6000mAh ಬ್ಯಾಟರಿ, 18W ಫಾಸ್ಟ್​ ಚಾರ್ಜಿಂಗ್​ನ ಪೋಕೋ M​3 ಈಗ 4GB RAMನಲ್ಲಿ ಲಭ್ಯ: ಬೆಲೆ ಕೇವಲ…

Poco M3: ಈಗ ಪೋಕೋ M​3 ಸ್ಮಾರ್ಟ್​ಫೋನ್ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಲಭ್ಯವಿದೆ. ಹೊಸದಾಗಿ ಬಿಡುಗಡೆ ಆದ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯಕ್ಕೆ ಕೇವಲ 10,499 ರೂ. ಆಗಿದೆ.

6000mAh ಬ್ಯಾಟರಿ, 18W ಫಾಸ್ಟ್​ ಚಾರ್ಜಿಂಗ್​ನ ಪೋಕೋ M​3 ಈಗ 4GB RAMನಲ್ಲಿ ಲಭ್ಯ: ಬೆಲೆ ಕೇವಲ…
Poco M3
Follow us
TV9 Web
| Updated By: Vinay Bhat

Updated on: Jul 19, 2021 | 3:32 PM

ಭಾರತದಲ್ಲಿ ಬಜೆಟ್ ಮತ್ತು ಮಧ್ಯಮ ಬೆಲೆಗೆ ಆಕರ್ಷಕ ಸ್ಮಾರ್ಟ್​​ಫೋನ್ಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿರುವ ಪೋಕೋ (Poco) ಸಂಸ್ಥೆ ಸದ್ಯ ತನ್ನ ಪೋಕೋ M​3 (Poco M3) ಫೋನನ್ನು ಹೊಸ ಆಯ್ಕೆಯಲ್ಲಿ ರಿಲೀಸ್ ಮಾಡಿದೆ. ಪೋಕೋ ಎಮ್2 ಯಶಸ್ವಿಯಾದ ಬಳಿಕ ಲಾಂಚ್ ಮಾಡಿದ ಎಮ್​3 ಕೂಡ ಅತ್ಯುತ್ತಮ ಸೇಲ್ ಕಂಡಿತ್ತು. ಆದರೆ, ಫೋನ್ 4GB RAM ಆಯ್ಕೆಯಲ್ಲಿ ಲಭ್ಯವಿರಲಿಲ್ಲ. ಸದ್ಯ ಆಯ್ಕೆಯಲ್ಲಿ ಬಿಡುಗಡೆ ಮಾಡಿ ಸೇಲ್ ಮಾಡುತ್ತಿದೆ.

ಈಗ ಪೋಕೋ M​3 ಸ್ಮಾರ್ಟ್ಫೋನ್ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಲಭ್ಯವಿದೆ. ಹೊಸದಾಗಿ ಬಿಡುಗಡೆ ಆದ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯಕ್ಕೆ ಕೇವಲ 10,499 ರೂ. ಆಗಿದೆ. 6GB RAM ಮತ್ತು 64GB ಸ್ಟೋರಜ್ ಆಯ್ಕೆಗೆ 11,499 ರೂ. ಹಾಗೂ 6GB RAM – 128GB ಸ್ಟೋರೆಜ್ಗೆ 12,499 ರೂ. ಇದೆ. ಪ್ರಸಿದ್ಧ ಕಾಮರ್ಸ್ತಾಣವಾದ ಫ್ಲಿಪ್ಕಾರ್ಟ್​​ನಲ್ಲಿ ಸ್ಮಾರ್ಟ್​​ಫೋನ್ ಖರೀದಿಸಬಹುದು.

ಏನು ವಿಶೇಷತೆ?:

ಪೋಕೋ M3 ಸ್ಮಾರ್ಟ್​​ಫೋನ್ 6.53-ಇಂಚಿನ ಐಪಿಎಸ್ ಎಲ್ಸಿಡಿ ಪರದೆಯನ್ನು ಹೊಂದಿದ್ದು, 1080 × 2340 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಸ್ಮಾರ್ಟ್ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪರದೆಯನ್ನು ಹೊಂದಿದ್ದು, ಜತೆಗೆ ಸ್ಕ್ರೀನ್ ಪ್ರೊಟೆಕ್ಟರ್ಗಳನ್ನೂ ಸಹ ನೀಡುತ್ತಿದೆ. ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 662 ಚಿಪ್ಸೆಟ್ಬಲದಿಂದ ಕೂಡಿದೆ.

ವಿಶೇಷವಾಗಿ ತ್ರಿವಳಿ ರಿಯರ್ ಕ್ಯಾಮೆರಾ ಮತ್ತು ಸಿಂಗಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ 48 ಎಂಪಿ, ಎಫ್ / 1.8 ಮುಖ್ಯ ಕ್ಯಾಮೆರಾ ಸಂವೇದಕವನ್ನು ಪಿಡಿಎಎಫ್ ಹೊಂದಿದೆ. ಇದರೊಂದಿಗೆ 2 ಎಂಪಿ ಎಫ್ / 2.4 ಮ್ಯಾಕ್ರೋ ಸೆನ್ಸರ್ ಮತ್ತು 2 ಎಂಪಿ ಎಫ್ / 2.4 ಡೆಪ್ತ್ ಸೆನ್ಸಾರ್ ಇರುತ್ತದೆ. ಕ್ಯಾಮೆರಾ ಸೆಟಪ್ 30fps ನಲ್ಲಿ 1080p ವೀಡಿಯೊವನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ. ಮುಂಭಾಗದಲ್ಲಿ 8 ಎಂಪಿ ಎಫ್ / 2.1 ಕ್ಯಾಮೆರಾ ಇದ್ದು, ಮತ್ತೆ 10 ಎಫ್ಪಿ ವಿಡಿಯೋವನ್ನು 30 ಎಫ್ಪಿಎಸ್ನಲ್ಲಿ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ.

ಇನ್ನೂ 6000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಮತ್ತು 18W ಅತ್ಯಂತ ವೇಗದ ಚಾರ್ಜಿಂಗ್ ಬೆಂಬಲ ಸಹ ಇದೆ. ಬ್ಯಾಟರಿ ರಿವರ್ಸ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಏಕಕಾಲದಲ್ಲಿ ಎರಡೂ ಸಿಮ್ ಕಾರ್ಡ್​​ಗಳಿಗೆ ಡ್ಯುಯಲ್ಬ್ಯಾಂಡ್ ವೈಫೈ, ಡ್ಯುಯಲ್ VoLTE ಮತ್ತು ಡ್ಯುಯಲ್ VoWiFi ಬೆಂಬಲವನ್ನು ಸಹ ಹೊಂದಿದೆ.

ಜಿಯೋ ಗ್ರಾಹಕರೇ ಗಮನಿಸಿ: ಮೈ ಜಿಯೋ ಆ್ಯಪ್​ನಲ್ಲಿ ಸಿಗುತ್ತೆ ಫ್ರೀ ಡೇಟಾ, ಹೇಗೆ ಪಡೆಯುವುದು?

iPhone 13: ಐಫೋನ್ ಪ್ರಿಯರಿಗೆ ಭಾರೀ ನಿರಾಸೆ: ಐಫೋನ್ 13 ರಲ್ಲಿ ಇರಲ್ಲ ಈ ಆಯ್ಕೆ

(Poco M3 New 4GB RAM Variant Silently Debuts in India Price Specifications here)

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ