ಮೇ 15ರಿಂದ ಜೂನ್ 15ರ ನಡುವೆ 20 ಲಕ್ಷ ಭಾರತೀಯರ ವಾಟ್ಸ್ಯಾಪ್ ಅಕೌಂಟ್ ನಿರ್ಬಂಧ

ಆನ್​ಲೈನ್​ ಕಿರುಕುಳ ತಪ್ಪಿಸಲು, ಬಳಕೆದಾರರ ಸುರಕ್ಷೆ ಕಾಪಾಡಲು ಇಂಥ ಕಠಿಣ ಕ್ರಮ ಅನಿವಾರ್ಯವಾಗಿತ್ತು ಎಂದು ಫೇಸ್​ಬುಕ್ ಮಾಲೀಕತ್ವದ ಮೆಸೆಂಜಿಂಗ್ ಆ್ಯಪ್ ವೇದಿಕೆಯು ಗುರುವಾರ ಸಲ್ಲಿಸಿದ ಮಾಸಿಕ ವರದಿಯಲ್ಲಿ ತಿಳಿಸಿದೆ.

ಮೇ 15ರಿಂದ ಜೂನ್ 15ರ ನಡುವೆ 20 ಲಕ್ಷ ಭಾರತೀಯರ ವಾಟ್ಸ್ಯಾಪ್ ಅಕೌಂಟ್ ನಿರ್ಬಂಧ
ಪ್ರಾತಿನಿಧಿಕ ಚಿತ್ರ
Follow us
| Updated By: Skanda

Updated on:Jul 16, 2021 | 10:50 AM

ದೆಹಲಿ: ಮೇ 15ರರಿಂದ ಜೂನ್ 15ರ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಭಾರತೀಯರ ವಾಟ್ಸ್ಯಾಪ್ ಅಕೌಂಟ್​ಗಳನ್ನು ನಿರ್ಬಂಧಿಸಲಾಗಿದೆ. ಆನ್​ಲೈನ್​ ಕಿರುಕುಳ ತಪ್ಪಿಸಲು, ಬಳಕೆದಾರರ ಸುರಕ್ಷೆ ಕಾಪಾಡಲು ಇಂಥ ಕಠಿಣ ಕ್ರಮ ಅನಿವಾರ್ಯವಾಗಿತ್ತು ಎಂದು ಫೇಸ್​ಬುಕ್ ಮಾಲೀಕತ್ವದ ಮೆಸೆಂಜಿಂಗ್ ಆ್ಯಪ್ ವೇದಿಕೆಯು ಗುರುವಾರ ಸಲ್ಲಿಸಿದ ಮಾಸಿಕ ವರದಿಯಲ್ಲಿ ತಿಳಿಸಿದೆ.

ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಕಾರ ಪ್ರತಿ ತಿಂಗಳೂ ಸಾಮಾಜಿಕ ಮಾಧ್ಯಮ ಮತ್ತು ಮೆಸೆಂಜಿಂಗ್​ ಸೇವೆ ಒದಗಿಸುವ ಕಂಪನಿಗಳು ಇಂಥ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.

ನಾವು ತಂತ್ರಜ್ಞಾನ ಸುಧಾರಿಸಲು, ಜನರು ಮತ್ತು ಪ್ರಕ್ರಿಯೆಗಳನ್ನು ಸುರಕ್ಷಿತವಾಗಿರಿಸಲು ಸದಾ ಪ್ರಯತ್ನಿಸುತ್ತೇವೆ. ಹಾನಿಕಾರಕ ಅಥವಾ ಬೇಡದ ಮೆಸೇಜ್​ಗಳನ್ನು ದೊಡ್ಡಮಟ್ಟದಲ್ಲಿ ರವಾನಿಸದಂತೆ ತಡೆಯುವುದು ನಮ್ಮ ಉದ್ದೇಶ. ಅಸಹಜ ಚಟುವಟಿಕೆ ನಡೆಸುವ ಮತ್ತು ಅತಿಹೆಚ್ಚು ಜನರಿಗೆ ಮೆಸೇಜ್​ಗಳನ್ನು ಕಳಿಸುವ ಸಂಖ್ಯೆಗಳನ್ನು ಗುರುತಿಸಿ ನಿರ್ಬಂಧಿಸುವ ವ್ಯವಸ್ಥೆ ರೂಪಿಸಿದ್ದೇವೆ. ಇಂಥ ಚಟುವಟಿಕೆಗಳಲ್ಲಿ ನಿರತವಾದ ಸುಮಾರು 20 ಲಕ್ಷ ಅಕೌಂಟ್​ಗಳನ್ನು ಮೇ 15ರಿಂದ ಜೂನ್ 15ರ ಅವಧಿಯಲ್ಲಿ ನಿರ್ಬಂಧಿಸಿದ್ದೇವೆ. ಈ ಪೈಕಿ ಹಲವು ಅಕೌಂಟ್​ಗಳು ಕಿರುಕುಳ ನೀಡಲು ಬಳಕೆಯಾಗುತ್ತಿದ್ದ ಆರೋಪ ಎದುರಿಸುತ್ತಿದ್ದವು ಎಂದು ವಾಟ್ಸ್ಯಾಪ್​ ಕಂಪನಿ ಹೇಳಿದೆ.

ಹಾನಿಕಾರಕ ಕೃತ್ಯಗಳಿಗಾಗಿ ನಮ್ಮ ವೇದಿಕೆಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಇಂಥ ಚಟುವಟಿಕೆಗಳನ್ನು ತಡೆಯಲೆಂದೇ ಹಲವು ಸಾಧನಗಳು ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ನಿಯೋಜಿಸಿದ್ದೇವೆ. ಹಾನಿಕಾರಕ ಚಟುವಟಿಕೆಗಳನ್ನು ತಡೆಗಟ್ಟುವುದು ನಮ್ಮ ಮುಖ್ಯ ಉದ್ದೇಶ. ಅಂಥ ಕೃತ್ಯ ನಡೆಯುವ ಮೊದಲೇ ಗುರುತಿಸಿ ತಡೆಯುವುದರಲ್ಲಿ ನಾವು ಹೆಚ್ಚು ವಿಶ್ವಾಸವಿಟ್ಟಿದ್ದೇವೆ ಎಂದು ವಾಟ್ಸ್ಯಾಪ್ ವರದಿ ಹೇಳಿದೆ.

ಕಿರುಕುಳದ ಮೆಸೇಜ್​ಗಳನ್ನು ಗುರುತಿಸಲು ನಮ್ಮ ವೇದಿಕೆಯು ಮೂರು ಹಂತದ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸಿದೆ. ಯಾವುದೇ ಅಕೌಂಟ್​ನ ನೋಂದಣಿ ಸಂದರ್ಭ, ಮೆಸೇಜ್​ಗಳನ್ನು ರವಾನಿಸುವ ಸಂದರ್ಭ ಮತ್ತು ಯಾವುದೇ ಮೆಸೇಜ್​ ಬಗ್ಗೆ ವರದಿಯಾಗುವ ನೆಗೆಟಿವ್ ಪ್ರತಿಕ್ರಿಯೆಯನ್ನು ಅನುಸರಿಸಿ ವಾಟ್ಸ್ಯಾಪ್​ ಕ್ರಮ ಕೈಗೊಳ್ಳುತ್ತದೆ. ವಿಶ್ಲೇಷಕರ ಒಂದು ವಿಶೇಷ ತಂಡವೇ ಈ ವ್ಯವಸ್ಥೆಯನ್ನು ನಿರ್ವಹಿಸಲು ಕೆಲಸ ಮಾಡುತ್ತಿದೆ. ಕಾಲಾನುಕ್ರಮದಲ್ಲಿ ಈ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಸತತ ಪ್ರಯತ್ನ ನಡೆಯುತ್ತಿದೆ ಎಂದು ಸಂಸ್ಥೆಯು ಹೇಳಿದೆ.

(WhatsApp Accounts of Over 20 Lakh Indians Banned Between May 15 And June 15)

ಇದನ್ನೂ ಓದಿ: ವಾಟ್ಸ್ಯಾಪ್ ಗುಂಪಿನ ಸದಸ್ಯನ ಆಕ್ಷೇಪಾರ್ಹ ಪೋಸ್ಟ್​ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ: ಬಾಂಬೆ ಹೈಕೋರ್ಟ್

ಇದನ್ನೂ ಓದಿ: Explainer | Sandes: ವಾಟ್ಸ್ಯಾಪ್​ಗೆ ಸೆಡ್ಡು ಹೊಡೆಯಲು ಬರುತ್ತಿದೆ ಸರ್ಕಾರಿ ಆ್ಯಪ್  ಸಂದೇಸ್

Published On - 10:54 pm, Thu, 15 July 21

'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ