One Plus Nord 2: ಬಿಡುಗಡೆಗೆ ಎರಡೇ ದಿನ ಬಾಕಿ: ರೋಚಕತೆ ಸೃಷ್ಟಿಸುತ್ತಿದೆ ಹೊಸ ಒನ್‌ಪ್ಲಸ್ ನಾರ್ಡ್ 2
4500mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ನೀಡಲಾಗಿದ್ದಲ್ಲದೆ ಬರೋಬ್ಬರಿ 65W ನ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ರೆಡ್ಮಿ, ಎಂಐ, ಸ್ಯಾಮ್ಸಂಗ್ ಮೊಬೈಲ್ಗಳ ನಡುವೆ ತನ್ನದೆ ಆದ ವಿಶೇಷ ಸ್ಥಾನ ಕಾಪಾಡಿಕೊಂಡಿರುವ ಒನ್‌ಪ್ಲಸ್ (OnePlus) ಕಂಪೆನಿ ಸದ್ಯ ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಜುಲೈ 22 ರಂದು ಸಾಕಷ್ಟು ರೋಚಕತೆ ಸೃಷ್ಟಿಸಿರುವ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಇ ಕಾಮರ್ಸ್ ತಾಣ ಅಮೆಜಾನ್ (Amazon) ಇಂಡಿಯಾ ಒನ್‌ಪ್ಲಸ್ ನಾರ್ಡ್ 2ಗಾಗಿಯೇ ಪ್ರತ್ಯೇಕವಾದ ಮೈಕ್ರೋಸೈಟ್‌ಗಳನ್ನು ಸೃಷ್ಟಿಸಿವೆ.
ವಿಶೇಷ ಏನೆಂದರೆ, ನಾರ್ಡ್ 2 ಮೀಡಿಯಾ ಟೆಕ್ ಚಿಪ್‌ಸೆಟ್ ಹೊಂದಿರುವ ಚೊಚ್ಚಲ ಒನ್‌ಪ್ಲಸ್ ಸಾಧನವಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಎಐ ಚಿಪ್ ಅನ್ನು ಒಳಗೊಂಡಿದೆ. ಒನ್‌ಪ್ಲಸ್ 9 ರೀತಿಯ ವಿನ್ಯಾಸವನ್ನು ಈ ಫೋನ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ 50 ಮೆಗಾಪಿಕ್ಸಲ್ ಕ್ಯಾಮೆರಾ, 4500mAh ಬ್ಯಾಟರಿ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಒಳಗೊಂಡಿದೆ.
Nord 2 launches in three days!
That’s almost exactly one year after the original OnePlus Nord. And although we’re proud of everything we’ve achieved so far, it’s safe to say that we’ve really outdone ourselves this time.
Tune in to the launch at 7:30pm IST, July 22 pic.twitter.com/I1UTyRhUCu
— OnePlus India (@OnePlus_IN) July 19, 2021
91ಮೊಬೈಲ್ಸ್ ಬಿಡುಗಡೆ ಮಾಡಿದಂತಹ ವರದಿಯ ಪ್ರಕಾರ, ಒನ್‌ಪ್ಲಸ್ ಕಂಪೆನಿಯ ನಾರ್ಡ್ 2 ಸ್ಮಾರ್ಟ್‌ಫೋನ್ ಭಾರತದಲ್ಲಿ ಕೇವಲ ಒಂದು ಮಾದಿರಿಯಲ್ಲಿ ಮಾತ್ರ ಲಭ್ಯವಿದೆಯಂತೆ. ಇದು 12GB RAM ಮತ್ತು 256GB ಸ್ಟೋರೆಜ್ ಆಯ್ಕೆಯನ್ನು ಹೊಂಡಿರಲಿದೆ. ಇದರ ಬೆಲೆ 31,999 ರೂಪಾಯಿಗಳು ಎಂಬ ಮಾತಿದೆ.
ಈ ಸ್ಮಾರ್ಟ್ಫೋನ್ನಲ್ಲಿ 6.43 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಮತ್ತು ಅಮೋಎಲ್ಇಡಿ ಡಿಸ್‌ಪ್ಲೇ ಇದ್ದು, ಮೀಡಿಯಾ ಟೆಕ್ ಡಿಮೆನ್ಸಿಟಿ 1200 ಎಐ ಚಿಪ್ ಅಳವಡಿಸಲಾಗಿದೆ. ವ್ಯಾಲ್ಯೂಮ್ ರಾಕರ್ ಫೋನ್‌ನ ಎಡ ಬದಿಯಲ್ಲಿ ಇರಲಿದೆ. ಫೋನ್ ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇರುವಂತೆ ಕಾಣುತ್ತಿಲ್ಲ. ಆ ಫೀಚರ್ ಅನ್ನು ನೀವು ಡಿಸ್‌ಪ್ಲೇಯಲ್ಲಿ ಕಾಣಬಹುದಾಗಿದೆ.
ಕ್ಯಾಮೆರಾ ಬಗ್ಗೆ ಹೇಳುವುದಾದರೆ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್‌ನ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಇರಲಿದೆ. ಮೂರು ಕ್ಯಾಮೆರಾಗಳ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಕ್ಯಾಮೆರಾವಾಗಿರಲಿದೆ. ಇನ್ನುಳಿದ ಎರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಿದ್ದು, ಡೆಪ್ತ್ ಮತ್ತು ಮ್ಯಾಕ್ರೋ ಲೆನ್ಸ್‌ಗಳಿಗಾಗಿ ಬಳಸಲಾಗುತ್ತದೆ. ಸೆಲ್ಫಿಗಾಗಿ ಕಂಪನಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಿದೆ.
4500mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ನೀಡಲಾಗಿದ್ದಲ್ಲದೆ ಬರೋಬ್ಬರಿ 65W ನ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಒನ್‌ಪ್ಲಸ್ ನಾರ್ಡ್ 2 5ಜಿ ಸ್ಮಾರ್ಟ್‌ಫೋನ್ ಆಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಜುಲೈ 22ರಂದು ಸಂಜೆ 7:30ಕ್ಕೆ ಬಿಡುಗಡೆ ಮಾಡಲಿದೆ.
WhatsApp New Feature: ಕರೆ ಮಧ್ಯೆ ಸೇರಿಕೊಳ್ಳಲು ಅವಕಾಶವಿರುವ ಹೊಸ ಗ್ರೂಪ್ ಕಾಲ್ ಆಯ್ಕೆ ಪರಿಚಯಿಸಿದ ವಾಟ್ಸ್ಯಾಪ್
Explainer: ಏನಿದು ಪೆಗಾಸಸ್ ಗೂಢಚರ್ಯೆ ತಂತ್ರಾಂಶ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?