಾದರೂ ವಿದ್ಯಾರ್ಥಿಗಳು ಆನ್​ಲೈನ್ ಮೂಲಕವೇ ಅದನ್ನು ವೀಕ್ಷಿಸಬಹುದು. cbseresults.nic.in ವೆಬ್​​ಸೈಟ್​​ನಲ್ಲಿ ವಿದ್ಯಾರ್ಥಿಗಳ ತಮ್ಮ ಪ್ರವೇಶ ಪತ್ರದಲ್ಲಿ ನಮೂದಿಸಲಾದ ರೋಲ್​ ನಂಬರ್​ ಹಾಗೂ ಇನ್ನಿತರ ವಿವರಗಳನ್ನು ನಮೂದಿಸಿ ಫಲಿತಾಂಶ ವೀಕ್ಷಿಸಬಹುದು. ಸಾಮಾನ್ಯವಾಗಿ ವಿದ್ಯಾರ್ಥಿಗಳ ಪ್ರವೇಶ ಪತ್ರವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯೇ ಹೊರತರುತ್ತದೆ ಮತ್ತು ಅದನ್ನು ಆಯಾ ಶಾಲೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಮುಂಚಿತವಾಗಿಯೇ ನೀಡುತ್ತಾರೆ. ಆದರೆ ಈ ಬಾರಿ ಸಿಬಿಎಸ್​ಇ 10ನೇ ತರಗತಿ ಪರೀಕ್ಷೆಗಳು, ಮಂಡಳಿ ಪ್ರವೇಶ ಪತ್ರ ನೀಡುವ ಮೊದಲೇ ರದ್ದುಗೊಂಡಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ರೋಲ್​ ನಂಬರ್​ ಪಡೆಯುವ ವಿಧಾನ ಹಾಗೂ ರೋಲ್​ ನಂಬರ್​ ಇಲ್ಲದೆಯೇ ಈ ಬಾರಿಯ ಫಲಿತಾಂಶ ವೀಕ್ಷಿಸುವ ವಿಧಾನವನ್ನು ಇಲ್ಲಿ ವಿವರಿಸಿದ್ದೇವೆ.

ಸಿಬಿಎಸ್​ಇ 10ನೇ ತರಗತಿ ರೋಲ್​ನಂಬರ್ ಪಡೆಯುವ ವಿಧಾನ
ರೋಲ್​ನಂಬರ್​​ ವಿದ್ಯಾರ್ಥಿಗಳಿಗೆ ಸಿಗದೆ ಇದ್ದರೂ, ಆಯಾ ಶಾಲೆಗಳ ಬಳಿ ಇದ್ದೇ ಇರುತ್ತದೆ. ಹಾಗಂತ ಶಾಲೆಗಳು ಇನ್ನೂ ವಿದ್ಯಾರ್ಥಿಗಳಿಗೆ ರೋಲ್​ ನಂಬರ್​ ನೀಡಿಲ್ಲ. ಆದರೆ ಈ ರೋಲ್​ ನಂಬರ್​ ಇಲ್ಲದೆ, ವಿದ್ಯಾರ್ಥಿಗಳು ತಮ್ಮ ಸಿಬಿಎಸ್​ಇ ಫಲಿತಾಂಶ ಹೇಗೆ ಪಡೆಯುತ್ತಾರೆಂದು ಅನೇಕ ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಅದಾಗಲೇ ಪ್ರಶ್ನೆಗಳನ್ನು ಎತ್ತಿದ್ದಾರೆ. ಇನ್ನು ರೋಲ್​ನಂಬರ್​ ಬಗ್ಗೆ ಮಾಹಿತಿ ಕೇಳಲು ವಿದ್ಯಾರ್ಥಿಗಳಿಗೆ ಆನ್​ಲೈನ್​ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದೂ ಹೇಳಲಾಗಿದೆ. ವಿದ್ಯಾರ್ಥಿಗಳು ರೋಲ್​ನಂಬರ್ ಬೇಕೆಂದರೆ ತಮ್ಮ ಶಾಲೆಯನ್ನೇ ಕೇಳಬೇಕಾಗಿದೆ.

ರೋಲ್​ನಂಬರ್ ಇಲ್ಲದೆ ಫಲಿತಾಂಶ ವೀಕ್ಷಣೆ ಹೇಗೆ?
ಸಿಬಿಎಸ್​ಇ -10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಆನ್​​ಲೈನ್​ನಲ್ಲಿ ಬಿಡುಗಡೆ ಮಾಡುವ ಜತೆಗೆ, ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ, ವಿದ್ಯಾರ್ಥಿಗಳ ಅಂಕಪಟ್ಟಿ (Mark Sheet)ಯನ್ನು ಡಿಜಿಲಾಕರ್​ (Digilocker-ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಒದಗಿಸಿರುವ ಆನ್​ಲೈನ್​ ಸೇವೆ)ನಲ್ಲೂ ಹಂಚಿಕೊಂಡಿದೆ. ಇಲ್ಲಿ ವೀಕ್ಷಿಸಲು ವಿದ್ಯಾರ್ಥಿಗಳಿಗೆ ರೋಲ್​ನಂಬರ್​ ಅಗತ್ಯವಿರುವುದಿಲ್ಲ. ಆಧಾರ್​ ಕಾರ್ಡ್​ ನಂಬರ್​ ಮತ್ತು ಫೋನ್​ ನಂಬರ್​ ಉಪಯೋಗಿಸಿಯೇ ಫಲಿತಾಂಶ ನೋಡಬಹುದು.

ಇನ್ನು ಕಳೆದ ವರ್ಷ ಈ ಶಿಕ್ಷಣ ಮಂಡಳಿ Facial Recognition (ಮುಖ ಗುರುತು) ವ್ಯವಸ್ಥೆಯನ್ನೂ ಪರಿಚಯಿಸಿದ್ದು, ವಿದ್ಯಾರ್ಥಿಗಳು ತಮ್ಮ ಮುಖವನ್ನು ಬಳಸಿಯೂ ಪರೀಕ್ಷೆ ಫಲಿತಾಂಶ ಪಡೆಯಬಹುದು. ಆಧಾರ್​ ಕಾರ್ಡ್​​ ಇಲ್ಲದ ವಿದ್ಯಾರ್ಥಿಗಳು ಡಿಜಿಲಾಕರ್​​ನಲ್ಲಿ ಗುರುತಿಗೆ ತಮ್ಮ ಮುಖ ತೋರಿಸಿ ಫಲಿತಾಂಶ ಪಡೆಯಬಹುದಾಗಿದೆ. ಇದರೊಂದಿಗೆ ಇನ್ನಷ್ಟು ವ್ಯವಸ್ಥೆಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಜಾರಿಗೊಳಿಸುವ ಸಾಧ್ಯತೆಗಳು ಹೆಚ್ಚಾಗಿದೆ.

ಇದನ್ನೂ ಓದಿ: One Plus Nord 2: ಬಿಡುಗಡೆಗೆ ಎರಡೇ ದಿನ ಬಾಕಿ: ರೋಚಕತೆ ಸೃಷ್ಟಿಸುತ್ತಿದೆ ಹೊಸ ಒನ್​ಪ್ಲಸ್ ನಾರ್ಡ್ 2

CBSE 10th Result 2021 here is the information about how to check result without Roll Number