WhatsApp New Feature: ಕರೆ ಮಧ್ಯೆ ಸೇರಿಕೊಳ್ಳಲು ಅವಕಾಶವಿರುವ ಹೊಸ ಗ್ರೂಪ್​ ಕಾಲ್​ ಆಯ್ಕೆ ಪರಿಚಯಿಸಿದ ವಾಟ್ಸ್ಯಾಪ್

ಫೇಸ್​ಬುಕ್ ಮಾಲೀಕತ್ವದ ವಾಟ್ಸ್ಯಾಪ್​ ಕಂಪನಿಯು ಈವರೆಗೆ ಇಂಥ ಅವಕಾಶ ನೀಡಿರಲಿಲ್ಲ. ಈಗಾಗಲೇ ಕಾಲ್​ನಲ್ಲಿರುವ ಭಾಗಿದಾರರು ಮಾತ್ರ ಮತ್ತೊಬ್ಬರನ್ನು ಕಾಲ್​ಗೆ ಸೇರಿಸಲು ಅವಕಾಶವಿತ್ತು.

WhatsApp New Feature: ಕರೆ ಮಧ್ಯೆ ಸೇರಿಕೊಳ್ಳಲು ಅವಕಾಶವಿರುವ ಹೊಸ ಗ್ರೂಪ್​ ಕಾಲ್​ ಆಯ್ಕೆ ಪರಿಚಯಿಸಿದ ವಾಟ್ಸ್ಯಾಪ್
ಹೊಸ ಆಯ್ಕೆ ಪರಿಚಯಿಸಿದ ವಾಟ್ಸ್ಯಾಪ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 19, 2021 | 11:44 PM

ದೆಹಲಿ: ವಾಟ್ಸ್ಯಾಪ್ ಸೋಮವಾರ ತನ್ನ ಆ್ಯಪ್​ಗೆ ಹೊಸದೊಂದು ವೈಶಿಷ್ಟ್ಯ ಪರಿಚಯಿಸಿದೆ. ಗ್ರೂಪ್​ ಕಾಲ್ ಆರಂಭವಾಗಿ, ಸಕಾಲದಲ್ಲಿ ಕಾಲ್​ಗೆ ಸೇರಿಕೊಳ್ಳಲು ಆಗದಿದ್ದರೆ ಅಂಥ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಕಾಲ್​ಗೆ ಸೇರಿಕೊಳ್ಳಲು ಅವಕಾಶ ನೀಡಲಾಗಿದೆ. ಫೋನ್ ರಿಂಗ್ ಆದಾಗ ಕಾಲ್ ಪಿಕ್ ಮಾಡದಿದ್ದರೂ ನಂತರ ಅದೇ ಕಾಲ್​ಗೆ ಸೇರಿಕೊಳ್ಳಲು ಈ ಮೂಲಕ ಅವಕಾಶ ಸಿಗಲಿದೆ. ಗ್ರೂಪ್​ ಕಾಲ್​ನಿಂದ ಯಾವಾಗ ಬೇಕಿದ್ದರೂ ಹೊರಬಂದು, ಮತ್ತೆ ಸೇರಿಕೊಳ್ಳಲೂ ಇನ್ನು ಮುಂದೆ ಅವಕಾಶ ಸಿಗಲಿದೆ.

ವಾಟ್ಸ್ಯಾಪ್​ನ ಕಾಲ್​ ಟ್ಯಾಬ್​ ಮೇಲೆ ಟ್ಯಾಪ್ ಮಾಡುವ ಮೂಲಕ ಜಾಯ್ನ್​ ಆಗಲು ಅವಕಾಶವಿರುವ ಗ್ರೂಪ್​ ಕಾಲ್​ಗಳನ್ನು ಪರಿಶೀಲಿಸಿಕೊಳ್ಳಬಹುದು. ಫೇಸ್​ಬುಕ್ ಮಾಲೀಕತ್ವದ ವಾಟ್ಸ್ಯಾಪ್​ ಕಂಪನಿಯು ಈವರೆಗೆ ಇಂಥ ಅವಕಾಶ ನೀಡಿರಲಿಲ್ಲ. ಈಗಾಗಲೇ ಕಾಲ್​ನಲ್ಲಿರುವ ಭಾಗಿದಾರರು ಮಾತ್ರ ಮತ್ತೊಬ್ಬರನ್ನು ಕಾಲ್​ಗೆ ಸೇರಿಸಲು ಅವಕಾಶವಿತ್ತು.

ಹೊಸ ಆಯ್ಕೆ ಚಾಲ್ತಿಗೆ ಬಂದಿರುವ ವಿಚಾರವನ್ನು ಫೇಸ್​ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್​ ಝುಕರ್​ಬರ್ಗ್​ ಘೋಷಿಸಿದ್ದಾರೆ. ‘ವಾಟ್ಸ್ಯಾಪ್​ನಲ್ಲಿ ಜಾಯ್ನಬಲ್ ಕಾಲ್​ ಆಯ್ಕೆಯನ್ನು ಹೊಸದಾಗಿ ಪರಿಚಯಿಸುತ್ತಿದ್ದೇವೆ. ನಿಮ್ಮನ್ನು ಚಾಲ್ತಿಯಲ್ಲಿರುವ ಗ್ರೂಪ್​ ಕಾಲ್​ಗೆ ಸೇರಿಸಬಹುದು ಅಥವಾ ಮಿಸ್ ಮಾಡಿಕೊಂಡ ಗ್ರೂಪ್​ ಕಾಲ್​ಗೆ ನೀವು ನಂತರವೂ ಸೇರಿಕೊಳ್ಳಬಹುದು’ ಎಂದು ಹೇಳಿದ್ದಾರೆ.

ನೀವು ಇನ್​ಕಮಿಂಗ್ ಕಾಲ್​ಗೆ ಹೀಗೆ ಸೇರಿಕೊಳ್ಳಬಹುದು – ಗ್ರೂಪ್ ಕಾಲ್​ಗೆ ಜಾಯ್ನ್ ಆಗಲು ಇನ್​ವೈಟ್ ಕಳಿಸಿದಾಗ ನಿಮಗೆ ನೋಟಿಫಿಕೇಶನ್ ಬರುತ್ತೆ – ನಿಮಗೆ ಸೇರಿಕೊಳ್ಳಲು ಆಗದಿದ್ದರೆ Ignore ಟ್ಯಾಪ್ ಮಾಡಿ – ಸೇರಿಕೊಳ್ಳಬೇಕಿದ್ದರೆ ಇನ್​ಫೊ ಸ್ಕ್ರೀನ್ ಓಪನ್ ಮಾಡಿ, Join ಟ್ಯಾಪ್ ಮಾಡಿ – ಕಾಲ್ ಮೆನು ಪರಿಶೀಲಿಸಿದರೆ ಗ್ರೂಪ್​ ಕಾಲ್​ನಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದು ತಿಳಿಯುತ್ತದೆ – ಹೊಸದಾಗಿ ಯಾರನ್ನಾದರೂ ಸೇರಿಸಬೇಕೆಂದಿದ್ದರೆ ರಿಂಗ್​ ಟ್ಯಾಪ್ ಮಾಡಿ ಕಾಂಟ್ಯಾಕ್ಟ್​ ಸೆಲೆಕ್ಟ್ ಮಾಡಿ

ಗ್ರೂಪ್​ ಕಾಲ್​ಗೆ ಹೇಗೆ ಜಾಯಿನ್ ಆಗಬಹುದು ಎಂದು ತಿಳಿಯಲು ಈ ವಿಡಿಯೊ ನೋಡಿ

(WhatsApp Joinable Calls Rolls New Feature that Allows One to Join a Group Call That They Missed)

ಇದನ್ನೂ ಓದಿ: ಮೇ 15ರಿಂದ ಜೂನ್ 15ರ ನಡುವೆ 20 ಲಕ್ಷ ಭಾರತೀಯರ ವಾಟ್ಸ್ಯಾಪ್ ಅಕೌಂಟ್ ನಿರ್ಬಂಧ

ಇದನ್ನೂ ಓದಿ: ವಾಟ್ಸ್ಯಾಪ್ ಗುಂಪಿನ ಸದಸ್ಯನ ಆಕ್ಷೇಪಾರ್ಹ ಪೋಸ್ಟ್​ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ: ಬಾಂಬೆ ಹೈಕೋರ್ಟ್

Published On - 11:43 pm, Mon, 19 July 21

ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ